ವಾಯು ಮಾಲಿನ್ಯ ತಡೆಗೆ ಎಲ್ಲರ ಸಹಕಾರ ಅಗತ್ಯ-ನರಸಿಂಹಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಾಯು ಮಾಲಿನ್ಯ ತಡೆಯುವಲ್ಲಿ ವಾಹನ ಮಾಲೀಕರು ಮತ್ತು ಚಾಲಕರ ಪಾತ್ರ ಅತ್ಯಂತ ಮಹತ್ವಾಗಿದೆ. ಹಿತಮಿತವಾಗಿ ಮತ್ತು ಜಾಗೃತವಾಗಿ ವಾಹನ ಓಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ ಹೇಮಂತ ಕುಮಾರ್ ಸಲಹೆ ನೀಡಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜ್ ಇವರ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೆಹಲಿಯಲ್ಲಿ ಕಂಡು ಬರುತ್ತಿರುವ ವಾಯು ಮಾಲಿನ್ಯ ಪರಿಸ್ಥಿತಿ ಚಿತ್ರದುರ್ಗದಲ್ಲೂ ಶೀಘ್ರ ಕಾಣಲು ಸಾಧ್ಯವಿದೆ ಎಂದು ಎಚ್ಚರಿಸಿದರು.
ಪರಿಸರ ಉಳಿದರೆ ನಾವು ನೀವೆಲ್ಲರೂ ಉಳಿಯಲು ಸಾಧ್ಯ. ಆದ್ದರಿಂದ ಪರಿಸರ ಮಾಲಿನ್ಯ ಮಾಡದ ಹಾಗೆ ಬದುಕು ಸಾಗಿಸಬೇಕು ಎಂದು ಅವರು ತಿಳಿಸಿದರು.

ಕೃಷಿ ಚಟುವಟಿಕೆಗಳಲ್ಲಿ ಹೊರಸೂಸುವ ಅತ್ಯಂತ ಅಪಾಯಕಾರಿ ಅನಿಲಗಳಲ್ಲಿ ಅಮೋನಿಯಾ ಕೂಡ ಒಂದು. ಕೀಟನಾಶಕಗಳು, ಕೀಟನಾಶಕಗಳು ಮತ್ತು ರಸಗೊಬ್ಬರಗಳು ವಾತಾವರಣದಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಹೊರಸೂಸುತ್ತವೆ ಮತ್ತು ಅದನ್ನು ಕಲುಷಿತಗೊಳಿಸುತ್ತವೆ. ಅದೇ ರೀತಿ ಕಾರ್ಖಾನೆಗಳು ಮತ್ತು ಕೈಗಾರಿಕೆಗಳು ಕಾರ್ಬನ್ ಮಾನಾಕ್ಸೈಡ್, ಸಾವಯವ ಸಂಯುಕ್ತಗಳು, ಹೈಡ್ರೋಕಾರ್ಬನ್ಗಳು ಮತ್ತು ರಾಸಾಯನಿಕಗಳ ಮುಖ್ಯ ಮೂಲವಾಗಿದೆ. ಇವುಗಳು ಗಾಳಿಯಲ್ಲಿ ಬಿಡುಗಡೆಯಾಗುತ್ತವೆ, ಅದರ ಗುಣಮಟ್ಟವನ್ನು ಕುಗ್ಗಿಸುತ್ತದೆ ಎಂದು ಅವರು ಎಚ್ಚರಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ಹೆಚ್.ಬಿ.ನರಸಿಂಹಮೂರ್ತಿ ಮಾತನಾಡಿ ದಿನೇ ದಿನೇ ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನಾವು ಪರಿಸರಿ ಶೋಷಣೆ ಮಾಡಿದರೆ ಪ್ರಕೃತಿ ಮತ್ತು ಪರಿಸರ ಮಾನವರ ವಿರುದ್ಧ ತಿರುಗಿ ಬೀಳುತ್ತಿವೆ. ಹಾಗಾಗಿ ಗುಡ್ಡ ಕುಸಿತ, ವಾಯುಬಾರ ಕುಸಿತು, ಭೂ ಕುಸಿತಗಳು ಸಂಭವಿಸುತ್ತಿವೆ ಎಂದು ಅವರು ಎಚ್ಚರಿಸಿದರು.

