ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೃಷಿ ಬದುಕಿನಲ್ಲಿ ಹೈನುಗಾರಿಕೆಯ ಹಾಲು ಉತ್ಪಾದನೆಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದೆ. ಹಾಲಿನ ಗುಣಮಟ್ಟ ಹಾಗೂ ಉತ್ಪಾದನೆಗೆ ರಾಜ್ಯದ ರೈತರು ಹೆಚ್ಚಿನ ಮಾನ್ಯತೆ ನೀಡುತ್ತಿದ್ದಾರೆ.
ಈ ಕಾರಣಕ್ಕೆ ಹಾಲು ಒಕ್ಕೂಟದ ವ್ಯವಸ್ಥೆ ರಾಜ್ಯದಲ್ಲಿ ಬಲಿಷ್ಠವಾಗುತ್ತಿದೆ. ರಾಜ್ಯದ ಆಡಳಿತದಲ್ಲಿ ಯಾವುದೇ ಸರ್ಕಾರವಿರಲ್ಲಿ ಹಾಲು ಉತ್ಪಾದನೆಯ ಕೃಷಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ.
ಈ ಕಾರಣದಿಂದ ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದ ರೈತರ ಕಾಯಕವನ್ನು ಪ್ರೋತ್ಸಾಹಿಸಲು ಹಾಲಿನ ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ದೇಶದ ಇತರೇ ರಾಜ್ಯಗಳಿಗೆ ನಂದಿನಿ ಹಾಲು ಸೇರಿದಂತೆ ಹಾಲಿನಲ್ಲಿ ಉತ್ಪಾದಿಸುವ ಇತರೇ ಆಹಾರ ಪದಾರ್ಥಗಳ ಮಾರುಕಟ್ಟೆ ವಿಸ್ತರಣೆ ಮಾಡುತ್ತಿದೆ. ಇದೆ ತಿಂಗಳು ಅಕ್ಟೋಬರ್ 27 ಹಾಗೂ 28 ರಂದು ನಂದಿನಿ ಮಾರಾಟ ಮಳಿಗೆ ದೇಶದ ರಾಜಧಾನಿ ದಿಲ್ಲಿಯಲ್ಲಿ ಉದ್ಘಾಟನೆಯಾಗಲಿದೆ.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳು ದೆಹಲಿಯ ಮಾರುಕಟ್ಟೆಗೆ ಸರಬರಾಜಾಗಲಿವೆ.
ಕೆಲವು ದಿನಗಳ ಹಿಂದೆ ಆಂದ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ನೀಡುವ ಪ್ರಸಾದದ ಲಡ್ಡು ಉತ್ಪಾದನೆಗೆ ಕರ್ನಾಟಕದ ನಂದಿನಿ ತುಪ್ಪ ಬಳಸಲು ತಿರುಪತಿ ತಿಮ್ಮಪ್ಪನ ಟ್ರಸ್ಟ್ ನಿರ್ಧರಿಸಿದೆ.
ಈ ವಿಚಾರವು ನಂದಿನಿ ಹಾಲು ಒಕ್ಕೂಟದ ಆಡಳಿತದ ನಿಷ್ಠೆಗೆ ಸಾಕ್ಷೀ ಗುಡ್ಡೆಯಾಗಿದೆ ಎಂದು ನಾನು ಈ ಮೂಲಕ ವಿವರಿಸುತ್ತಿರುವೆ. ಈ ಸುದ್ದಿ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯು ಹೌದು.
ಲೇಖನ:ರಘು ಗೌಡ 9916101265