ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಜಾಗತೀಕರಣ, ನಾಗರೀಕರಣದ ಮಧ್ಯೆ ಸಕಲ ಜೀವರಾಶಿಗೆ ಅಗತ್ಯ ಮತ್ತು ಅನಿವಾರ್ಯವಾಗಿರುವ ಪ್ರಾಕೃತಿಕ ಸಂಪತ್ತನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರಾಜ್ಯ ಗಣಿಬಾದಿತ ಪ್ರದೇಶ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರು ತಿಳಿಸಿದರು.
ಮಲ್ಲಾಡಿಹಳ್ಳಿಯ ಶ್ರೀ ಅನಾಥ ಸೇವಾಶ್ರಮದ ಚಂದ್ರದ್ರೋಣ ಉದ್ಯಾನವನದಲ್ಲಿ ವನಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಮಲ್ಲಾಡಿಹಳ್ಳಿ ಮಲೆನಾಡಿನ ಅಂಚಿನಲ್ಲಿದ್ದು, ಇಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಈ ಪ್ರದೇಶದಲ್ಲಿ ಮಳೆ ಮತ್ತು ಅಂತರ್ಜಲ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಪ್ರತಿಯೊಬ್ಬರೂ ಮನೆಗೊಂದು ಸಸಿ ನೆಡುವ ಮೂಲಕ ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಅನಾಥ ಸೇವಾಶ್ರಮದಲ್ಲಿ ಬಹು ವರ್ಷಗಳಿಂದ ಕ್ರಿಯಾಶೀಲ ಚಟುವಟಿಕೆಗಳು ನಡೆಯುತ್ತಿರಲಿಲ್ಲ, ಮನಮೋಹೋತ್ಸವ ಸಂದರ್ಭದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಆಶ್ರಮದಲ್ಲಿ ಬಾಲ್ಯದಿಂದಲೂ ಒಡನಾಟ ಇಟ್ಟುಕೊಂಡಿದ್ದ ನನಗೆ ಇಲ್ಲಿನ ಸಂಬಂಧ ಭಾವನಾತ್ಮಕವಾಗಿದೆ.
ಆದ್ದರಿಂದ ಆಶ್ರಮದ ಅಭಿವೃದ್ಧಿ ಮತ್ತಷ್ಟು ಕಾಣಬೇಕಿದೆ ಈ ಕಾರ್ಯವನ್ನು ಶ್ರೀ ಮಾದರ ಚೆನ್ನಯ್ಯ ಸ್ವಾಮಿಜಿಗಳ ನೇತೃತ್ವದಲ್ಲಿ ನಡೆಯುವ ಭರವಸೆ ಇದೆ ಎಂದರು. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸ್ಥಳೀಯರು ಈ ವನಮಹೋತ್ಸವದಲ್ಲಿ ಭಾಗವಹಿಸಿದ್ದರು. ಆಶ್ರಮದ ನೂರಾರು ವಿದ್ಯಾರ್ಥಿಗಳು ಪ್ರಕೃತಿಯನ್ನು ಉಳಿಸಿ ಬೆಳೆಸುವ ಫಲಕಗಳನ್ನು ಹಿಡಿದು ಒಂದೊಂದು ಸಸಿ ನೆಡುವ ಮೂಲಕ ಪ್ರಕೃತಿ ಸಂಪತ್ತಿಗೆ ಬೆಂಬಲಿಸಿದರು.
ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ವನಮಹೋತ್ಸವದಲ್ಲಿ ಆಶ್ರಮದ ಕಾರ್ಯದರ್ಶಿ ಎಸ್ ಕೆ ಬಸವರಾಜನ್, ಗಣಿಬಾದಿತ ಪ್ರದೇಶ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ರಮೇಶ್ ಬಿದುರ್ಗ, ವಿಶ್ವನಾಥಹಳ್ಳಿ ಶಿವಕುಮಾರ್,ರಂಗಸ್ವಾಮಿ, ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಹಾಲೇಶ್, ವಾಲ್ಮೀಕಿ ಸಂಘದ ಸುರೇಗೌಡ್ರು,ಗೌರಿ ರಾಜಕುಮಾರ್,
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್, ಕಾಟಿಹಳ್ಳಿ ಶಿವಣ್ಣ, ಶರತ್ ಪಾಟೀಲ್, ಬಿ.ಜಿ.ಹಳ್ಳಿ ಜಯಣ್ಣ, ಪಾಂಡುರಂಗ ಸ್ವಾಮಿ, ಅಶೋಕ್, ಈಶ್ವರಪ್ಪ, ಪ್ರಶಾಂತ್, ಬೋರಣ್ಣ, ರವಿಮಲ್ಲಾಪುರ, ಕೆಂಗುಂಟೆ ಜಯ್ಯಣ್ಣ, ರುದ್ರೇಶ್ ನಾಯಕನಹಟ್ಟಿ, ಲಕ್ಷ್ಮಿಸಾಗರ ರಾಜಣ್ಣ, ಮದ್ದೇರು ಕುಬೇರಪ್ಪ, ಹಾಗೂ ಆಶ್ರಮದ ಟ್ರಸ್ಟಿಗಳಾದ ಶ್ರೀನಿವಾಸ್, ಬೋಧಕ ವರ್ಗದವರು ಭಾಗವಹಿಸಿದ್ದರು.