ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತದವರೆಗೆ ರಸ್ತೆ ಕಿರಿದಾಗಿರುವುದರಿಂದ ಯಾವುದೇ ಒತ್ತಡಕ್ಕೆ ಮಣಿಯದೆ ರಸ್ತೆ ಅಗಲೀಕರಣಗೊಳಿಸುವಂತೆ ನವ ಕ್ರಾಂತಿ ರಕ್ಷಣಾ ವೇದಿಕೆ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಗಾಂಧಿ ವೃತ್ತದಿಂದ ಹೊಳಲ್ಕೆರೆ ರಸ್ತೆ ಹಾಗೂ ಮೆದೇಹಳ್ಳಿ ರಸ್ತೆಯಲ್ಲಿ ದಿನನಿತ್ಯವೂ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ರಸ್ತೆ ಬದಿಯಲ್ಲಿಯೇ ಹೂಣ ಹಣ್ಣು ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳು ಸಂಚರಿಸುವುದು ಕಷ್ಟವಾಗಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್‌ನವರು ಪರದಾಡಬೇಕಾಗುತ್ತದೆ.
ವಾಹನಗಳಿಗೆ ಪಾರ್ಕಿಂಗ್ ಇಲ್ಲ. ಮಳೆ ಬಂದರೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿರುವುದಿಲ್ಲ. ಒಟ್ಟಾರೆ ಚಿತ್ರದುರ್ಗ ನಗರ ನಾನಾ ರೀತಿಯ ಸಮಸ್ಯೆಗಳನ್ನು ಹೆಣೆದುಕೊಂಡಿರುವುದರಿಂದ ತಕ್ಷಣದಿಂದಲೆ ರಸ್ತೆ ಅಗಲೀಕರಣವಾಗಬೇಕೆಂದು ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ನವ ಕ್ರಾಂತಿ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಮಹಾಂತೇಶ್, ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರದೀಪ್‌ಕುಮಾರ್, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಿ, ಜಿಲ್ಲಾಧ್ಯಕ್ಷ ಮೋಹನ್ ಸಿ.ಆರ್. ಆನಂದ್‌ಪೈಲೆಟ್, ವರುಣ್‌ಕುಮಾರ್, ವಿನಾಯಕ, ಸುನಿಲ್‌ಕುಮಾರ್, ಮನೋಜ್, ಮಂಜು, ಬಸವರಾಜ್, ಪ್ರದೀಪ್ ಹೆಚ್. ಮಂಜುನಾಥ್ ಟಿ.ಎನ್. ಪ್ರತಿಭಟನೆಯಲ್ಲಿದ್ದರು.