ನರೇಗಾ ಹೆಸರು ಬದಲಾವಣೆ, ನ್ಯಾಷನಲ್ ಹೆರಾಲ್ಡ್ ಪ್ರಕರಣ, ಕೇಂದ್ರ ವಿರುದ್ಧ ಹೋರಾಟ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್‌ಪೈಲಟ್‌ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿದರು.
ಪ್ರಮುಖ ಅಂಶಗಳು:

ನರೇಗಾ ಹೆಸರು ಬದಲಾವಣೆ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ.

- Advertisement - 

ನರೇಗಾ ಹೆಸರಿನಿಂದ ಮಹಾತ್ಮ ಗಾಂಧೀಜಿಯವರ ಹೆಸರು ತೆಗೆದು ಹಾಗೂ ರಾಜ್ಯಗಳ ಮೇಲೆ ಹೆಚ್ಚಿನ ಹಣಕಾಸು ಒತ್ತಡವನ್ನು ಹೇರುವ ಮೂಲಕ ಮೂಲಕ ಕೇಂದ್ರ ಸರ್ಕಾರ ಯೋಜನೆಯನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ.  ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಿಜಿಸ್ಟರ್‌ಮಾಡಿಕೊಂಡವರಿಗೆ ದುಡ್ಡು ನೇರವಾಗಿ ಹೋಗುತ್ತಿತ್ತು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. 

ಗ್ರಾಮೀಣ ಭಾಗದ ಜನರಿಗೆ ಕೂಲಿ ಸಿಗುತ್ತಿತ್ತು, ಜೊತೆಗೆ ಮೂಲಸೌಕರ್ಯಗಳು ಅಭಿವೃದ್ಧಿ ಆಗುತ್ತಿದ್ದವು. ನೀವು ಬೇರೆ ಎಲ್ಲೂ ನೋಡುವುದು ಬೇಕಾಗಿಲ್ಲ, ನನ್ನ ಕನಕಪುರ ತಾಲೂಕು ನೋಡಿದರೆ ಸಾಕು. ಎಷ್ಟು ಅಭಿವೃದ್ಧಿ ಆಗಿದೆ, ಏನೇನು ಕೆಲಸ ಮಾಡಿದ್ದೀವಿ ಎಂದು ತಿಳಿಯುತ್ತದೆ ಎಂದು ಡಿಸಿಎಂ ಡಿಕೆಶಿ ಅವರು ಹೇಳಿದರು.  

- Advertisement - 

ಇದರ ಜೊತೆಗೆ ನ್ಯಾಷನಲ್‌ಹೆರಾಲ್ಡ್‌ ಪ್ರಕರಣದಲ್ಲೂ ಕೇಂದ್ರ ಸರ್ಕಾರ ಇಡಿಯನ್ನು ಬಳಸಿಕೊಂಡು ಸುಳ್ಳು ಕೇಸ್‌ಗಳನ್ನು ಹಾಕಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ತಿಳಿಸಿದರು.

 

 

Share This Article
error: Content is protected !!
";