ಆಧುನಿಕ ಭಾರತದ ನಿರ್ಮಾತೃ ನೆಹರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀ ಪಂಡಿತ್ ಜವಾಹರಲಾಲ್ ನೆಹರು ಮಾಜಿ ಪ್ರಧಾನಿಗಳು ಇವರ  ಜಯಂತಿಯ ಈ ದಿನದಲ್ಲಿ ಅವರ ಮೌಲ್ಯಾಧಾರಿತ ವಿಚಾರವನ್ನು ಸ್ಮರಣೆ ಮಾಡುವ ಮೂಲಕ ಗೌರವವನ್ನು ಅರ್ಪಿಸೋಣ.

ಜವಾಹರಲಾಲ್ ನೆಹರು ಅವರು ನವೆಂಬರ್ 14ರ ಈ ದಿನದಂದು ಅಲಹಾಬಾದ್ ಪ್ರಾಂತ್ಯದಲ್ಲಿ ಪಂಡಿತ್ ಮನೆತನದಲ್ಲಿ ಜನಿಸಿದ್ದಾರೆ.  ಸ್ವಾತಂತ್ರ್ಯ ಪೂರ್ವದ ಆ ದಿನಮಾನಗಳಲ್ಲಿಯೇ ಉನ್ನತ ವಿದ್ಯಾಭ್ಯಾಸದ ಸಲುವಾಗಿ ವಿದೇಶಕ್ಕೆ ತೆರಳಿದ್ದರು. ವಿದ್ಯಾಭ್ಯಾಸ ಪೂರೈಸಿ ಭಾರತಕ್ಕೆ ಹಿಂದಿರುಗಿದ ನಂತರ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೆಸರಿನ ಸಂಘಟನೆಯಲ್ಲಿ ಹೋರಾಟಕ್ಕೆ ಧುಮುಕಿದರು.

ಮಹಾತ್ಮ ಗಾಂಧೀಜಿ ಅವರ ಮುಂದಾಳತ್ವದಲ್ಲಿ ನಡೆದ ನಿರಂತರ ಹೋರಾಟಗಳ ಫಲದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಪ್ರಜಾಪ್ರಭುತ್ವದ ಮುಖೇನ ನೆಹರು ಅವರು ದೇಶದ ಪ್ರಥಮ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸತತವಾಗಿ 17 ವರ್ಷಗಳ ಕಾಲ ಪ್ರಧಾನಿ ಸ್ಥಾನದಲ್ಲಿ ಆಡಳಿತವನ್ನು ನೀಡಿದ್ದಾರೆ.

ಇವರ ಆಡಳಿತದ ಅವಧಿಯಲ್ಲಿ ಶಿಕ್ಷಣ, ಕೃಷಿ, ಸಾರಿಗೆ, ಕೈಗಾರಿಕೆ, ರಕ್ಷಣೆ, ವೈದ್ಯಕೀಯ, ಕಾನೂನು, ವಿದೇಶಾಂಗನೀತಿ ಇನ್ನು ಹಲವಾರು ವಿಚಾರಗಳ ಅಭಿವೃದ್ಧಿಗೆ ಮಾನ್ಯತೆ ನೀಡಿದ್ದಾರೆ. ಆ ಕಾರಣಕ್ಕೆ ನೆಹರು ಅವರಿಗೆ ಅಧುನಿಕ ಭಾರತ ನಿರ್ಮಾತೃ ಎಂಬ ಪ್ರಖ್ಯಾತಿಯ ಬಿರುದು ಲಭಿಸಿದೆ.

ನೆಹರು ಅವರು ಮಕ್ಕಳ ಭವಿಷ್ಯದ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿದ್ದರು. ಇಂದಿನ ಮಕ್ಕಳೇ ನಾಳಿನ ಭವಿಷ್ಯದ ಪ್ರಜೆಗಳು ಎಂಬ ವಿಶ್ವಾಸವನ್ನು ಹೊಂದಿದ್ದರು. ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ನ್ಯಾಯ ಸಮ್ಮತವಾಗಿ ಬದುಕಿ ಬಾಳಬೇಕು ಎಂದು ವಿವರಿಸಿದರು.

ಪೋಷಕರ ಉತ್ತಮ ಆದರ್ಶಗಳ ಬದುಕು ಮಕ್ಕಳ ಭವಿಷ್ಯಕ್ಕೆ ಉತ್ತಮ ತಳಹದಿ ಎಂಬುದು ನೆಹರು ಮಾತುಗಳಲ್ಲಿ ಕೇಳಿಬಂದಿದೆ.

ನೆಹರು ಅವರಿಗೆ  ಭಾರತ ರತ್ನ  ಪ್ರಶಸ್ತಿ ಲಭಿಸಿದೆ. ನೆಹರು ಮಕ್ಕಳ ಬಗ್ಗೆ ಅಪಾರ ಪ್ರೀತಿ ಹಾಗೂ ಕಾಳಜಿ ಹೊಂದಿದ್ದರು ಆ ಕಾರಣಕ್ಕೆ ನೆಹರು ಅವರ ಜಯಂತಿಯನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ನಾಡಿನ ಸಮಸ್ತ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.

ಮಕ್ಕಳ ಭವಿಷ್ಯದ ಸಲುವಾಗಿ ಪೋಷಕರು ನ್ಯಾಯ. ಸತ್ಯ , ಕರುಣೆ ಈ ನೀತಿಗಳನ್ನು ಪಾಲನೆ ಮಾಡಬೇಕು. ಪೋಷಕರ ಬದುಕಿನ ನೀತಿಯನ್ನು ಮಕ್ಕಳು ಅನುಸರಿಸುತ್ತಾರೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಧ್ಯೇಯವನ್ನು ಪೋಷಕರು ಹೊಂದಿರಬೇಕು ಹಾಗೂ ಮಕ್ಕಳ ಇತರೇ ಸಾಧನೆಗಾಗಿ ಒಂದಿಷ್ಟು ಸಮಯವನ್ನು ಪೋಷಕರು ಮೀಸಲಿಡಬೇಕು ಅದು ಈಡೇರುವವರೆಗೂ ಪ್ರಯತ್ನ  ಸಕಾರಾತ್ಮಕವಾಗಿರಬೇಕು.
ಲೇಖನ-ರಘು ಗೌಡ
9916101265

- Advertisement -  - Advertisement - 
Share This Article
error: Content is protected !!
";