ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ. ಶೂ ಎಸೆಯಲು ಯತ್ನಿಸಿದ ಮನುವಾದ ಪೀಡಿತ ರೋಗಿಷ್ಟ ವಕೀಲನೊಬ್ಬನ ದುರ್ವತನೆ ನ್ಯಾಯ ದೇವತೆಗೆ ಮಾಡಿರುವ ಅಪಮಾನ ಖಂಡನೀಯ ಎಂದು ಆಲ್ ಇಂಡಿಯಾ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಂವಿಧಾನವನ್ನು ಗೌರವಿಸುವ ಹಾಗೂ ಪ್ರಜಾಪ್ರಭುತ್ವವಾದಿ ಮೌಲ್ಯಗಳಿಗೆ ಅಗೌರವ ನೀಡವವರುನ್ನು ಗರಿಷ್ಠ ಮಟ್ಟದ ಶಿಕ್ಷೆಯನ್ನು ವಿಧಿಸುವಂತೆ ರಾಷ್ಟ್ರಪತಿಗಳನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಒತ್ತಾಯುಸುತ್ತದೆ ಎಂದರು.
ಸಂವಿಧಾನವು ಜಾರಿಯಾಗಿ 75 ವರ್ಷಗಳನ್ನು ಕಂಡಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ದೇಶದಲ್ಲಿ ಇಂದಿಗೂ ಮನುವಾದದ ರೋಗದಿಂದ ನರಳುತ್ತಾ ಗುಣ ಮುಖರಾಗದಿರುವ ರೋಗಿಷ್ಟರನ್ನು ಕಂಡು ಆತಂಕವಾಗುತ್ತಿದೆ ಎಂದರಲ್ಲದೆ, ಮಧ್ಯಪ್ರದೇಶದ ಖುಜರಾಹೋದ ಜಾವರಿ ದೇವಾಲಯದಲ್ಲಿನ ವಿಷ್ಣು ಪ್ರತಿಮೆಯ ಪುನರ್ನಿರ್ಮಾಣಕ್ಕೆ ಸಂಬಧಿಸಿದಂತೆ ಈ ವಕೀಲನು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳು ವಜಾಗೊಳಿಸಿದ್ದೆ ಆತನ ದುರ್ವತನೆಗೆ ಕಾರಣ ಎನ್ನಲಾಗಿದೆ.
ಆದರೆ, ಅದು ನಿಜವಾದ ಕಾರಣ ವಾಗಿರುವುದಿಲ್ಲ. ದಲಿತ ಸಮುದಾಯಕ್ಕೆ ಸೇರಿದ ಒಂದು ಸಮರ್ಥ, ಅರ್ಹ ಮತ್ತು ಪ್ರತಿಭಾವಂತ ವ್ಯಕ್ತಿಯು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಪೀಠದಲ್ಲಿ ಕುಳಿತಿರುವುದು ಸನಾತನ ಧರ್ಮಕ್ಕೆ ಆಗುತ್ತಿರುವ ಅವಮಾನವೆಂದು ಈ ಅವಮಾನವನ್ನು ಹಿಂದೂಸ್ತಾನವು ಸಹಿಸುವುದಿಲ್ಲ ಎಂದು ಶಿಲಾಯುಗಕ್ಕೆ ಸೇರಿದ ರಾಕೇಶ್ ಕಿಶೋರ್ ಎಂಬ ಈ ವ್ಯಕ್ತಿಯು ನೀಡಿರುವ ಹೇಳಿಕೆಯೇ ನಿಜವಾದ ಕಾರಣವಾಗಿದೆ ಎಂದಿದ್ದಾರೆ ಎಂದು ಹೇಳಿದರು.
ಈತನ ಈ ದುರ್ವತನೆಗೆ ಉಗ್ರವಾದ ಶಿಕ್ಷೆಯೇ ವಿಧಿಸಬೇಕು ಎಂದು ಒತ್ತಾಯಿಸಿದರು.

