ಮುತ್ತಪ್ಪ ರೈ ಪುತ್ರನ ಕೊಲೆಗೆ ಯತ್ನ ಆರೋಪಿಗಳ ಬಂಧನಕ್ಕೆ ಆಗ್ರಹ

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ನಾಡು ನುಡಿ ನೆಲ ಜಲ ಭಾಷೆಗೆ ಹೋರಾಟ ಮಾಡಿ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ರವರ
ಪುತ್ರನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದವರನ್ನು ಕೊಡಲೆ ಬಂಧಿಸಬೇಕು ಎಂದು ದೊಡ್ಡಬಳ್ಳಾಪುರ ತಾಲ್ಲುಕು ಜಯಕರ್ನಾಟಕ ಪದಾಧಿಕಾರಿಗಳಿಂದ  ಪೋಲಿಸ್ ಉಪಾಧೀಕ್ಷಕ ರವರಿಗೆ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಜಯ ಕರ್ನಾಟಕ ತಾಲ್ಲುಕು ಅಧ್ಯಕ್ಷ  ಎಂ ಮುನೇಗೌಡ ಮಾತನಾಡಿ  ರಿಕಿ ರೈ ರವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿರುವುದು ಘೋರ ಕೃತ್ಯ ವಾಗಿದೆ ಮತ್ತೆ ಬೆಂಗಳೂರು 40-50 ವರ್ಷಗಳ ಇತಿಹಾಸ ಮರುಕಳಿಸುವಂತಿದೆ ಇಂತಹ ಕೃತ್ಯಕ್ಕೆ  ಬಾಗಿಯಾಗಿರುವವರನ್ನು ಕಾನೂನು ಕ್ರಮ ಜರುಗಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು.

  ಈ ಸಂದರ್ಭದಲ್ಲಿ ಜಯಕರ್ನಾಟಕ  ತಾಲ್ಲೂಕು  ಕಾರ್ಯದರ್ಶಿ ಜಿ.ಪಿ ಮೂರ್ತಿ. ಜಿಲ್ಲಾ ಉಪಾಧ್ಯಕ್ಷ ರಾದ ಶ್ರೀನಿವಾಸ ಮಂಜುನಾಥ್. ಆನಂದ, ಪದಾಧಿಕಾರಿಗಳಾದ ರಾಮ ಕುಮಾ‌ರ ರಾಜಣ್ಣ.ಮೋಹನ. ನರೇಂದ್ರ ಬಾಬು. ಮಧುಚಂದ್ರ. ಮುನಿರಾಜು ಜಗದೀಶ್.ಮಹೇಶ್.ಹೇಮರಾಜು.ಲೋಕೇಶ್.ಸಂದೀಪ್ ಚೇತನ್. ಶಿವು .ಯೋಗೇಶ್, ರಮೇಶ್ ಮಹಿಳಾ ಪದಾಧಿಕಾರಿಗಳು ಅದ ಪ್ರಮೀಳ.ಅರತಿ.ಲಲಿತಮ್ಮ. ವಿಜಯಮ್ಮ ಹಾಜರಿದ್ದರು.

 

 

Share This Article
error: Content is protected !!
";