ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ ನರೇಂದ್ರ ಮೋದಿ ಚಾಲನೆ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದ್ದಾರೆ.

ದೇಶದ 100 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಅನುಷ್ಠಾನಗೊಳಿಸಲು ಚಾಲನೆ ನೀಡಿದ್ದಾರೆ.

- Advertisement - 

ಈ ಮಹತ್ವದ ಯೋಜನೆಯು ಕೃಷಿ ಉತ್ಪನ್ನಗಳ ಹೆಚ್ಚಳ ಹಾಗೂ ವಿವಿಧ ದವಸ ಧಾನ್ಯ ಬೆಳೆಯುವಿಕೆ, ನೀರಾವರಿ ಸೌಲಭ್ಯ, ರೈತರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಹಣಕಾಸು ನೆರವು ನೀಡಲಿದ್ದು, ನಮ್ಮ ಮೋದಿಜೀ ಅವರ ಸರ್ಕಾರಕ್ಕೆ ದೇಶದ ಹಾಗೂ ನಾಡಿನ ರೈತರ ಶ್ರೇಯೋಭಿವೃದ್ಧಿಗಾಗಿ ಹೊಂದಿರುವ ಬದ್ಧತೆಯನ್ನು ಸಾಕ್ಷೀಕರಿಸಲಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರದಲ್ಲಿ ಯುಪಿಎ ಸರ್ಕಾರವು ಅಧಿಕಾರದಲ್ಲಿದ್ದಾಗ ಕೃಷಿ ವಲಯವನ್ನು  ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು ಎಂದು ಆರೋಪಿಸಿದ್ದಾರೆ. ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ವಿಶೇಷ ಕೃಷಿ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತನಾಡಿದರು. 2004 ರಿಂದ 2014 ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವು ಕೃಷಿ ವಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು.

- Advertisement - 

ಆದರೆ ಎನ್​​ಡಿಎ ಅಧಿಕಾರಕ್ಕೆ ಬಂದ ಬಳಿಕ ಕಳೆದ 11 ವರ್ಷಗಳಲ್ಲಿ ರೈತರನ್ನು ಬಲಪಡಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೋದಿ ಅವರು ತಿಳಿಸಿದರು.

ಕಳೆದ ತಿಂಗಳು ಜಿಎಸ್​ಟಿಯಲ್ಲಿ ಮಾಡಲಾಗಿರುವ ಸುಧಾರಣೆಯನ್ನು ಶ್ಲಾಘಿಷಿಸಿದರು. ಅವು ರೈತರಿಗೆ ಮತ್ತು ದೇಶದ ಗ್ರಾಮೀಣ ವಲಯಕ್ಕೆ ಮತ್ತಷ್ಟು ಪ್ರಯೋಜನವನ್ನು ನೀಡುತ್ತವೆ ಎಂದು ಹೇಳಿದರು.

ಆದಾಯವನ್ನು ಹೆಚ್ಚಿಸುವ ಮತ್ತು ಅವರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ತಮ್ಮ ಸರ್ಕಾರ ಹೊಂದಿದೆ.ಯುಪಿಎ ಸರ್ಕಾರದ 10 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಸಬ್ಸಿಡಿಗೆ ಹೋಲಿಸಿದರೆ ಎನ್‌ಡಿಎ ಕಳೆದ 10 ವರ್ಷಗಳಲ್ಲಿ ರಸಗೊಬ್ಬರಗಳಿಗೆ 13 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಿದೆ ಎಂದರು. ಹಿಂದಿನ ಸರ್ಕಾರಗಳು ಕೃಷಿಯ ಬಗ್ಗೆ ಹೊಂದಿದ್ದ ನಿರ್ಲಕ್ಷ್ಯ ಮನೋಭಾವವನ್ನು ನಾವು ಬದಲಾಯಿಸಿದ್ದೇವೆ.

ಬೀಜಗಳಿಂದ ಮಾರುಕಟ್ಟೆಯವರೆಗೆ ನಿಮ್ಮೆಲ್ಲ ರೈತರ ಅನುಕೂಲಕ್ಕಾಗಿ ನಾವು ಲೆಕ್ಕವಿಲ್ಲದಷ್ಟು ಸುಧಾರಣೆಗಳು ಮತ್ತು ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಫಲಿತಾಂಶಗಳು ಇಂದು ಸ್ಪಷ್ಟವಾಗಿವೆ ಎಂದು ಅವರು ಹೇಳಿದರು.

ಭಾರತದ ಕೃಷಿ ರಫ್ತು ಬಹುತೇಕ ದ್ವಿಗುಣಗೊಂಡಿದೆ, ಧಾನ್ಯಗಳು ಮತ್ತು ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯು ಕ್ರಮವಾಗಿ ಸುಮಾರು 90 ಮಿಲಿಯನ್ ಮೆಟ್ರಿಕ್ ಟನ್ ಮತ್ತು 64 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗಿದೆ.2014 ರಿಂದ ಭಾರತದ ಜೇನುತುಪ್ಪದ ಉತ್ಪಾದನೆಯು ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು. ಭಾರತ ಅಭಿವೃದ್ಧಿ ಹೊಂದಬೇಕಾದರೆ ಪ್ರತಿಯೊಂದು ಕ್ಷೇತ್ರದಲ್ಲೂ ನಿರಂತರವಾಗಿ ಸುಧಾರಣೆ ಕಾಣಬೇಕು ಎಂದು ಪ್ರಧಾನಿ ಮೋದಿ ಅವರು ಹೇಳಿದರು.

 

 

Share This Article
error: Content is protected !!
";