ವಾಯು ಮಾಲಿನ್ಯ ತಡೆಗೆ ಕೂಡಲೇ ಎಲ್ಲರೂ ಜಾಗೃತರಾಗುವುದು ಅವಶ್ಯವಾಗಿದೆ. ವಾಹನಗಳು ಉಂಟು ಮಾಡುವ ವಾಯು ಮಾಲಿನ್ಯದಿಂದ ಭೌತಿಕವಾಗಿ ಹಾಗೂ ಜೈವಿಕವಾಗಿ ಪರಿಸರ ಹಾಳಾಗುತ್ತದೆ. ವಾಯುಮಾಲಿನ್ಯ ತಡೆಗೆ ಗಿಡಮರ ಬೆಳೆಸಬೇಕಿದೆ.

ವಾಯು ಮಾಲಿನ್ಯವು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಕಾರಕವಾದ ಅನಿಲಗಳು, ಕಣಗಳು, ಜೈವಿಕ ಅಣುಗಳು ಮುಂತಾದ ಮಾಲಿನ್ಯಕಾರಕಗಳನ್ನು ಗಾಳಿಯಲ್ಲಿ ಬಿಡುಗಡೆ ಮಾಡುವುದರಿಂದ ನಮ್ಮ ಆರೋಗ್ಯ ಮೇಲೆ ದುಷ್ಪರಿಣಾ ಬೀರುತ್ತಿದೆ. ಮಾನವರಲ್ಲಿ ಉಸಿರಾಟ ತೊಂದರೆ, ಆಹಾರದ ಗುಣಮಟ್ಟ ಕ್ಷೀಣಿಸುವುದು ಸೇರಿದಂತೆ ಮನುಕುಲಕ್ಕೆ ಅಪಾಯ ತರಲಿದೆ ಆದ್ದರಿಂದ ಭವಿಷ್ಯದ ದೃಷ್ಟಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ ಎಂದು ಅವರು ಎಚ್ಚರಿಸಿದರು.

ವಾಯು ಮಾಲಿನ್ಯವು ಗಾಳಿಯಲ್ಲಿನ ಯಾವುದೇ ಭೌತಿಕ, ರಾಸಾಯನಿಕ ಅಥವಾ ಜೈವಿಕ ಬದಲಾವಣೆಯನ್ನು ಸೂಚಿಸುತ್ತದೆ. ಹಾನಿಕಾರಕ ಅನಿಲಗಳು, ಧೂಳು ಮತ್ತು ಹೊಗೆಯಿಂದ ಗಾಳಿಯ ಮಾಲಿನ್ಯವು ಸಸ್ಯಗಳು, ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದರು.

ವಾತಾವರಣದಲ್ಲಿ ನಿರ್ದಿಷ್ಟ ಶೇಕಡಾವಾರು ಅನಿಲಗಳಿವೆ. ಈ ಅನಿಲಗಳ ಸಂಯೋಜನೆಯಲ್ಲಿ ಹೆಚ್ಚಳ ಅಥವಾ ಇಳಿಕೆ ಬದುಕುಳಿಯಲು ಹಾನಿಕಾರಕವಾಗಿದೆ. ಅನಿಲ ಸಂಯೋಜನೆಯಲ್ಲಿನ ಈ ಅಸಮತೋಲನವು ಭೂಮಿಯ ಜಾಗತಿಕ ತಾಪಮಾನದಲ್ಲಿ ಹೆಚ್ಚಳ ಆಗಲಿದೆ ಎಂದು ಪ್ರಾಂಶುಪಾಲರು ಎಚ್ಚರಿಸಿದರು.

