ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಿಹಳ್ಳಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ನಾರಾಯಣಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಆನಂದಮ್ಮ ನವರು ಅವಿರೋಧವಾಗಿ ಆಯ್ಕೆ ನೂತನ ಅಧ್ಯಕ್ಷರು ಹಾಗು ಉಪಾಧ್ಯಕ್ಷರಿಗೆ ಬಾಶೆಟ್ಟಿಹಳ್ಳಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಬಾಶೆಟ್ಟಿಹಳ್ಳಿ ಹಿರಿಯ ರಾಜಕೀಯ ಮುಖಂಡರಾದ ಬಿ.ಕೃಷ್ಣಪ್ಪನವರು ಮಾತನಾಡಿ ಎಲ್ಲಾ ನಿರ್ದೇಶಕರು ಮತ್ತು ಅಧ್ಯಕ್ಷರು ಉಪಾಧ್ಯಕ್ಷರಿಗೆ ಕಿವಿಮಾತು ಹೇಳುತ್ತಾ ರಾಜಕೀಯ ಮರೆತು ಇನ್ನು ಮಂದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತೇ ಕಿವಿಮಾತು ಹೇಳಿದರು.
ಪ್ರೇಮ್ ಕುಮಾರ್ ಮಾತನಾಡಿ ನಮ್ಮ ವಿಎಸ್ ಎಸ್ ಎನ್ ಕಟ್ಟಡ ಬಹಳಷ್ಟು ಶಿಥಿಲಗೊಂಡಿದ್ದು ಆದಷ್ಟು ಬೇಗ ಕಟ್ಟಡ ನಿರ್ಮಾಣ ಮಾಡಬೇಕೆಂದು ಹೇಳಿದರು. ಡಾ. ವಿಜಯ್ ಕುಮಾರ್ ಮಾತನಾಡುತ್ತಾ ವಿ ಎಸ್ ಎಸ ಎನ್ ಕಟ್ಟಡಕ್ಕೆ ತಾವೇ ಮೊದಲ ದೇಣಿಗೆ ಕೊಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಾಶೆಟ್ಟಿಹಳ್ಳಿ ವ್ಯವಸಾಯೋತ್ಪನ್ನ ಸಹಕಾರ ಸಂಘದ. ಪಧಾದಿಕಾರಿಗಳು ಹಾಗು ಸದಸ್ಯರುಗಳು ಗ್ರಾಮಸ್ಥರು ಹಾಜರಿದ್ದರು.