ಕ್ಷೇತ್ರದ ಜನರ ಹಿತಾಸಕ್ತಿ ಕಾಪಾಡುವುದು ನನ್ನ ಆದ್ಯ ಕರ್ತವ್ಯ-ಧೀರಜ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲೂಕಿನಲ್ಲಿ ದ್ವೇಷ ರಾಜಕಾರಣ ಪ್ರಾರಂಭವಾಗಿದೆ
  ಇದಕ್ಕೆ ತಾಜಾ ಉದಾಹರಣೆಯಂತೆ  ತಾಲೂಕಿಗೆ ಮಂಜೂರಾಗಿದ್ದ ಜಿಲ್ಲಾ ಆಸ್ಪತ್ರೆಯನ್ನು  ವರ್ಗಾವಣೆ ಮಾಡಲಾಗಿದೆ  ಎಂಬ ಆರೋಪಗಳು ತಾಲೂಕಿನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು   

 ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಶಾಸಕ ಧೀರಜ್ ಮುನಿರಾಜು ಪ್ರತಿಕ್ರಿಯೆ ನೀಡಿದ್ದಾರೆ , ಯಾವುದೇ ಕಾರಣಕ್ಕೂ ತಾಲೂಕಿಗೆ ಮಂಜೂರಾಗಿರುವ ಜಿಲ್ಲಾ ಆಸ್ಪತ್ರೆ  ಕೈ ತಪ್ಪಲ್ಲ ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ ಬೇಕು ಎನ್ನುವುದಕ್ಕೆ  ನಮ್ಮಲ್ಲಿ ಸಾಕಷ್ಟು ಅಂಶಗಳಿವೆ  ಈ ಕುರಿತಂತೆ ಇದೇ ತಿಂಗಳು 11ರಂದು ನಡೆಯುವ  ಸದನದಲ್ಲಿ  ಸವಿಸ್ತಾರವಾಗಿ ಆರೋಗ್ಯ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಿದ್ದೇನೆ. 

- Advertisement - 

  ತಾಲೂಕಿನ ಸಾರ್ವಜನಿಕರ  ಹಿತಾಸಕ್ತಿ ಕಾಪಾಡುವುದು ನನ್ನ ಆದ್ಯ ಕರ್ತವ್ಯ  ನನ್ನನ್ನು ನಂಬಿ ತಾಲೂಕಿನ ಜನತೆ  ಆಶೀರ್ವಾದ ಮಾಡಿದ್ದಾರೆ , ಅವರ ಸೇವೆಗೆಂದು  ಜಿಲ್ಲಾಸ್ಪತ್ರೆ  ಕರ್ತವ್ಯ ನಿರ್ವಹಿಸುವಂತೆ ಮಾಡಿಯೇ ತೀರುತ್ತೇನೆ ಎಂದರು.

  ಜಿಲ್ಲಾಸ್ಪತ್ರೆ ತಾಲೂಕಿಗೆ ತರಬೇಕೆಂಬ ಮುಖ್ಯ ಉದ್ದೇಶದಿಂದ  ಪ್ರಧಾನ ಮಂತ್ರಿ ಅಭಿಮ್( ABHIM)  (ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಮಿಷನ್ ) ಯೋಜನೆ ಅಡಿಯಲ್ಲಿ  ಕ್ರಿಟಿಕಲ್ ಕೇರ್ ಯೂನಿಟ್ (CCU ) ನಿರ್ಮಾಣಕ್ಕೆ ಮುಂದಾಗಿದ್ದೇವೆ, ಕಾರಣ ಕ್ರಿಟಿಕಲ್ ಕೇರ್ ಯೂನಿಟ್ ಗಳು  ಜಿಲ್ಲಾಸ್ಪತ್ರೆಯಲ್ಲಿ ಇರಬೇಕೆಂಬ ನಿಯಮವಿದೆ  ಅಂತೇಯೇ  ಪ್ರಧಾನ ಮಂತ್ರಿ ಅಭಿಮ್( ABHIM)  ಯೋಜನೆ ಅಡಿಯಲ್ಲಿ  ಜಿಲ್ಲಾಸ್ಪತ್ರೆ ಜಾಗದಲ್ಲಿ ಸಿಸಿಯು ನಿರ್ಮಾಣ ಮಾಡುವುದರಿಂದ ಜಿಲ್ಲಾಸ್ಪತ್ರೆಯನ್ನು ಯಾವುದೇ ಕಾರಣಕ್ಕೂ  ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ  ಹಾಗಾಗಿ ಕ್ರಿಟಿಕಲ್ ಕೇರ್ ಯೂನಿಟ್ ಅನ್ನು  ನಿರ್ಮಾಣ ಮಾಡುವ ಸಲುವಾಗಿ  ಕೇಂದ್ರದ  ಅನುದಾನಕ್ಕೆ ಮುಂದಾಗಿದ್ದೇವೆ ಎಂದರು.

- Advertisement - 

 ತಾಲೂಕಿನ ಜನತೆಯಲ್ಲಿ ಗೊಂದಲ ಬೇಡ  ತಾಯಿ ಮತ್ತು ಮಗು ಆಸ್ಪತ್ರೆ ( ತಾಲ್ಲೂಕು ಆಸ್ಪತ್ರೆ ) ಬೇರೆ  ಜಿಲ್ಲಾಸ್ಪತ್ರೆ ಬೇರೆ  ತಾಲೂಕಿನಾದ್ಯಂತ ಹರಿದಾಡುತ್ತಿರುವ  ಗಾಳಿ ಸುದ್ದಿಗೆ ಕಿವಿಗೊಡಬೇಡಿ  ಜಿಲ್ಲಾ ಆಸ್ಪತ್ರೆ ಕೈ ತಪ್ಪಿಲ್ಲ , ನಮ್ಮ ತಾಲೂಕಿಗೆ ಜಿಲ್ಲಾ ಆಸ್ಪತ್ರೆ ಬರುವುದು  ಖಂಡಿತಾ ಎಂದು  ತಿಳಿಸಿದ್ದಾರೆ

 

Share This Article
error: Content is protected !!
";