ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಲ್ಲಾಡಿಹಳ್ಳಿಯ ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಪಿಎಡ್ ಪದವಿ ಪರೀಕ್ಷೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದು ಗೋಲ್ಡ್ ಮೆಡಲ್ ತನ್ನದಾಗಿಸಿಕೊಂಡಿರುವ ಕಲ್ಲುವಳ್ಳಿ ಭಾಗದ ಪ್ರತಿಭಾವಂತ ವಿದ್ಯಾರ್ಥಿನಿ ಬಡಗೊಲ್ಲರಹಟ್ಟಿ ನಿವಾಸಿ ಬಿ.ನಾಗವೇಣಿ ಇವರಿಗೆ ಕಾಲೇಜ್ ಆಡಳಿತ ಮಂಡಳಿ, ಗ್ರಾಮಸ್ಥರು, ಶಿಕ್ಷಕರು ಅಭಿನಂದಿಸಿದ್ದಾರೆ.
ಸಾಧಕಿ ನಾಗವೇಣಿ ಅವರು ಸಮೀಪದ ಯಲ್ಲದಕೆರೆ ಗ್ರಾಮದ ಶ್ರೀಜ್ಞಾನ ಜ್ಯೋತಿ ಪ್ರೌಢ ಶಾಲೆಯಲ್ಲಿ 10ನೇ ತರಗತಿ ತನಕ ಶಿಕ್ಷಣ ಮುಗಿಸಿ 2024-25 ನೇ ಸಾಲಿನಲ್ಲಿ ಬಿಪಿಇಡಿ ಪದವಿಗೆ ಸೇರ್ಪಡೆಯಾಗಿದ್ದರು.
ದಾವಣಗೆರೆ ವಿವಿಗೆ ಅತಿ ಹೆಚ್ಚಿನ ಅಂಕಗಳಿಸುವ ಮೂಲಕ ಪ್ರಥಮ ರ್ಯಾಂಕ್ ಪಡೆದು ಕೀರ್ತಿ ತಂದಿದ್ದಾರೆ ಎಂದು ಯಲ್ಲದಕೆರೆ ಶ್ರೀಜ್ಞಾನ ಜ್ಯೋತಿ ಪ್ರೌಢಯ ಶಿಕ್ಷಕ ಬಿ.ಜಿ ಮನೋಹರ್ ಅರ್ಹ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

