ಹಿರಿಯೂರು ಮುಖ್ಯ ರಸ್ತೆ ಕಾಮಗಾರಿ ಸಿಒಡಿ ತನಿಖೆಗೆ ವಹಿಸಲಿ-ನಾರಾಯಣಾಚಾರ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ಸಭೆಯ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಎಸ್.ಎಫ್.ಸಿ ವಿಶೇಷ ಅನ್ನದಾನದ ಯೇಜನೆಯಡಿ ಕಾಮಗಾರಿಗಳನ್ನು 12 ಕೋಟಿ ವೆಚ್ಚಗಳಲ್ಲಿ ಕೆ.ಆರ್.ಐ.ಡಿ.ಎಲ್ ಚ್ಳಳಕರೆ
2 ವಿಭಾಗಕ್ಕೆ ವಹಿಸಲಾಗಿದ್ದು ಇದರಲ್ಲಿ ಒಟ್ಟು 33 ಕಾಮಗಾರಿಗಳನ್ನ ಒಳಗೊಂಡಿದ್ದು ಇದರಲ್ಲಿ ಕ್ರಮ ಸಂಖ್ಯೆ 31-ರ ಪ್ರಕಾರ ಹಿರಿಯೂರು ನಗರದ ಗಾಂಧಿ ವೃತ್ತದಿಂದ ರಂಜಿತ್ ಹೋಟೆಲ್ ತನಕದ 1.5 ಕಿಲೋಮೀಟರ್ ಉದ್ದದ ರಸ್ತೆಗೆ ಮರು ಡಾಂಬರ್ ರಸ್ತೆ ಕಾಮಗಾರಿಗೆ 2 ಕೋಟಿ ಹಣ ಮೊಂಜೂರಾಗಿದ್ದು ಸುಸ್ಥಿತಿಯಲ್ಲಿರುವ ಡಾಂಬರ್ ಹಾಕುವ ಅಗತ್ಯ ಏನಿದೆ, ಇದೊಂದು ಲೂಟಿ ಕಾಮಗಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ಕಳೆದ 2024ರ ಮೇ ತಿಂಗಳಲ್ಲಿ ಗುತ್ತಿಗೆದಾರ ರಾಜಕುಮಾರ ನಾಯಕ ಎನ್ನುವವರಿಗೆ 4,29,558 ರೂ.ಗಳಿಗೆ ಮುಖ್ಯ ರಸ್ತೆ ಗಾಂಧಿ ವೃತ್ತದಿಂದ ರಂಜಿತ್ ಹೋಟೆಲ್ ವರೆಗೆ ಮತ್ತು ತೇರು ಮಲ್ಲೇಶ್ವರ ರಸ್ತೆಯ ತುಗ್ಗು ಗುಂಡಿ ಮುಚ್ಚಲು ಹಣ ಪಾವತಿ ಮಾಡಲಾಗಿದೆ.

- Advertisement - 

ಇದಲ್ಲದೆ ಕಳೆದ 2025ರ ಏಪ್ರಿಲ್ ತಿಂಗಳಲ್ಲಿ ಗುತ್ತಿಗೆದಾರ ಟಿ.ಚಂದ್ರಶೇಖರ್ ಎನ್ನುವವರಿಗೆ ಗಾಂಧಿ ವೃತ್ತದ ಸಮೀಪ ಇರುವ ಪೊಲೀಸ್ ಠಾಣೆ ಮುಂಭಾಗದ ಗುಂಡಿ ಮುಚ್ಚಲು 89,861 ರೂ.ಗಳನ್ನು ನೀಡಲಾಗಿದೆ. ಪರಿಸ್ಥಿತಿ ಹೀಗಿದ್ದರೂ ಮತ್ತೆ 2 ಕೋಟಿ ರೂ.ಗಳನ್ನು ಮುಖ್ಯ ರಸ್ತೆಯ ಡಾಂಬರೀಕರಣಕ್ಕಾಗಿ ಹಣ ಮೀಸಲಿಟ್ಟಿರುವುದು ಎಷ್ಟು ಸರಿ ಎಂದು ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಖಾರವಾಗಿ ಪ್ರಶ್ನಿಸಿದ್ದಾರೆ.

ಬಳ್ಳಾರಿ-ಚಳ್ಳಕೆರೆ-ಹುಳಿಯಾರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತ ಪಿಎನ್ ಸಿ ಕಂಪನಿ ವತಿಯಿಂದ ಮರು ಡಾಂಬರೀಕರಣ ಮಾಡಿದ್ದಾರೆ. ಆದರೆ ಈಗ ಲ್ಯಾಂಡ್ ಆರ್ಮಿಗೆ 2 ಕೋಟಿ ರೂ.ಗೆ ಮುಖ್ಯ ರಸ್ತೆಗೆ ಮರು ಡಾಂಬರೀಕರಣಕ್ಕೆ ಹಣ ನೀಡಿದ್ದು ಆ ಕಂಪನಿ ಕಾಮಗಾರಿ ನಿರ್ವಹಿಸಿರುವುದಿಲ್ಲ ಎಂದು ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಆರೋಪಿಸಿದ್ದಾರೆ.

