ನವರಾತ್ರಿ ಪ್ರಯುಕ್ತ ಪೇಟೆ ಮಾರಮ್ಮ ದೇವಿಗೆ ಕರಗದ ಅಲಂಕಾರ
ಚಂದ್ರವಳ್ಳಿ ನ್ಯೂಸ್, ದೊಡಬಳ್ಳಾಪುರ:
ನವರಾತ್ರಿ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳ ಅಂಗವಾಗಿ ನಿತ್ಯವೂ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತಿದೆ.
ನಗರದ ಕುಚ್ಚಪ್ಪನ ಪೇಟೆಯ ಮಾರಮ್ಮ ದೇವಿ ದೇವಾಲಯದಲ್ಲಿ ದೇವಿಗೆ ನವರಾತ್ರಿಯ ಮೂರನೇ ದಿನವಾದ ಬುಧವಾರ ಕರಗದ ಅಲಂಕಾರ ಮಾಡಲಾಗಿತ್ತು.
ಮಾರಮ್ಮ ದೇವಿಯ ಕರಗದ ಅಲಂಕಾರ ನಗರದ ಅಸಂಖ್ಯಾತ ಭಕ್ತರು ದೇವಿಯ ದರ್ಶನ ಮಾಡಿ ಶ್ರದ್ದಾ ಭಕ್ತಿ ಮೆರೆದಿದ್ದು ವಿಶೇಷವಾಗಿತ್ತು.

