ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಿವಂಗತ ನರಸಿಂಹಯ್ಯ ನವರ ನುಡಿನಮನ ಕಾರ್ಯಕ್ರಮವು ಅಕ್ಟೋಬರ್ 24 ರಂದು ಬೆಳಗ್ಗೆ 11 ಗಂಟೆಗೆ ಕುಣಿಗಲ್ ಅರೆಶಂಕರ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮಿಗಳ ನೇತೃತ್ವದಲ್ಲಿ ಕುರುವೇಲ್ ತಿಮ್ಮನಹಳ್ಳಿಯಲ್ಲಿ ನೆಡೆಯಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಕುರುವೇಲ್ ತಿಮ್ಮನಹಳ್ಳಿ ಗ್ರಾಮದ ಹಿರಿಯರು, ರೈತರು ,ಶ್ರೀ ಆಂಜನೇಯ ಸ್ವಾಮಿ ದೇವಾಲಯದ ನಿರ್ಮಾಣ ಕರ್ತರು ,ಧಾರ್ಮಿಕ ಮುಖಂಡರಾದ ಶ್ರೀ ನರಸಿಂಹಯ್ಯನವರು
ಅಕ್ಟೋಬರ್ 14 2025 ರಂದು ತಮ್ಮ 92 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದು .ಅವರ ನುಡಿನಮನ ಕಾರ್ಯಕ್ರಮವನ್ನು ಅಕ್ಟೋಬರ್ 24 ರಂದು ಬೆಳಗ್ಗೆ 11 ಗಂಟೆಗೆ ಕುರುವೇಲ್ ತಿಮ್ಮನಹಳ್ಳಿ ಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ .
ದಿವಂಗತ ನರಸಿಂಹಯ್ಯ ನವರು ರಂಗಮ್ಮ ನರಸಿಂಹಯ್ಯ ಪ್ರತಿಷ್ಠಾನ ಹೆಸರಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