- Advertisement - 

ಪ್ರಸ್ತುತ ಗಾಂಧಿ ವೃತ್ತದಿಂದ ಪೊಲೀಸ್ ಠಾಣೆ ತನಕ, ಹಾಗೇ ಮುಂದೆ ಸಾಗಿದರೆ ಸಿದ್ದೇಶ್ವರ ಸ್ಟೋರ್ಸ್ ಬಳಿಯ ಸುಮಾರು 40 ಅಡಿ ರಸ್ತೆ, ಇನ್ನೂ ಮುಂದೆ ಸಾಗಿದರೆ ಎಲ್ಐಸಿ ಕಚೇರಿಯಿಂದ ಸುಮಾರು 200 ಮೀಟರ್ ದೂರದಷ್ಟು ಯಾವುದೇ ಮರು ಡಾಂಬರೀಕರಣ ಮಾಡಿರುವುದಿಲ್ಲ, ಹಾಗಾಗಿ ಇಡೀ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಬೇಕು ಎಂದು ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಆಗ್ರಹ ಮಾಡಿದ್ದಾರೆ.

ಇಷ್ಟೇ ಅಲ್ಲದೆ ಯು.ಜಿ.ಡಿ ಕಾಮಗಾರಿಗೆ 15 ಕೋಟಿ 47,80,000 ರೂ.ಗಳನ್ನು ಡಿಪಾಸಿಟ್ ಮಾಡಲಾಗಿದೆ. ಯುಜಿಡಿ ಕಾಮಗಾರಿ ಮತ್ತು ಈಗ 2 ಕೋಟಿ ನೀಡಿರುವ ಅನುದಾನದ ಕಾಮಗಾರಿ ಕುರಿತು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2 ಕೋಟಿ ರೂ.ಗೆ ಹಿರಿಯೂರು ಮುಖ್ಯ ರಸ್ತೆಗೆ ಮರು ಡಾಂಬರೀಕರಣ ಮಾಡಲು ಅನುದಾನ ನೀಡಲಾಗಿತ್ತು. ಆದರೆ ಈ ಅನುದಾನದಿಂದ ಬೇರೆ ಕಾಮಗಾರಿ ನಿರ್ವಹಿಸಲು ಜಿಲ್ಲಾಧಿಕಾರಿಗಳು ಕಾಮಗಾರಿ ಬದಲಾಯಿಸಿದ್ದಾರೆ. 2 ಕೋಟಿ ರೂ.ಗಳ ಕಾಮಗಾರಿಯನ್ನು ನಾವು ನಿರ್ವಹಿಸಿಲ್ಲ.
ಶಿವಪ್ರಕಾಶ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೆಆರ್ ಐಡಿಎಲ್, ಚಳ್ಳಕೆರೆ ವಿಭಾಗ.

ಕೆಆರ್ ಐಡಿಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರರು ನಾವು ಕಾಮಗಾರಿ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಜಿಲ್ಲಾಧಿಕಾರಿಗಳ ಆದೇಶದಂತೆ ಈ ಹಣದಿಂದ ಬೇರೆ ಕಾಮಗಾರಿ ಮಾಡಿದ್ದರೆ ತೊಂದರೆ ಇಲ್ಲ.

ಹಾಗೆ ಪಿಎನ್ ಸಿ ಕಂಪನಿಯವರು ಉಚಿತವಾಗಿ ಮರು ಡಾಂಬರೀಕರಣ ಮಾಡಿಕೊಟ್ಟಿದ್ದಾರೆ ಎನ್ನುವ ಮಾಹಿತಿ ವ್ಯಾಪಕ ಹರಿದಾಡುತ್ತಿದ್ದು ಯಾವುದೇ ಕಾರಣಕ್ಕೂ ಈ ಕಾಮಗಾರಿಗೆ ಬೇರೆ ಬೇರೆ ಹೆಡ್ ಗಳಲ್ಲಿ ಬಿಲ್ ಪಾವತಿ ಆಗದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಎಚ್ಚರವಹಿಸಬೇಕಾಗಿದ್ದು ಸರ್ಕಾರದ ಅನುದಾನ ಪೋಲಾಗಬಾರದು ಎನ್ನುವ ಕಳಕಳಿ ಪತ್ರಿಕೆಯದಾಗಿದೆ.

 

 

 

 

Share This Article
error: Content is protected !!
";