ಚಂದ್ರವಳ್ಳಿ ನ್ಯೂಸ್, ರಾಮನಗರ:
ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಸುಳಿವನ್ನು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಹಾಲಿನ ದರ ಏರಿಕೆ ಮಾಡುತ್ತೇವೆ. ಏರಿಕೆ ಮಾಡಿದ ಹಣ ಸಂಪೂರ್ಣ ರೈತರಿಗೆ ಹೋಗಬೇಕು ಎಂದು ತಿಳಿಸಿದರು.
ಸರ್ಕಾರ ರೈತರ ಪರ, ಹಾಲು ಉತ್ಪಾದಕರ ಪರ, ದಲಿತರು, ಬಡವರ ಪರ ಇದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಹಾಲಿನ ದರವನ್ನು ಜೂನ್25 ರಂದು ಏರಿಕೆ ಮಾಡಿತ್ತು. ಪ್ರತಿ ಲೀಟರ್ಹಾಲಿನ ದರ 2 ರೂ. ಹೆಚ್ಚಿಸಿತ್ತು. ಪ್ರತಿ ಲೀಟರ್ಪ್ಯಾಕೆಟ್ಹಾಲಿನ ದರವನ್ನ 2 ರೂ. ಹಾಗೂ ಅರ್ಧ ಲೀಟರ್ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿತ್ತು. ಇದರ ಜೊತೆ ಪ್ಯಾಕೆಟ್ಗಾತ್ರ ದೊಡ್ಡದು ಮಾಡಿತ್ತು.
1,000 ಎಂಎಲ್(1 ಲೀಟರ್)ಪ್ಯಾಕೆಟ್ಹಾಲನ್ನು 1,050 ಎಂಎಲ್, ಅರ್ಧ ಲೀಟರ್ಪ್ಯಾಕೆಟ್ಅನ್ನು 550 ಎಂಎಲ್ಹಾಲು ಸಿಗುವಂತೆ ಗಾತ್ರ ದೊಡ್ಡದು ಮಾಡಲಾಗಿತ್ತು. ಈಗ ಮತ್ತೆ ಹಾಲಿನ ದರ ಹೆಚ್ಚಳ ಸೂಚನೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ.