ನನ್ನ ಜೀವನವೇ. ನನ್ನ ಸಂದೇಶ.

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಸರ್ವರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಮಹಾತ್ಮ ಗಾಂಧೀಜಿ ಅವರು ಸತ್ಯಾಗ್ರಹ ಹಾಗೂ ಅಹಿಂಸೆ ಎಂಬ ಶಕ್ತಿಯುತ ಆಯುಧಗಳಿಂದ ಭಾರತ ದೇಶದ ಸ್ವಾತಂತ್ರ್ಯ ಪಡೆಯಲು ಕಾರಣರಾದರು. ಗಾಂಧೀಜಿ ಅವರು ನ್ಯಾಯ=ನೀತಿಯ ತತ್ವ ಸಿದ್ಧಾಂತಗಳ ಆದರ್ಶಗಳಲ್ಲಿ ಬದುಕಿದರು. ನನ್ನ ಜೀವನವೇ ನನ್ನ ಸಂದೇಶ ಎಂದು ವಿಶ್ವಕ್ಕೆ ಸಾರಿದ ಮಹಾತ್ಮರು.

 ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮರ ಮುಂದಾಳತ್ವದ ವಿಚಾರಗಳನ್ನು ಸ್ಮರಣೆ ಮಾಡೋಣ. ಭಾರತ ದೇಶಕ್ಕೆ ಸ್ವಾತಂತ್ರದ  ಮುನ್ನುಡಿ ಬರೆದು ಪ್ರಜಾಪ್ರಭುತ್ವದ ಆಡಳಿತಕ್ಕೆ ಕಾರಣೀಭೂತರಾದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಮೌಲ್ಯಾಧಾರಿತ ಜೀವನವನ್ನು ತಿಳಿದುಕೊಳ್ಳೊಣ. 

ಮಹಾತ್ಮ ಗಾಂಧೀಜಿ ಅವರು ಗುಜರಾತಿನ ಪೋರ್ ಬಂದರ್ ನಲ್ಲಿ  ಅಕ್ಟೋಬರ್ 2 ರಂದು ಜನಿಸಿದರು. ಗಾಂಧೀಜಿ ಅವರು ಕಾನೂನು ವಿಭಾಗದಲ್ಲಿ ಉನ್ನತ ಶಿಕ್ಷಣದ ವಿದ್ಯಾಭ್ಯಾಸವನ್ನು ಇಂಗ್ಲೇಂಡ್ ದೇಶದ ಲಂಡನ್ ವಿಶ್ವವಿದ್ಯಾಲಯದಲ್ಲಿ ಪದವಿ  ಪಡೆದು  ಭಾರತಕ್ಕೆ ಹಿಂದಿರುಗಿದರು.

 ಗಾಂಧಿ ಅವರು ಭಾರತ ದೇಶಕ್ಕೆ ಹಿಂದಿರುಗಿದ ಆ ದಿನದಲ್ಲಿ ದೇಶದ ಸಂಪೂರ್ಣ ಆಡಳಿತದ ಸಾರ್ವಭೌಮತ್ವ  ಬ್ರಿಟಿಷ್ ಆಳ್ವಿಕೆಯ ಕೈಯಲ್ಲಿತ್ತು . ದೇಶದ ಸ್ವಾತಂತ್ರ್ಯದ ಸಲುವಾಗಿ ಗಾಂಧೀಜಿ ಅವರ ಮುಖಂಡತ್ವದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ದೇಶದಿಂದ ಮುಕ್ತ   ಗೊಳಿಸುವ ಕಾರಣಕ್ಕೆ ದೇಶದ ಜನ ಶಕ್ತಿಯನ್ನು  ಸಂಘಟಿಸುವ ಸಲುವಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿದ ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.

ಗಾಂಧೀಜಿ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಾಂತಿ, ಅಹಿಂಸೆ , ಪಾದಯಾತ್ರೆ , ಇವುಗಳೊಂದಿಗೆ ಉಪವಾಸ ಸತ್ಯಾಗ್ರಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು ಈ ಎಲ್ಲಾ ಹೋರಾಟಗಳು  ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದವು, ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಗಾಂಧೀಜಿ ಅವರನ್ನು ಸೆರೆಮನೆಯಲ್ಲಿ ಇಟ್ಟಿತ್ತು.

 ಮಹಾತ್ಮ ಗಾಂಧೀಜಿಯವರ  ಹೋರಾಟ ದೊಡ್ಡ ಮಟ್ಟದಲ್ಲಿ ಯಶಸ್ವಿ ಕಂಡಿರುವುದು ಸ್ವದೇಶಿ ಚಳುವಳಿ, ವಿದೇಶದಲ್ಲಿ ಉತ್ಪಾದಿಸುವ ವಸ್ತುಗಳನ್ನು ಭಾರತೀಯರು ದಿಕ್ಕರಿಸಿ ಭಾರತದಲ್ಲಿ ಉತ್ಪಾದಿಸುವ ವಸ್ತುಗಳನ್ನು ಮಾತ್ರ ಬಳಸುವಂತೆ ದೇಶದ ಜನತೆಗೆ ಕರೆನೀಡಿದರು,

ಈ ಹಿನ್ನೆಲೆಯ ಕಾರಣಕ್ಕೆ ದೇಶದಲ್ಲಿ  ಉತ್ಪಾದಿಸಿದ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಯಿತು , ದೇಶದ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ಬಟ್ಟೆ ನೇಯಲು  ಕರೆನೀಡಿದರು ಈ ಕೆಲಸದ ಮೂಲಕ ಮಹಿಳೆಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಂತಾಗಿದೆ.

  ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹೋರಾಟದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರ ಹತ್ಯಾಕಾಂಡ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ, ಈ ಹಿನ್ನೆಲೆಯಲ್ಲಿ ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯನ್ನು ಶಾಂತಿಯುತವಾಗಿ ದೇಶದಾದ್ಯಂತ  ಮಾಡಲು ದೇಶದ ಜನತೆಗೆ ಕರೆಕೊಟ್ಟರು,

  ಮಹಾತ್ಮರ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದ್ದು ದಂಡಿ  ಯಾತ್ರೆ ಎಂದು ಹೇಳಬಹುದು , ದೇಶದಲ್ಲಿ ಉಪ್ಪಿನ ಮೇಲೆ ಹೆಚ್ಚಿನ ಮಟ್ಟದಲ್ಲಿ ಬ್ರಿಟಿಷ್ ಸರ್ಕಾರ ತೆರಿಗೆ ವಿಧಿಸಿದ ಕಾರಣಕ್ಕೆ ಆ ದಿನಗಳಲ್ಲಿ ಉಪ್ಪಿನ ಬೆಲೆ ಹೆಚ್ಚಾಗುತ್ತದೆ, ದೇಶದ ಜನತೆ ಉಪ್ಪಿಗೆ ಹೆಚ್ಚಿನ ಮಟ್ಟದಲ್ಲಿ ಹಣ ಕೊಡುವುದರ ಬದಲು ದೇಶದ ಜನರೇ ಉಪ್ಪನ್ನು ಉತ್ಪಾದಿಸಿ ಎಂದು ಗಾಂಧೀಜಿ ಅವರು ಕರೆಕೊಟ್ಟರು.

ಗಾಂಧಿಜಿ ಅವರ ಈ ಮಹತ್ವದ ಸಲಹೆಗೆ ದೇಶದ ಸ್ವಾತಂತ್ರ್ಯ ಹೋರಾಟಗಾರರು  ದೊಡ್ಡ ಪ್ರಮಾಣದ ಜನತೆಯ ಗುಂಪಿನೊಂದಿಗೆ  ಸಮುದ್ರ ತೀರಕ್ಕೆ ಪಾದಯಾತ್ರೆಯಲ್ಲಿ ತೆರಳಿ ಉಪ್ಪನ್ನು ಉತ್ಪಾದಿಸುವ ಪ್ರತಿಭಟನೆ ನಡೆಸಿದರು , ಈ ಒಂದು ಹೋರಾಟ ಉಪ್ಪಿನ ಸತ್ಯಾಗ್ರಹ ಎಂಬ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧಿ ಪಡೆದಿತ್ತು , ಗಾಂಧೀಜಿ ಅವರು  ಸುಮಾರು 21 ದಿನಗಳ ಕಾಲ ಬ್ರಿಟಿಷ್ ದುರಾಡಳಿತವನ್ನು   ವಿರೋಧಿಸಿ ಉಪವಾಸ ಸತ್ಯಾಗ್ರಹ  ಮಾಡಿದರು,

 

 ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧಿವೇಶನಕ್ಕೆ ಗಾಂಧೀಜಿ ಅಧ್ಯಕ್ಷರು. ಬ್ರಿಟಿಷ್ ಕೆಂಪು ಕೋತಿಗಳೇ ಭಾರತ ಬಿಟ್ಟು ತೊಲಗಿ ಎಂಬ ದೊಡ್ಡ ಕೂಗಿನ   ಚಳುವಳಿ ಆರಂಭವಾಯಿತು ,

 ಈ  ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷ್ ಆಳ್ವಿಕೆ ಗಾಂಧೀಜಿಯನ್ನು ಬಂಧಿಸಿದರು, ಎರಡು ವರ್ಷಗಳಷ್ಟು  ಸಮಯ ಮಹಾತ್ಮರನ್ನು ಬಂಧನದಲ್ಲಿಟ್ಟರು.

 ಮಹಾತ್ಮರ ತತ್ವ ಸಿದ್ಧಾಂತಗಳನ್ನು  ಬ್ರಿಟಿಷರು ಎದುರಿಸಲು ಸಾಧ್ಯವಾಗದೆ 1947 ರ ಆಗಸ್ಟ್ 15ರ   ಮಧ್ಯರಾತ್ರಿ ಬ್ರಿಟಿಷ್ ಸರ್ಕಾರ ಭಾರತ ದೇಶಕ್ಕೆ ಸ್ವಾತಂತ್ರ್ಯ ನೀಡಿದೆ, ಮಹಾತ್ಮರ ಈ ಒಂದು ಅಹಿಂಸಾತ್ಮಕ ಚಳುವಳಿ ವಿಶ್ವಮಟ್ಟದಲ್ಲಿ ಸುಪ್ರಸಿದ್ದೀ ಪಡೆಯಿತು, ವಿಶ್ವದ ಮನುಕುಲದ ಇತಿಹಾಸದಲ್ಲಿ  ಮಹಾತ್ಮ ಎಂಬ ಗೌರವಕ್ಕೆ  ಪಾತ್ರರಾದರು ಒಬ್ಬರೇ=ಒಬ್ಬರು ಅವರೇ ನಮ್ಮ ದೇಶದ ಪಿತಾಮಹ  ಗಾಂಧೀಜಿ ಇದು ಕಥೆಯಲ್ಲ ದೇಶದ ಇತಿಹಾಸ. ಕಿರು ಲೇಖನ-ರಘು ಗೌಡ, 9916101265

 

- Advertisement -  - Advertisement - 
Share This Article
error: Content is protected !!
";