ಆರೋಗ್ಯ ಇಲಾಖೆಗೆ ಅನಾರೋಗ್ಯ MRI, ಸಿಟಿ ಸ್ಕ್ಯಾನ್​ ಸೇವೆಗೆ ಹೊಸ ನಿಯಮ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಆರೋಗ್ಯ ಇಲಾಖೆಗೆ ಅನಾರೋಗ್ಯ ಹಿಡಿಸಿದ್ದ ಕರ್ನಾಟಕ ಕಾಂಗ್ರೆಸ್  ಸರ್ಕಾರ, ಇದೀಗ ಮತ್ತೊಂದು ತುಘಲಕ್ ನಿರ್ಧಾರ ಕೈಗೊಂಡು ಸರ್ಕಾರಿ ಆಸ್ಪತ್ರೆಗಳ ನಂಬಿರುವ ಬಡವರ ಕೈಗೆ ಚೊಂಬು ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದ್ದ MRI ಮತ್ತು ಸಿಟಿ ಸ್ಕ್ಯಾನ್​ ಸೇವೆಗೆ ಹೊಸ ನಿಯಮಗಳನ್ನು ಸೇರಿಸಿದ ಕಾರಣ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಂತಹ ಗಂಭೀರ ಸಮಸ್ಯೆ ಇದ್ದ ರೋಗಿಗಳು ಬಂದರೂ ಮೊದಲು ABRK ಅನುಮತಿ ಕಡ್ಡಾಯ ಮಾಡಲಾಗಿದೆ. ಆನ್​ಲೈನ್​ನಲ್ಲಿ ABRK ಅನುಮತಿಗೆ ಕನಿಷ್ಠ 2 ರಿಂದ 4 ಗಂಟೆ ಕಾಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಬಿಜೆಪಿ ಆತಂಕ ವ್ಯಕ್ತ ಪಡಿಸಿದೆ.

ವೈದ್ಯರು MRI ಮತ್ತು ಸಿಟಿ ಸ್ಕ್ಯಾನ್​ ತಪಾಸಣೆ ಸೂಚಿಸಿದರೂ ಸಕಾಲಕ್ಕೆ ಸ್ಕ್ಯಾನಿಂಗ್ ಆಗದೇ ರೋಗಿಗಳ ನರಳಾಡುತ್ತಿದ್ದಾರೆ. ಪ್ರಾಣ ಭಯದಿಂದ ಬಡ ರೋಗಿಗಳು ಸಾಲ ಮಾಡಿ ಹಣ ಕೊಟ್ಟು ಖಾಸಗಿಯಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿದ್ದಾರೆ. ಬಿಪಿಎಲ್​, ಅಂತ್ಯೋದಯ ಕಾರ್ಡ್ ಇದ್ದರೂ ಸಾವಿರಾರು ಹಣ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ಈ ಕೂಡಲೇ ಈ ನಿಯಮಗಳನ್ನು ರದ್ದುಗೊಳಿಸಿ ಬಡವರ ಹಿತಕಾಯುವ ಸಂವೇದನೆ ತೋರಿಸಬೇಕು ಎಂದು ಬಿಜೆಪಿ ಆಗ್ರಹ ಮಾಡಿದೆ.

 

 

 

- Advertisement -  - Advertisement - 
Share This Article
error: Content is protected !!
";