ತಾಯಿ ಮತ್ತು ಶಿಶು ಮರಣದ ಪ್ರಮಾಣ ತಗ್ಗಿಸಲು ಅಗತ್ಯ ಕ್ರಮ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಐಸಿಎಂರ್ ಮತ್ತು ಕೆ ಎಚ್ ಪಿ ಟಿ ಸೆಂಟ್ ಜಾನ್ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಲಪ್ಪನಹಳ್ಳಿ, ಹಿರಿಯೂರು ತಾಲ್ಲೂಕಿನಲ್ಲಿ ಒಂದು ದಿನದ ಕೌಶಲ್ಯಾಭಿವೃದ್ಧಿ ತರಬೇತಿ ನಡೆಸಲಾಯಿತು.

ದೀಪ ಬೆಳಗಿಸುವ ಮುಖೇನ ತರಬೇತಿಗೆ ಚಾಲನೆ ನೀಡಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ರಂಗಸ್ವಾಮಿ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ, ಹಾಗೂ ತೊಡಕಿನ ಗರ್ಭಿಣಿಯ ಪತ್ತೆ ಹಚ್ಚುವಿಕೆ, ಗರ್ಭಿಣಿಯರ ನೋಂದಣಿ, ತಾಯಿ ಮತ್ತು ಶಿಶು ಮರಣದ ಪ್ರಮಾಣ ಕಡಿಮೆ ಮಾಡುವ ಬಗ್ಗೆ ಹಾಗೂ ಪೌಷ್ಟಿಕ ಆಹಾರ ಸೇವನೆಯಿಂದ ತಾಯಿ ಮತ್ತು ಮಗು ವಿನ ಆರೋಗ್ಯವನ್ನ ಕಾಪಾಡಬಹುದೆಂದು ತಿಳಿಸಿದರು.

- Advertisement - 

ಹರ್ತಿಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರತ್ನಮಾಲ ಮಾತನಾಡಿ ಆರೋಗ್ಯವಂತ ತಾಯಿ ಮತ್ತು ಮಗು ಈ ದೇಶದ ಸಂಪತ್ತು. ಆದ್ದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಈ ತರಬೇತಿಯಲ್ಲಿ ICMR ತಂಡದ ಸದಸ್ಯರು ಮುಂಗಡ ಗರ್ಭಿಣಿಯರ ನೋಂದಣಿ, ಗಂಡಾತರ ಗರ್ಭಿಣಿಯರು, ಹೆರಿಗೆಯ ಪೂರ್ವ ಸಿದ್ಧತೆ, ತಡವಾಗಿ ಗರ್ಭಿಣಿಯರ ನೋಂದಣಿ, ಕಾಂಗರೂ ಮದರ್ ಕೇರ್, ಸ್ತನ್ಯ ಪಾನ, ಹಾಗೂ ವೈಯುಕ್ತಿಕ ಸ್ವಚ್ಛತೆಯ ಕುರಿತು ತರಬೇತಿಯನ್ನು ನೀಡಲಾಯಿತು.

- Advertisement - 

ಈ ತರಬೇತಿಯಲ್ಲಿ ICMR ತಂಡದ, ಉಮೇಶ್, ಎನ್.ಮೇಘ, ಕವನ, ಅಬ್ಬಾಸ್, ಗೋವಿಂದರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿ ನವೀನ ಕುಮಾರ್.ಸಿ, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,ಹಾಗೂ ಸಿಬ್ಬಂದಿಗಳು, ಭಾಗವಹಿಸಿದ್ದರು.

 

Share This Article
error: Content is protected !!
";