ಪ್ರೀ ವೆಡ್ಡಿಂಗ್ ಶೂಟಿಂಗ್ ತೆರಳಿದ್ದ ನವಜೋಡಿ ಅಪಘಾತದಲ್ಲಿ ಸಾವು

News Desk

ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಮದುವೆಗೆ ಮುನ್ನ ಪ್ರೀ ವೆಡ್ಡಿಂಗ್ ಶೂಟಿಂಗ್ ಗಾಗಿ ತೆರಳಿದ್ದು ನವಜೋಡಿಗಳು ಅಪಘಾತದಲ್ಲಿ ಸಾವನಪ್ಪಿರುವ ಘಟನೆ  ಕೊಪ್ಪಳ ಜಿಲ್ಲೆಯ ಗಂಗಾವತಿಯ ದಾಸನಾಳ ಸಮೀಪದಲ್ಲಿ ಜರುಗಿದೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನ ಪಂಪಾವನದಲ್ಲಿ ನವ ಜೋಡಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮುಗಿಸಿಕೊಂಡು ವಾಪಸ್ ಮನೆಗೆ ಬರುವಾಗ ಅಪಘಾತ ಸಂಭವಿಸಿದೆ.

- Advertisement - 

ವರ ಇರಕಲ್ ಗಡದ ಕರಿಯಪ್ಪ(26), ವಧು ಕವಿತಾ ಪವಾಡೆಪ್ಪ ಮಡಿವಾಳ(19) ಮೃತ ಜೋಡಿ ಆಗಿದೆ.
ವಧು ಕವಿತಾ ಅವರು
ಕಾರಟಗಿ ತಾಲೂಕಿನ ಮುಷ್ಠೂರು ಗ್ರಾಮದ ನಿವಾಸಿ. ಮುಷ್ಠೂರು ಗ್ರಾಮಕ್ಕೆ ಕವಿತಾಳನ್ನು ಬಿಟ್ಟು ಬರಲು ಕರಿಯಪ್ಪ ಬೈಕ್ ನಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಇದೇ ತಿಂಗಳ ಡಿಸೆಂಬರ್- 20 ಮತ್ತು 21 ರಂದು ಮದುವೆ ನಿಶ್ಚಯವಾಗಿತ್ತು.

ನೂರಾರು ಕನಸು ಕಂಡಿದ್ದ ಜೋಡಿಗೆ ಯಮನಂತೆ ಬಂದು ಲಾರಿ ಪ್ರಾಣತೆಗೆದಿದ್ದು, ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - 

 

 

Share This Article
error: Content is protected !!
";