ಕೂನಿಕೆರೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಂಜಾವಧೂತ ಸ್ವಾಮೀಜಿ ಭೇಟಿ: ನೂತನ ಮಂದಿರ ನಿರ್ಮಾಣದ ಪರಿಶೀಲನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ಕೂನಿಕೆರೆ ಗ್ರಾಮದ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವವು ಏಪ್ರಿಲ್ 10 ರಂದು ಬಹಳ ವೈಭವದಿಂದ ಹಾಗೂ ಯಶಸ್ವಿಯಾಗಿ ನೆರವೇರಿತು. ತುರ್ತು ಕಾರ್ಯಕ್ರಮಗಳ ನಿಮಿತ್ತ ರಥೋತ್ಸವದ ದಿನದಂದು ಆಗಮಿಸಲು ಸಾಧ್ಯವಾಗದಿದ್ದ ಸ್ಫಟಿಕಪುರಿ ಪಟ್ಟಾನಾಯಕನಹಳ್ಳಿಯ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿಗಳು, ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

​ದೇವಸ್ಥಾನ ನಿರ್ಮಾಣಕ್ಕೆ ಸ್ವಾಮೀಜಿ ಮಾರ್ಗದರ್ಶನ:
​ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು ನೂತನವಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ಕಾಮಗಾರಿಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯವರಿಗೆ ಮಾರ್ಗದರ್ಶನ ನೀಡಿದ ಅವರು, “ದೇವಸ್ಥಾನದ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಬೇಕು” ಎಂದು ಸೂಚಿಸಿದರು. ನಂತರ ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಹಾಗೂ ನಮನಗಳನ್ನು ಸಲ್ಲಿಸಿದರು.

- Advertisement - 

​​ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಜಿ. ಶಿವಾನಂದ, ​ಗುಡಿಗೌಡ್ರು ಲಿಂಗರಾಜು, ಪ್ರಧಾನ ಅರ್ಚಕರಾದ ನರಸಿಂಹಮೂರ್ತಿ, ​ಗೋವಿಂದರಾಯ, ಕೆ.ಜಿ. ಹನುಮಂತರಾಯ, ಚಿಕ್ಕೆಗೌಡ, ಈರಣ್ಣ, ​ಶಿವಣ್ಣ, ಬಿ.ಟಿ. ಗೌಡ, ಹೆಚ್. ಚಿದಾನಂದ, ಸುಶೀಲಮ್ಮ, ಮಹೇಶ್ ​ಹಾಗೂ ಸುತ್ತಮುತ್ತಲ ಗ್ರಾಮಗಳ ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡಿದ್ದರು.

​ಕೃತಜ್ಞತೆ ಸಲ್ಲಿಕೆ:
​ಜಾತ್ರಾ ಮಹೋತ್ಸವವು ಯಾವುದೇ ಅಡೆತಡೆಗಳಿಲ್ಲದೆ ಅತ್ಯಂತ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ, ಸಮಿತಿಯ ಅಧ್ಯಕ್ಷ ಜಿ. ಶಿವಾನಂದ ಅವರು ಸಹಕರಿಸಿದ ಎಲ್ಲಾ ಭಕ್ತಾದಿಗಳಿಗೆ, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಸಮಿತಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

- Advertisement - 

 

Share This Article
error: Content is protected !!
";