ವಿಎಸ್ಎಸ್ಎನ್ ಅಧ್ಯಕ್ಷರಾಗಿ ಚಂದ್ರಶೇಖರ, ಉಪಾಧ್ಯಕ್ಷರಾಗಿ ನೀಲವೇಣಿ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಧುರೆ ಹೋಬಳಿಯ ಚೆನ್ನಾದೇವಿ ಅಗ್ರಹಾರ ವ್ಯವಸಾಯ ಸೇವಾ ಸಹಕಾರ ಸಂಘ(ವಿಎಸ್ಎಸ್ ಎನ್) ಚುನಾವಣೆ ನಡೆದಿದ್ದು, ವಿಎಸ್ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಮದಗೊಂಡನಹಳ್ಳಿಯ ಎಂ.ಸಿ ಚಂದ್ರಶೇಖರ್  ಹಾಗೂ

ಉಪಾಧ್ಯಕ್ಷರಾಗಿ ನೀಲವೇಣಿ ಅವರು ಅವಿರೋದವಾಗಿ ಆಯ್ಕೆ ಆಗಿದ್ದಾರೆ. ಚನ್ನಾದೇವಿ ಅಗ್ರಹಾರ ವಿ ಎಸ್ ಎಸ್ ಎನ್ ನಲ್ಲಿ 10 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸಿದ್ದಾರೆ.

- Advertisement - 

 ನೂತನವಾಗಿ ವಿಎಸ್ಎಸ್ ಎನ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಂ.ಸಿ ಚಂದ್ರಶೇಖರ್ ಹಾಗೂ ನೀಲವೇಣಿ ರವರನ್ನು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಸೇರಿದಂತೆ ಇತರೆ ಗಣ್ಯರು ಅಭಿನಂದಿಸಿದ್ದಾರೆ.

 ಈ ವೇಳೆ ಎಪಿಎಂಸಿ‌ ಮಾಜಿ ಉಪಾಧ್ಯಕ್ಷರು ಹಾಗೂ ಉಪಾಧ್ಯಕ್ಷರು ವಿಎಸ್ ಎಸ್ ಎನ್ ಕನಸವಾಡಿ ಮಂಜುನಾಥ ಟಿ, ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ  ಸದಸ್ಯ ದೀಪು, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಸೋಮಶೇಖರ್, ರವಿ ಗೌಡ ಪ್ರಭಾಕರ್, ಆರ್ ವಿ ಗೌಡ ಪ್ರಭಾಕರ್, ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷರ ಗಿರೀಶ್ ಕುಮಾರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement - 

 

Share This Article
error: Content is protected !!
";