ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಿದ್ದಾಪುರದ ನೂತನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಮುರಳಿ ಎಂ. ಚಿನ್ನದ ಪದಕ ಗಳಿಸಿ ಅರುಣಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಟೇಕ್ವಾಂಡೋ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ರವರು ಮುರಳಿ ಎಂ.ಇವರಿಗೆ ತಮ್ಮ ಕಚೇರಿಯಲ್ಲಿ ಹೂಗುಚ್ಚ ನೀಡಿ ಅಭಿನಂದಿಸಿದರು.
ನೂತನ್ ಶಿಕ್ಷಣ ಸಂಸ್ಥೆಯ ರಾಘವೇಂದ್ರ, ಟೇಕ್ವಾಂಡೋ ತರಬೇತುದಾರ ರುದ್ರೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದು, ಮುರಳಿ ಎಂ.ಇವರಿಗೆ ಅಭಿನಂದಿಸಿದರು.

