ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಾಂಗ್ರೆಸ್ ಪಕ್ಷದ ಅಧಿನಾಯಕ, ಲೋಕಸಭಾ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಓಟ್‌ಚೋರ್ ಗದ್ದಿ ಚೋಡ್ ಅಭಿಯಾನವನ್ನು ರಾಷ್ಟ್ರದಾದ್ಯಂತ ನಡೆಸಲು ಉದ್ದೇಶಿಸಿದ್ದು ಕೆಪಿಸಿಸಿ ಘಟಕದ ಸೂಚನೆ ಮೇರೆಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಸರ್ಕಾರ ಮತಗಳ್ಳತನ ಮೇಲೆಯೇ ಅಧಿಕಾರಕ್ಕೆ ಬಂದಿದೆ ಎಂಬುವುದಕ್ಕೆ ಸೂಕ್ತ ನಿರ್ದಶನವನ್ನು ರಾಹುಲ್ ಗಾಂಧಿ ನೀಡಿದ್ಧಾರೆಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಸೋಮವಾರ ನಗರದ ವಿಶ್ವಕರ್ಮ ಕಲ್ಯಾಣಮಂಟಪದಲ್ಲಿ ಚಳ್ಳಕೆರೆ ಮತ್ತು ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಓಟ್‌ಚೋರ್ ಗದ್ದಿ ಚೋಡ್ ಅಭಿಯಾನ ಕಾರ್ಯಕ್ರಮವನ್ನು ಜ್ಯೋತಿಬೆಳಗುವ ಮೂಲಕ ಉದ್ಘಾಟಿಸಿಮಾತನಾಡಿದರು.
ಇತ್ತೀಚಿಗಷ್ಟೇ ರಾಹುಲ್ ಗಾಂಧಿಯವರು ಬೆಂಗಳೂರು ಗ್ರಾಮಾಂತರ ಪ್ರದೇಶದ ಮಹದೇವಪುರ ಹಾಗೂ ಆಳಂದ ವಿಧಾನಸಭಾ ಕ್ಷೇತ್ರ ಮತದಾರರ ಲೋಪದೋಷಗಳು ಕುರಿತು ಸೂಕ್ತ ತನಿಖೆ ನಡೆಸಿ ವಾಸ್ತಾಂಶವನ್ನು ದೇಶದ ಮುಂದಿಟ್ಟಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತಗಳನ್ನು ಕಳವು ಮಾಡುವ ಮೂಲಕ ಪಡೆದು ಅಧಿಕಾರ ನಡೆಸುತ್ತಿದೆ.
ಒಂದೇ ಮನೆಯಲ್ಲಿ ಇನ್ನೂರು, ಮುನ್ನೂರು ನಕಲಿಮತದಾರರನ್ನು ಸೃಷ್ಠಿಮಾಡಲಾಗಿದೆ. ದೇಶ ವ್ಯಾಪಿ ಬಿಜೆಪಿ ಈರೀತಿಯ ಮತಗಳಮೂಲಕ ಅಧಿಕಾರ ನಡೆಸುತ್ತಿದೆ. ಪ್ರಾಮಾಣಿಕವಾಗಿ ಜನರಿಂದ ಮತಪಡೆದು ಆಯ್ಕೆಯಾದ ಸರ್ಕಾರ ಕೇಂದ್ರದಲ್ಲಿಲ್ಲ. ಬದಲಾಗಿ ನಕಲಿ ಮತದಾರರ ಮತದಾನದ ಮೇಲೆಯೇ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದಿದೆ. ಮುಂಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕಪಾಠವನ್ನು ಮತದಾರು ಕಲಿಸುವರು ಎಂದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿ, ನಾಡಿನ ಬಡಜನರ ಉದ್ದಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನರಪರಯೋಜನೆಗಳ ಮೂಲಕ ಉತ್ತಮ ಆಡಳಿತ ನೀಡಿದ್ಧಾರೆ. ಸರ್ಕಾರ ಜಾರಿಗೆತಂದ ಐದು ಗ್ಯಾರಂಟಿಗಳು ಜನರ ಮನಸ್ಸನ್ನು ಗೆದ್ದಿವೆ. ರಾಜ್ಯಕೋಟಿ, ಕೋಟಿಜನರ ಆಶೀರ್ವಾದ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಂದಿನಿ ಗೌಡ ಮಾತನಾಡಿ, ಪ್ರಸ್ತುತ ಸರ್ಕಾರ ಮಹಿಳೆಗೆ ಹೆಚ್ಚುನೀಡಿದೆ. ಶಕ್ತಿಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಮುಂತಾದ ಯೋಜನೆಗಳು ಬಹುತೇಕ ಮಹಿಳೆಯರನ್ನು ಆಕರ್ಷಿಸಿವೆ. ಹೆಚ್ಚಿನ ಫಲಾನುಭವಿಗಳು ಮಹಿಳೆಯಾರೇ ಆಗಿದ್ಧಾರೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರ ಸಹಕಾರದಿಂದ ಮತ್ತೊಮ್ಮೆ ಅಧಿಕಾರದ ಮೆಟ್ಟಿಲೇರಲಿದೆ ಎಂದರು.
ಕಳೆದ ಅ.೭ರಂದು ಬೆಂಗಳೂರಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಚಳ್ಳಕೆರೆಯ ಹಿರಿಯ ರಂಗತಜ್ಞ, ಕಾಂಗ್ರೆಸ್ ಪಕ್ಷ ಜಿಲ್ಲಾ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿಯವರು ಮಹರ್ಷಿವಾಲ್ಮೀಕಿ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಗೌರವಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪಿ.ತಿಪ್ಪೇಸ್ವಾಮಿ, ಶಾಸಕರ ನಿರಂತರ ಪ್ರಯತ್ನದಿಂದ ನನಗೆ ಎರಡನೇ ಬಾರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರಕಿದೆ. ಈ ಪ್ರಶಸ್ತಿಯನ್ನು ನನಗೆ ಮಾರ್ಗದರ್ಶನ ಮಾಡಿದ ಹಿರಿಯರಿಗೆ ಅರ್ಪಿಸುತ್ತೇನೆ. ಯಾವುದೇ ಪ್ರಶಸ್ತಿ ಬರಲಿ, ಸನ್ಮಾನವಾಗಲಿ ನಾವು ಜನಪರ ನಿಲುವುಗಳಿಗೆ ಹೊಂದಿಕೊಂಡಿರುಬೇಕು. ಜನರ ಆಶೀರ್ವಾದ ನಮ್ಮ ಮೇಲಿರುವ ತನಕ ಇನ್ನೂ ಹೆಚ್ಚಿನ ಪ್ರಶಸ್ತಿಯನ್ನು ಪಡೆಯಬಹುದಾಗಿದೆ. ಮಹರ್ಷಿವಾಲ್ಮೀಕಿ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ನನ್ನ ಬದುಕು ಸಾರ್ಥಕತೆಯಿಂದ ತುಂಬಿದೆ ಎನಿಸಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷ ಶಿಲ್ಪ, ಉಪಾಧ್ಯಕ್ಷ ಕವಿತಾ, ಸದಸ್ಯರಾದ ಟಿ.ಮಲ್ಲಿಕಾರ್ಜುನ್, ವಿರೂಪಾಕ್ಷಪ್ಪ, ಬಿ.ಟಿ.ರಮೇಶ್ ಗೌಡ, ಕೆ.ವೀರಭದ್ರಪ್ಪ, ಚಳ್ಳಕೆರೆಯಪ್ಪ, ನಾಮನಿರ್ದೇಶಕಸದಸ್ಯರಾದ ನಟರಾಜ,

ನೇತಾಜಿಪ್ರಸನ್ನ, ವೀರಭದ್ರಪ್ಪ, ಅನ್ವರ್‌ಮಾಸ್ಟರ್, ಜಿಪಂ ಮಾಜಿಸದಸ್ಯ ಪ್ರಕಾಶ್‌ಮೂರ್ತಿ, ರವಿಕುಮಾರ್, ಜಿಲ್ಲಾಕೆಡಿಪಿ ನಾಮನಿರ್ದೇಶಕ ಸದಸ್ಯ ಓ.ರಂಗಸ್ವಾಮಿ, ತಾಲ್ಲೂಕು ಕೆಡಿಪಿ ಸದಸ್ಯರಾದ ರಮೇಶ್, ಸುರೇಶ್‌ಕುಮಾರ್, ಬಸವರಾಜು, ಮುಖಂಡರಾದ ನಾಗರಾಜು, ಆರ್.ಪ್ರಸನ್ನಕುಮಾರ್ ಮುಂತಾದವರು ಉಪಸ್ಥಿತರಿದ್ದರು.

