ಯುಗಾದಿ ನಂತರ ‘ಹೊಸ ತಡಕು’

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುಗಾದಿ ನಂತರ
ಹೊಸ ತಡಕು’: ಹಳ್ಳಿಯ ಮನಸಿನ ಮಾಂಸದ ಸಂಭ್ರಮ! ಯುಗಾದಿ ಹಬ್ಬ ಅಂದ್ರೆ ಕನ್ನಡಿಗರ ಪಾಲಿಗೆ ಹೊಸ ವರ್ಷದ ಶುಭಾರಂಭ. ಬೇವು-ಬೆಲ್ಲದ ಸಿಹಿ-ಕಹಿ ಜೀವನದ ಸಾರ ಹೇಳಿದ್ಮೇಲೆ, ಕೆಲ ದಿನಗಳ ಸಾತ್ವಿಕ ಆಹಾರ ನಿಯಮ ಪಾಲಿಸಿದ ಹಳ್ಳಿಯ ಜನಹಬ್ಬದ ಹೊತ್ತಿನಲ್ಲಿ ತಣ್ಣಗಾದ್ಮೇಲೆ ಮತ್ತೆ ಒಂದೇ ಮಾತು ಕೇಳಿಸ್ತಾರೆ:

ಈಗ ಶುರು ಆಗ್ತಾ ಇದೆ ಹೊಸ ತಡಕು!, ಈ ಹೊಸ ತಡಕುಅಂದ್ರೆ ಕೇವಲ ಮಾಂಸದ ಊಟ ಮಾತ್ರ ಅಲ್ಲ. ಇದು ಹಳ್ಳಿಯ ಸಂಸ್ಕೃತಿ, ಸ್ನೇಹ, ಒಗ್ಗಟ್ಟು all-in-one ಸಂಭ್ರಮ. ಹಬ್ಬದ ಉಪವಾಸ, ಸಾತ್ವಿಕ ಆಹಾರ ಮುಗಿಸಿ, ಮನೆಗಳಲ್ಲಿ ಮಾಂಸದ ಸಿದ್ಧತೆ ಆರಂಭವಾಗುತ್ತಾ ಹೋದರೆ, ಜನರು ಪ್ರೀತಿಯಿಂದ ಹೀಗೆ ಹೇಳುತ್ತಾರೆ.

- Advertisement - 

ಬೆಳಿಗ್ಗೆ ಬಜಾರ್ ಹೋದ ಗಂಡಸರು, ಮನೆ ಮುಂದೆ ಸೊಪ್ಪು, ಈರುಳ್ಳಿ, ಮಸಾಲೆ ಕತ್ತರಿಸುವ ಹೆಂಗಸರು, ಮಕ್ಕಳು ಇವತ್ತು ಯಾವ ಮಾಂಸ ಸಾರು?” ಎಂದು ಕುತೂಹಲದಿಂದ ಕೇಳೋದು

ಇವುಗಳೆಲ್ಲ ಹಳ್ಳಿಯ ನಿಜವಾದ ಜೀವಂತ ದೃಶ್ಯ!- ಸಾಮಾನ್ಯ ಮಾಂಸದ ಜೊತೆಗೆ, ಕೆಲವು ಮನೆಗಳಲ್ಲಿ ವಿಶೇಷವಾಗಿ ಗುಡ್ಡೆ ಮಾಂಸಸಿದ್ಧವಾಗುತ್ತಾ ಹೋದಾಗ, ಅದರ ಸುಗಂಧ, ರುಚಿ ಮತ್ತು ಚಟುವಟಿಕೆ ಹಳ್ಳಿಯ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತವೆ.

- Advertisement - 

ಒಂದು ಮನೆಯಲ್ಲಿ ಮಾತ್ರವಲ್ಲ, ಪಕ್ಕದ ಮನೆ, ಬೀದಿಯ ಗೆಳೆಯರು, ಬಂಧುಗಳು ಎಲ್ಲರೂ ಸೇರಿ ಬಾಡು ಊಟಮಾಡೋದು ಹಳ್ಳಿಯ ಸಂಪ್ರದಾಯ.

