ನರೇಗಾ ಸಿಬ್ಬಂದಿಗಳಿಗೆ ವೇತನ ಪಾವತಿ ಹಾಗೂ ಸೇವಾ ಭದ್ರತೆ ನೀಡಲು ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನರೇಗಾ ಸಿಬ್ಬಂದಿಗಳಿಗೆ ವೇತನ ಪಾವತಿ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಪ್ರತಿಭಟನೆ ಮಾಡಿದರು.

- Advertisement - 

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರ ವಲಸೆ ನಿಲ್ಲಿಸಿ ಸ್ವಗ್ರಾಮಗಳಲ್ಲೆ ಕೆಲಸ ಒದಗಿಸುವ ಮೂಲಕ ಕುಟುಂಬ ಆರ್ಥಿಕತೆ ಸಧೃಡ ಮಾಡುವ, ಅವರ ವೈಯಕ್ತಕ ಆಸ್ತಿಗಳ ಸುಸ್ಥಿರ ಮಾಡುವ ಮತ್ತು ಗ್ರಾಮಗಳ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಪಡಿಸುವ ಹಾಗೂ ಸಮುದಾಯ ಸ್ತಿರಾಸ್ಥಿಗಳ ಸೃಜಿಸಿ ಗ್ರಾಮೀಣ ಅಭಿವೃದ್ಧಿಗೆ ಮಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಜಿಲ್ಲೆಯಾದ್ಯಂತ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಸೇವಾ ಭದ್ರತೆ ನೀಡಬೇಕು ಎಂದರು ಒತ್ತಾಯಿಸಿದರು.

- Advertisement - 

 ಜಿಲ್ಲಾ ಮಟ್ಟದಲ್ಲಿ ಎಡಿಪಿಸಿ, ಡಿಎಂಐ ಸ್, ಡಿಐಇಸಿ, ಅಕೌಂಟ್ಸ್ ಮ್ಯಾನೇಜರ್, ತಾಲ್ಲೂಕು ಮಟ್ಟದಲ್ಲಿ ತಾಂತ್ರಿಕ ಸಂಯೋಜಕರು(ಸಿವಿಲ್ ಮತ್ತು ಅನುಷ್ಟಾನ ಇಲಾಖೆ), ತಾಲ್ಲೂಕು ಎಂ ಐ ಎಸ್ ಮತ್ತು ಐ ಇ ಸಿ, ಅಡ್ಮಿನ್ ಅಸಿಸ್ಟೆಂಟ್, ತಾಂತ್ರಿಕ ಸಹಾಯಕರು(ಸಿವಿಲ್ ಮತ್ತು ಅನುಷ್ಟಾನ ಇಲಾಖೆ), ಡಿ ಇ ಒ ಗಳು, ಗ್ರಾಮ ಕಾಯಕ ಮಿತ್ರ, ಬಿ ಎಫ್ ಟಿ ಗಳು ಕಳೆದ 15 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಸದರಿ ನೌಕರರಿಗೆ ಯಾವುದೇ ಸೇವಾ ಭದ್ರತೆಯಿರುವುದಿಲ್ಲ, ಹಾಗೇ ಕಳೆದ ಐದು ತಿಂಗಳಿನಿಂದ ವೇತನ ಪಾವತಿ ಆಗದಿರುವುದು ನೌಕರರ ಮತ್ತು ಅವರ ಕುಟುಂಬಗಳ ಜೀವನ ನಿರ್ವಹಣೆಯು ಬಹು ದುಸ್ತರವಾಗುತ್ತಿದೆ ಎಂದು ನೋವು ತೋಡಿಕೊಂಡರು.

ಪ್ರಯುಕ್ತ, ಬಾಕಿ ವೇತನ ತ್ವರಿತ ಪಾವತಿಸಿ ಮುಂದಿನ ದಿನಗಳಲ್ಲಿ ವೇತನ ಪಾವತಿಯಲ್ಲಿ ಯಾವುದೇ ವಿಳಂಬವಾಗದೆ ನಿಗದಿತ ಅವಧಿಯಲ್ಲಿ ಮಾಸಿಕ ವೇತನ ಮಾಡುವಂತೆ, ಹಾಗೂ ಕಳೆದ 15 ವರ್ಷಗಳಿಂದ ನರೇಗಾದಡಿ ಗ್ರಾಮೀಣ ಸೇವೆ ಸಲ್ಲಿಸುತ್ತಿರುವ ನೌಕರರು ಮತ್ತು ನೌಕರರ ಕುಟುಂಬಗಳು ಜೀವನ ನಿರ್ವಹಣೆಯ ಆರ್ಥಿಕತೆಯು ಇದರ ಮೇಲೆಯೇ ಅವಲಂಬಿತವಾಗಿದ್ದು, ಸದರಿ ನೌಕರರಿಗೆ  ಸೇವಾ ಭದ್ರತೆಯನ್ನು ಒದಗಿಸಲು ಸರ್ಕಾರಕ್ಕೆ ನಮ್ಮ ಪರವಾಗಿ ಶಿಫಾರಸ್ಸು ಮಾಡಲು ಆಗ್ರಹಿಸಿದರು.

- Advertisement - 

ಸಂಘದ ಅಧ್ಯಕ್ಷ  ಮಂಜುನಾಥ್, ಉಪಾಧ್ಯಕ್ಷ ಉಮೇಶ್, ಸಹನಾ, ಕಾರ್ಯದರ್ಶಿ ಶಿವಕುಮಾರ್, ರಾಜ್ಯ  ಘಟಕದ ಸದಸ್ಯರಾದ ಸಂತೋಷ್ ಕುಮಾರ್, ಸತ್ಯನಾರಾಯಣ, ಉಮಾಶಂಕರ್, ಕಾಂತರಾಜ್, ಅರ್ಜುನ್, ಜ್ಯೋತಿ.ಹೆಚ್.ಎಸ್. ಗೋವಿಂದ, ರೋಜಾ, ಭೂಪಾಲ್ ನಾಯಕ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Share This Article
error: Content is protected !!
";