ರೈತರ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕರು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿ
, ಸಾಸಲಹಟ್ಟಿ ಮತ್ತು ಬಚ್ಚಬೋರನಹಟ್ಟಿ ಗ್ರಾಮಗಳಲ್ಲಿ ನಬಾರ್ಡ್ ನೆರವಿನಿಂದ ಸ್ಪೀಚ್ ಸಂಸ್ಥೆ ಚಿತ್ರದುರ್ಗರವರು ಅನುಷ್ಠಾನಗೊಳಿಸುತ್ತಿರುವ ಬುಡಕಟ್ಟು ಜನಾಂಗ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿರುವ ತೋಟಗಾರಿಕಾ ತಾಕುಗಳನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್) ಕರ್ನಾಟಕ ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಸುರೇಂದ್ರ ಬಾಬುರವರು ವೀಕ್ಷಿಸಿದರು,

ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡಿದ ಡಾ.ಸುರೇಂದ್ರ ಬಾಬುರವರು ಖುಷ್ಕಿ ಭೂಮಿಯಲ್ಲಿ ತೋಟಗಾರಿಕಾ ಸಸಿಗಳನ್ನು ಉತ್ತಮವಾಗಿ ಬೆಳೆಸಿಕೊಂಡಿರುವ ಎಲ್ಲಾ ರೈತರ  ಶ್ರಮ ಶ್ಲಾಘನೀಯ ಎಂದರಲ್ಲದೆ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದ್ದು ನಬಾರ್ಡ್ನ ಎಲ್ಲಾ ಯೋಜನೆಗಳಲ್ಲಿ ಶೇ.50ರಷ್ಟು ರೈತ ಮಹಿಳೆಯರು ಭಾಗವಹಿಸಿ ಅಭಿವೃದ್ಧಿಹೊಂದಬೇಕೆಂದರು.

- Advertisement - 

ಯೋಜನಾ ಪ್ರದೇಶದಲ್ಲಿ ಪ್ರತೀ ವರ್ಷವೂ ಬುಡಕಟ್ಟು ದಿನಾಚರಣೆ ಆಚರಿಸಬೇಕೆಂದರು. ಹಾಗೂ ಯೋಜನಾ ಪ್ರದೇಶದಲ್ಲಿ ರೈತ ಉತ್ಪಾದಕ ಕಂಪನಿ ಸ್ಥಾಪಿಸಲು ಸೂಚಿಸಿದರು.

ಸದರಿ ಕಾರ್ಯಕ್ರಮದಲ್ಲಿ ಸುಮಂತ್ ಸಾಹೂ, ಸಹಾಯಕ ಪ್ರಬಂಧಕರು, ವಿನಂತ್.ಕೆ, ಚಿತ್ರದುರ್ಗ ಜಿಲ್ಲಾ ಅಭಿವೃದ್ಧಿ ಪ್ರಬಂಧಕರು, ಡಾ. ಸಂಜಯ್. ಎಂ.ಟಿ, ಪ್ರಾಧ್ಯಾಪಕರು, ಜಿ. ಕೆ.ವಿ.ಕೆ. ಬೆಂಗಳೂರು, ಸಮಿತಿಯ ಅಧ್ಯಕ್ಷರಾದ ಈಶಣ್ಣ, ಸದಸ್ಯರಾದ ಪಾಪಯ್ಯ, ಪ್ರಹ್ಲಾದ, ಸಮಿತಿಯ ಸದಸ್ಯರು ಹಾಜರಿದ್ದರು. ಸ್ಪೀಚ್ ಸಂಸ್ಥೆಯ ಹೆಚ್.ಶೇಷಪ್ಪ, ಎಸ್.ಆರ್. ಸಂತೋಷ್ ರವರು ಉಪಸ್ಥಿತರಿದ್ದರು.

- Advertisement - 

 

Share This Article
error: Content is protected !!
";