ಬಾ ಬಾಡೇಗಾಡಾಇವತ್ತು ಗುಡ್ಡೆಬಾಡು ಊಟ!. ಇಲ್ಲಿ ಅವಮಾನವಿಲ್ಲ; ಇದು ಸ್ನೇಹದ ಹಾಸ್ಯ, ಆತ್ಮೀಯತೆಯ ಕರೆ. ಮಡಿಕೆಯಲ್ಲಿ ಕುದಿಯುವ ಸಾರು, ಕಟ್ಟಿಗೆಯಲ್ಲಿ ಬೇಯೋ ತುಂಡುಗಳು, ಎಲ್ಲರೂ ಒಂದೇ ಮನಸ್ಸಿನಿಂದ ಸೇರಿ ತಿನ್ನುವ ಸಂಭ್ರಮ. ಹಳ್ಳಿಯ ನಿಜವಾದ ಸೊಗಡು.

ಇಂತಹ ಸಂದರ್ಭಗಳಲ್ಲಿ ಮಾತು, ನಗು, ಹಾಸ್ಯ ಎಲ್ಲವೂ ಒಂದೇ ಆಗಿ ಬೆರೆತು ಹೋಗುತ್ತವೆ. ಯಾರಿಗಾದರೂ ಹೆಚ್ಚು ಸಿಕ್ಕಿದ್ರೆ, ಏನ್ ರಾ, ಇಷ್ಟು ಬಾಡೇಗಾಡು!ಎಂದು ಚುಟುಕು, ಕಡಿಮೆ ಸಿಕ್ಕಿದ್ರೆ, ನೀನು ಗುಡ್ಡೆಬಾಡು ಆಗ್ಬಿಟ್ಟೀಯಾ?” ಎಂದು ಮಸ್ತಿ ಇವುಗಳೆಲ್ಲ ಪ್ರೀತಿ ತುಂಬಿದ ಮಾತುಗಳು.

ಹಳ್ಳಿ ಸಂಸ್ಕೃತಿಯಲ್ಲಿ, ಅತಿಥಿ-ಅಪರಿಚಿತ ಎಂಬ ಬೇಧವಿಲ್ಲ; ಯಾರು ಬಂದರೂ ತಮ್ಮವರೇ ಅನ್ನೋ ಮನಸ್ಸಿನಿಂದ, ಆತ್ಮೀಯವಾಗಿ ಊಟಕ್ಕೆ ಕೂಪಾಡೋದು ಹಳ್ಳಿಯ ಸಂಪ್ರದಾಯ.

ಇದು ಹಳ್ಳಿಯ ಒಗ್ಗಟ್ಟಿನ ನಿಜವಾದ ಗುರುತು, ಸಂಪ್ರದಾಯ, ಸಂತೋಷ. ಇತ್ತೀಚಿನ ನಗರೀಕರಣದ ಹೊಳೆ ಹಳ್ಳಿಗಳಿಗೂ ತಲುಪ್ತಾ ಇದ್ದರೂ, ಇಂತಹ ಸಂಪ್ರದಾಯಗಳು ಜೀವಂತವಾಗಿವೆ.

ಹೊಸ ತಲೆಮಾರಿಗೂ ಈ ಹೊಸ ತಡಕುಗಳ ಸಿಹಿ ನೆನಪುಗಳು, ಗುಡ್ಡೆ ಮಾಂಸದ ರುಚಿ, ಹಳ್ಳಿಯ ಸಂಸ್ಕೃತಿಯ ಮೌಲ್ಯ ತಿಳಿಸುತ್ತವೆ.

ಕೊನೆ ಮಾತು:
ಯುಗಾದಿ ಹೊಸ ವರ್ಷವನ್ನು ಶುರು ಮಾಡ್ತಾದರೂ
, ಹಳ್ಳಿಯ ಜೀವನದ ನಿಜವಾದ ರುಚಿ ಹೊಸ ತಡಕುಗಳಲ್ಲಿ ಸಿಗುತ್ತೆ. ಹಬ್ಬದ ಬಳಿಕವೂ ಖುಷಿ ಮುಂದುವರಿಯಬೇಕು ಅಂದ್ರೆ.. ಮಾಲೀಕರ ಜೀವನದ ಈ ಸಂಭ್ರಮ, ನಗು, ಸ್ನೇಹ ತುಂಬಿದ ಊಟ ಸಾಕು!.ಹಬ್ಬ ಮುಗಿದ್ರೂ ಸಂಭ್ರಮ ಮುಗಿಯೋದಿಲ್ಲಹೊಸ ತಡಕು ಶುರು ಆದ್ರೆ ಹಳ್ಳಿ ಮತ್ತೆ ಜೀವಂತವಾಗುತ್ತದೆ!.
ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.

 

 

 

Share This Article
error: Content is protected !!
";