ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಶುಕ್ರವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಅವರು ವಾರ್ತಾ ಇಲಾಖೆ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಪಿ.ಎಂ. ವೇಣುಗೋಪಾಲ್, ಎಂ.ಜೆ.ಬೋರೇಶ, ಆರ್.ತಿಮ್ಮಶೆಟ್ಟಿ, ನಿವೃತ್ತ ನೌಕರ ಎಸ್.ಚಂದ್ರಶೇಖರ್, ಅಪ್ರೆಂಟಿಸ್ ತರಬೇತಾರ್ಥಿ ಮುದ್ದು ಕಿರಣ, ಪತ್ರಕರ್ತರಾದ ಗೌನಹಳ್ಳಿ ಗೋವಿಂದಪ್ಪ, ಎಸ್.ಟಿ. ನವೀನ್ ಕುಮಾರ್, ಎಸ್.ಬಿ. ರವಿಕುಮಾರ್ ಉಗ್ರಾಣ, ವೀರೇಶ ವಿ.ಅಪ್ಪು, ಓಂಕಾರಮೂರ್ತಿ, ಆನಂದ ಆಲಘಟ್ಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

