ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2026ನೇ ಜನವರಿ 4 ರಿಂದ 11 ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯಲಿರುವ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಮಹಿಳಾ ತಂಡಕ್ಕೆ ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾoಗಣದಲ್ಲಿ ಕಳೆದ 15 ದಿನಗಳಿಂದ ನಡೆದ ತರಬೇತಿ ಶಿಬಿರದ ಮುಕ್ತಾಯ ಸಮಾರಂಭ ನಡೆಯಿತು.
ತರಬೇತಿ ಮುಗಿಸಿದ ವಾಲಿಬಾಲ್ ಆಟಗಾರರಿಗೆ ಡಾ. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಶುಭ ಹಾರೈಸಿದರು.
ಅನುಪಮ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎಸ್ ಭಾಸ್ಕರ್, ಹಿರಿಯ ವಾಲಿಬಾಲ್ ಆಟಗಾರರಾದ ಶ್ರೀಮತಿ ಶಶಿಕಲಾ, ರವೀಂದ್ರ ಡಿ, ಸುರೇಶ್, ಮಹಿಬುಲ್ಲಾ, ಶಿವಕುಮಾರ್, ನಿಶ್ಚಿತ್ ಮತ್ತಿತರರು ಇದ್ದರು.