ವಾಹನ ನಿರೀಕ್ಷಕ ಪಿ.ಎಂ.ಪ್ರಕಾಶ್ ಮಾತನಾಡಿ, ಅಗತ್ಯಕ್ಕೆ ತಕ್ಕಂತೆ ವಾಹನಗಳ ಬಳಕೆ ಮಾಡೊಣ. ಜತೆಗೆ ವಾಹನ ಕೂಡಾ ಪರಿಸರಕ್ಕೆ ಹಾನಿ ಮಾಡದ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ವಾಯು ಮಾಲಿನ್ಯವು ಅನೇಕ ರೀತಿಯ ಮಾಲಿನ್ಯಕಾರಕಗಳನ್ನು ಉಂಟು ಮಾಡಲಿದೆ. ಕಾರ್ಖಾನೆಗಳಿಂದ ಹೊರಸೂಸುವ ಸಲ್ಫರ್-ಡಯಾಕ್ಸೈಡ್, ಹೊಗೆ ಮತ್ತು ಮಂಜಿನ ಮಿಶ್ರಣದಿಂದ ರೂಪುಗೊಂಡ ಹೊಗೆಯು ದ್ವಿತೀಯಕ ಮಾಲಿನ್ಯಕಾರಕವಾಗಿದೆ ಎಂದು ಹೇಳಿದರು.

ಜೀಪು, ಟ್ರಕ್, ಕಾರು, ಬಸ್ಸು ಮುಂತಾದ ವಾಹನಗಳಿಂದ ಹೊರಸೂಸುವ ಅನಿಲಗಳು ಪರಿಸರವನ್ನು ಕಲುಷಿತಗೊಳಿಸುತ್ತವೆ. ಇವು ಹಸಿರುಮನೆ ಅನಿಲಗಳ ಪ್ರಮುಖ ಮೂಲಗಳಾಗಿವೆ ಮತ್ತು ವ್ಯಕ್ತಿಗಳಲ್ಲಿ ರೋಗಗಳಿಗೆ ಕಾರಣವಾಗುತ್ತವೆ ಎಂದು ಅವರು ಎಚ್ಚರಿಸಿದರು.

 ಉಪನ್ಯಾಸಕಿ ಕೆ.ಸಿ ಶೋಭಾ ಮಾತನಾಡಿ, ವಾಯು ಮಾಲಿನ್ಯವು ಮಾನವರಲ್ಲಿ ಹಲವಾರು ಉಸಿರಾಟದ ಅಸ್ವಸ್ಥತೆಗಳು ಮತ್ತು ಹೃದಯ ಕಾಯಿಲೆಗಳಿಗೆ ಕಾರಣವಾಗಿದೆ. ಕಳೆದ ಕೆಲವು ದಶಕಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಲುಷಿತ ಪ್ರದೇಶಗಳ ಬಳಿ ವಾಸಿಸುವ ಮಕ್ಕಳು ನ್ಯುಮೋನಿಯಾ ಮತ್ತು ಅಸ್ತಮಾಕ್ಕೆ ಹೆಚ್ಚು ಒಳಗಾಗುತ್ತಾರೆ. ವಾಯು ಮಾಲಿನ್ಯದ ನೇರ ಅಥವಾ ಪರೋಕ್ಷ ಪರಿಣಾಮಗಳಿಂದ ಪ್ರತಿ ವರ್ಷ ಅನೇಕ ಜನರು ಸಾಯುತ್ತಾರೆ ಎಂದು ಎಚ್ಚರಿಸಿದರು.

ಹಸಿರುಮನೆ ಅನಿಲಗಳ ಹೊರಸೂಸುವಿಕೆಯಿಂದಾಗಿ, ಗಾಳಿಯ ಅನಿಲ ಸಂಯೋಜನೆಯಲ್ಲಿ ಅಸಮತೋಲನವಿದೆ. ಇದು ಭೂಮಿಯ ತಾಪಮಾನದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಉಪನ್ಯಾಸಕಿ ಇಂದಿರಮ್ಮ, ಉಪನ್ಯಾಸಕ ರೆಹಮತ್ ವುಲ್ಲಾ, ಪತ್ರಕರ್ತ ಹರಿಯಬ್ಬೆ ಹೆಂಜಾರಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";