ತುಂಗಭದ್ರಾ ಜಲಾಶಯಕ್ಕೆ ಜೂನ್ 2026ರ ಒಳಗೆ ಹೊಸ ಕ್ರಸ್ಟ್ ಗೇಟ್: ಉಪ ಮುಖ್ಯಮಂತ್ರಿ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಡಿಸೆಂಬರ್-2025ರ ಅಂತ್ಯದಲ್ಲಿ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣೆ ಮಟ್ಟ 1613 ಅಡಿಗೆ ಬಂದ ನಂತರ  ಜಲಾಶಯಕ್ಕೆ  ಹೊಸ ಕ್ರಸ್ಟ್ ಗೇಟುಗಳ ಅಳವಡಿಕೆ ಪ್ರಾರಂಭಿಸಲು ಹಾಗೂ ಜೂನ್-2026ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತಿಳಿಸಿದರು.

 ವಿಧಾನ ಪರಿಷತ್‍ನಲ್ಲಿಂದು ಶಾಸಕರಾದ ಬಸನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಗೇಟುಗಳ ಬದಲಾವಣೆ ಕಾಮಗಾರಿಯನ್ನು ತುಂಗಭದ್ರಾ ಮಂಡಳಿಯಿಂದ ಕೈಗೆತ್ತಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರದಿಂದ ಮುಂಗಡವಾಗಿ ರೂ. 10 ಕೋಟಿ ಅನುದಾನವನ್ನು ಮಂಡಳಿಗೆ ಒದಗಿಸಲಾಗಿದೆ.

- Advertisement - 

ತುಂಗಭದ್ರಾ ಅಣೆಕಟ್ಟಿನ Design &  Drawing ಗಳನ್ನು ಮುಖ್ಯ ಎಂಜಿನಿಯರ್, Central Design Organisation, ವಿಜಯವಾಡ, ಆಂಧ್ರ ಪ್ರದೇಶ ಇವರು, ಪರಿಶೀಲಿಸಿದ್ದು, Gates Design (NW & S) Directorate, CWC, New Delhi 2 ಅವರು  ದೃಡೀಕರಿಸುತ್ತಾರೆ.

ತುಂಗಭದ್ರಾ ಮಂಡಳಿಯು ಗೇಟ್ ನಂ.19ಕ್ಕೆ ಹೊಸ ಗೇಟನ್ನು ಅಳವಡಿಸುವಿಕೆ ಕಾಮಗಾರಿಯನ್ನು ರೂ.1.66 ಕೋಟಿ ಮೊತ್ತಕ್ಕೆಹಾಗೂ ಬಾಕಿ 32 ಗೇಟುಗಳನ್ನು ಬದಲಾಯಿಸುವ ಕಾಮಗಾರಿಯನ್ನು  ರೂ.34.48  ಕೋಟಿ ಮೊತ್ತಕ್ಕೆ  M/s Hardware Tools & Machinary Projects Pvt. Ltd, Ahmedabad ಇವರಿಗೆ ವಹಿಸಿರುತ್ತದೆ.

- Advertisement - 

ಪ್ರಸ್ತುತ  ಗೇಟ್ ಸಂಖ್ಯೆ 19 ಮತ್ತು ಉಳಿದ 32 ಗೇಟ್‍ಗಳ ಪೈಕಿ ಈವರೆಗೆ 14 ಗೇಟ್‍ಗಳ fabrication ಪೂರ್ಣಗೊಂಡಿದ್ದುಗೇಟುಗಳ dismantling ಕಾರ್ಯ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

Share This Article
error: Content is protected !!
";