ನನ್ನ ಹಾಗೂ ಯಡಿಯೂರಪ್ಪ ಸಂಬಂಧ ತಮ್ಮಂದಿರ ಸಂಬಂಧ

News Desk

 ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನನ್ನ ಹಾಗೂ ಯಡಿಯೂರಪ್ಪ ಅವರ ಸಂಬಂಧ ಅಣ್ಣ
, ತಮ್ಮಂದಿರ ಸಂಬಂಧ” ಎಂದು ಮಾಜಿ ಡಿಸಿಎಂ ಕೆ. ಎಸ್ . ಈಶ್ವರಪ್ಪ ಹೇಳಿದ್ದಾರೆ.

- Advertisement - 

ತಮ್ಮ ನಿವಾಸದಲ್ಲಿ ಬುಧವಾರ ರಾಷ್ಟ್ರಭಕ್ತ ಬಳಗ ಸಂಘಟನೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು, ಯಡಿಯೂರಪ್ಪ, ಶಂಕರಮೂರ್ತಿ, ಆನಂದರಾಯರು ಬಿಜೆಪಿ ಪಕ್ಷ ಬೆಳೆಯಲು ಕಾರಣರಾಗಿದ್ದೆವು ಎಂದು ಬಿಜೆಪಿ ಹೆಸರು ಹೇಳದೇ ಈಶ್ಪರಪ್ಪ ತಿಳಿಸಿದರು.

- Advertisement - 

ನಾನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾಗ ಯಡಿಯೂರಪ್ಪ ಅವರು ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದರು. ನನಗೆ ಯಡಿಯೂರಪ್ಪನವರು ಹಿರಿಯ ಅಣ್ಣ ಇದ್ದ ಹಾಗೆ. ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಅನೇಕ ಹಿರಿಯರು ಪತ್ರಿಕೆಗಳ ಮೂಲಕ ಶುಭಾಶಯ ಕೋರಿದ್ದರು. ಯಡಿಯೂರಪ್ಪ, ರಾಘವೇಂದ್ರ ಅವರು ನನಗೆ ಶುಭಾಶಯ ಕೋರಿದ್ದರು ಎಂದು ಹೇಳಿದರು.

ನಾನು ಯಡಿಯೂರಪ್ಪ ಅವರ ಮೊಮ್ಮಗನ ಮದುವೆಗೆ ಹೋಗಿದ್ದೆ. ಆದರೆ ಇದನ್ನು ರಾಜಕೀಯವಾಗಿ ಮಾತನಾಡುವವರು ದಡ್ಡರು. ಸ್ನೇಹವೇ ಬೇರೆ, ವಿಶ್ವಾಸವೇ ಬೇರೆ, ರಾಜಕೀಯವೇ ಬೇರೆ. ಈಗ ಚುನಾವಣೆ ನಡೆದರೂ ರಾಷ್ಟ್ರಭಕ್ತ ಸಂಘಟನೆ ಮುಂಚೂಣಿಯಲ್ಲಿ ಬರುತ್ತದೆ. ಅನೇಕರು ನಮ್ಮ ಸಂಘಟನೆ ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

- Advertisement - 

ರಾಷ್ಟ್ರಭಕ್ತ ಬಳಗದ ಒಂದಿಬ್ಬರನ್ನು ಕರೆದುಕೊಂಡು ಹೋದರೆ ರಾಷ್ಟ್ರಭಕ್ತ ಬಳಗ ಇರೋದೆ ಇಲ್ಲ ಅನ್ನೋದು ಸುಳ್ಳು. ಒಂದಿಬ್ಬರನ್ನು ಕರೆದುಕೊಂಡು ಹೋದರೆ, ಈಶ್ವರಪ್ಪ ಕೂಡ ಬಿಜೆಪಿಗೆ ಬರ್ತಾರೆ ಅನ್ನೋ ಮಾತು ಬರ್ತಿದೆ. ನಾನು ಬೀದರ್​ನಲ್ಲಿದ್ದಾಗ ಒಂದಿಬ್ಬರು ಪ್ರಮುಖರನ್ನು ಬಿಜೆಪಿಯವರು ಕರೆದುಕೊಂಡು ಹೋಗಿದ್ದಾರೆಂದು ನಮ್ಮವರು ಹೇಳಿದ್ರು. ಅಲ್ಲಿಗೆ ಹೋದವರು ಮತ್ತೆ ನಮ್ಮ ಸಂಘಟನೆಗೆ ವಾಪಾಸ್ ಮರಳಿದ್ದಾರೆ. ಬಹಳಷ್ಟು ಜನ ಮುಖಂಡರು ಇಂದು ರಾಷ್ಟ್ರಭಕ್ತ ಬಳಗಕ್ಕೆ ಬಂದು ಸೇರ್ಪಡೆಯಾಗಿರುವುದು ಬಹಳ ದೊಡ್ಡ ಶಕ್ತಿ ಬಂದಂತಾಗಿದೆ. ಇದು ಟ್ರೇಲರ್ ಅಷ್ಟೇ, ಪಿಚ್ಚರ್ ಅಭೀ ಬಾಕಿ ಹೈ ಸಂತಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿರುವವರು ಚುನಾವಣೆ ಬಂದಾಗ ನಿಮ್ಮನ್ನು ಗೆಲ್ಲಿಸುತ್ತೇವೆಂದು ಹೇಳಿದ್ದಾರೆ. ಪಕ್ಷ ಸಂಘಟನೆ ಮತ್ತು ಹೋರಾಟಕ್ಕೆ ನಮ್ಮ ಜೊತೆ ಸೇರಿಕೊಂಡಿದ್ದಾರೆ ಎಂದರು.
ಈ ವೇಳೆ ಬಿಜೆಪಿ ಮಹಿಳಾ ಕಾರ್ಪೋರೇಟರ್ ಸಂಗೀತ ಹಾಗೂ ಇತರರು ರಾಷ್ಟ್ರಭಕ್ತ ಬಳಗ ಸೇರ್ಪಡೆಯಾದರು.

 

Share This Article
error: Content is protected !!
";