ನಶಾ ಮುಕ್ತ ಭಾರತ – ಮೋದಿ ಸರ್ಕಾರದ ಸಂಕಲ್ಪ 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಶಾ ಮುಕ್ತ ಭಾರತ – ಮೋದಿ ಸರ್ಕಾರದ ಸಂಕಲ್ಪ ನಮೋ ಯುವ ರನ್ ಮ್ಯಾರಥಾನ್ಗೆ ಚಾಲನೆ” ನೀಡಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

 ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ಜನ್ಮದಿನದ ಸೇವಾ ಪಾಕ್ಷಿಕ ಅಂಗವಾಗಿ ಶಿವಮೊಗ್ಗದಲ್ಲಿ ಯುವ ಮೋರ್ಚಾ ಆಯೋಜಿಸಿದ್ದ ನಶಾಮುಕ್ತ ಭಾರತಕ್ಕಾಗಿ‘ “ನಮೋ ಯುವ ರನ್ ಬೃಹತ್ ಮ್ಯಾರಥಾನ್” ಗೆ ಚಾಲನೆ ನೀಡಲಾಯಿತು.

- Advertisement - 

ಮಾದಕ ವಸ್ತುಗಳ ಬಳಕೆಯು ತೀವ್ರ ಸಾಮಾಜಿಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಶೆಯ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ನಮ್ಮ ಮೋದಿ ಜೀ ಅವರ ಸರ್ಕಾರವು ಮಾದಕ ದ್ರವ್ಯಗಳ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ ಅನುಸರಿಸುತ್ತಿದ್ದು, ದೇಶದ ಭವಿಷ್ಯದ ರೂವಾರಿಗಳಾಗಿರುವ ಯುವ ಸಮುದಾಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ವ್ಯಸನಗಳನ್ನು ತ್ಯಜಿಸಿ ಸ್ವಾಸ್ಥ್ಯ, ಸಮೃದ್ಧ ಹಾಗೂ ಆರೋಗ್ಯಯುತ ಸಮಾಜ ನಿರ್ಮಿಸುವ ಸಂಕಲ್ಪ ತೊಡಬೇಕೆಂಬ ಕರೆ ನೀಡಲಾಯಿತು.

ದೈಹಿಕ ಆರೋಗ್ಯಕ್ಕಾಗಿ ಪ್ರಧಾನಿ ಮೋದಿ ಜೀ ಅವರ ಕರೆಯಂತೆ #FitIndia ನಿರ್ಮಾಣದತ್ತ ರಾಷ್ಟ್ರ ಬಲಿಷ್ಟವಾಗುತ್ತಿರುವ ಈ ಹೊತ್ತಿನಲ್ಲಿ, ನಶಾಮುಕ್ತ ಭಾರತ ಧೈಯದೊಂದಿಗೆ ದೇಶದ 75 ನಗರಗಳಲ್ಲಿ ಇಂದು ನಮೋ ಯುವ ರನ್ ಮ್ಯಾರಥಾನ್ ನಡೆಯುತ್ತಿದ್ದು ಇದೊಂದು ದಾಖಲೆಯ ಅಭಿಯಾನವಾಗಲಿದೆ ಎಂದು ವಿಜಯೇಂದ್ರ ಹೇಳಿದರು.

- Advertisement - 

ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಶಾಸಕ ಚನ್ನಬಸಪ್ಪ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕರಾದ ಆರ್.ಕೆ.ಸಿದ್ದರಾಮಣ್ಣ, ಕುಮಾರ ಸ್ವಾಮಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಚಲನಚಿತ್ರ ಕಲಾವಿದೆ ಕು. ಕಾರುಣ್ಯ ರಾಮ್, ಗೌರಿಶಂಕರ್, ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್, ಜಿಲ್ಲಾಧ್ಯಕ್ಷ ಜಗದೀಶ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್, ಸ್ಥಳೀಯ ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತರು, ಶಿವಮೊಗ್ಗ ಜಿಲ್ಲೆಯ ಯುವ ಮಿತ್ರರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. 

 

 

 

Share This Article
error: Content is protected !!
";