ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಮರು ಪಾಕಿಸ್ತಾನ ಜಿಂದಾಬಾದ್ ಅಂದರೂ ಅರೆಸ್ಟ್ ಮಾಡಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಪಾಕಿಸ್ತಾನ ಧ್ವಜ ಹಾರಿಸಿದರೂ ಅರೆಸ್ಟ್ ಮಾಡಲ್ಲ, ಪ್ಯಾಲೆಸ್ತೀನ್ ಭಾವುಟ ಹಿಡಿದು ಮೆರವಣಿಗೆ ಮಾಡಿದರೂ ಅರೆಸ್ಟ್ ಮಾಡಲ್ಲ. ಆದರೆ ಹಿಂದೂಗಳು ಗಣೇಶೋತ್ಸವ ಮೆರವಣಿಗೆ ಮಾಡಿದರೂ ಅರೆಸ್ಟ್ ಮಾಡುತ್ತಾರೆ.
ಹನುಮ ಧ್ವಜ ಹಾರಿಸಿದರೂ ಅರೆಸ್ಟ್ ಮಾಡುತ್ತಾರೆ. ಹನುಮಾನ್ ಚಾಲೀಸಾ ಹಾಕಿದರೂ ಅರೆಸ್ಟ್, ಜೈ ಶ್ರೀ ರಾಮ್ ಎಂದರೂ ಅರೆಸ್ಟ್ ಮಾಡುತ್ತಾರೆ ಎಂದು ಅಶೋಕ್ ಟೀಕಿಸಿದರು.

