ಹಿರಿಯ ಕಲಾವಿದೆ ಮಾಧವಿ ಪಾರೇಖ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ಕಲಾವಿದೆ ಶ್ರೀಮತಿ ಮಾಧವಿ ಪಾರೇಖ್ ಅವರಿಗೆ ಚಿತ್ರಕಲಾ ಪರಿಷತ್ ನ  ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

- Advertisement - 

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಈ ದಿನ ಜರುಗಿದ ಪ್ರೊ. ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಹಿರಿಯ ಕಲಾವಿದೆ ಶ್ರೀಮತಿ ಮಾಧವಿ ಪಾರೆಖ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದ್ದು, ಸಂತಸ ತರಿಸಿತು ಎಂದು ಪಾಟೀಲ್ ತಿಳಿಸಿದರು.

- Advertisement - 

ಮಾಧವಿ ಪಾರೇಕ್ ಅವರು ಓರ್ವ ಪ್ರಸಿದ್ಧ ಭಾರತೀಯ ಕಲಾವಿದೆ. ಅವರ ಚಿತ್ರಗಳು ಭಾರತದ ಹಳ್ಳಿಗಾಡಿನ ಜನಪದ ಶೈಲಿ ಹಾಗೂ ಪಾಶ್ಚಾತ್ಯ ತಂತ್ರಗಳನ್ನು ಅಳವಡಿಸಿಕೊಂಡು ಚಿತ್ರಗಳನ್ನು ರಚಿಸಿದ್ದಾರೆ. 

ಅವರ ಕಲಾಕೃತಿಗಳು ವಿಶಿಷ್ಟವಾಗಿದ್ದು, ವಿಶ್ವದ ಹಲವಾರು ದೇಶಗಳಲ್ಲಿ ಪ್ರದರ್ಶಿಸಲ್ಪಟ್ಟಿರುವುದಲ್ಲದೆ, ಬಹುಮಾನಿತವಾಗಿರುವುದು ಎಲ್ಲ ಭಾರತೀಯರೀಗೂ ಹೆಮ್ಮೆಯ ಸಂಗತಿ. ಮಾಧವಿ ಪಾರೆಖ್ ಅವರ ಸಾಧನೆಯು ಇಂದಿನ ಯುವ ಕಲಾವಿದರಿಗೆ ದಾರಿದೀಪವಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

- Advertisement - 

ಇಂದಿನ ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್, ಪ.ಸ.ಕುಮಾರ್, ಎಸ್. ಎನ್. ಅಗರವಾಲ್ ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಪಾಲ್ಗೊಂಡಿದ್ದರು.

 

 

Share This Article
error: Content is protected !!
";