Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದುರ್ಗದಲ್ಲಿ ತೀವ್ರ ಬರಗಾಲ: ರೈತರ ಅಳಲು ಕೇಳದ ರಾಜ್ಯ ಸರ್ಕಾರ ವಜಾಗೆ ಒತ್ತಾಯ!

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಿಲ್ಲದೆ ಆರು ತಾಲೂಕುಗಳಲ್ಲಿ ತೀವ್ರ ಬರಗಾಲ ಆವರಿಸಿದ್ದು
, ರೈತರು ಅಲ್ಪಸ್ವಲ್ಪ ಮಳೆಗೆ ದುಬಾರಿ ಬೆಲೆ ಕೊಟ್ಟು ಬೀಜ, ಗೊಬ್ಬರ ಖರೀದಿಸಿ ಬಿತ್ತಿದ ಬೆಳೆಗಳೆಲ್ಲವೂ ಕಣ್ಣೆದುರಲ್ಲೇ ಒಣಗಿ ಹೋಗಿವೆ. ಇದರೊಂದಿಗೆ ಕೊಳವೆಬಾವಿಗಳೂ ಬರಿದಾಗಿದ್ದು, ಅಡಕೆಗೂ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಈ ಎಲ್ಲಾ ಸಂಕಷ್ಟಗಳ ನಡುವೆ ರಾಜ್ಯ ಸರ್ಕಾರ ಘೋಷಿಸಿರುವ ಅಲ್ಪ ಪರಿಹಾರವು ರೈತರಿಗೆ ಮಾಡಿದ ಅಪಮಾನವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.

ಅಪರಿಹಾರ ಘೋಷಣೆಗೆ ಆಕ್ರೋಶ: ಬರಪೀಡಿತ ರೈತರಿಗೆ ಸರ್ಕಾರ ಘೋಷಿಸಿರುವ 2,500 ಪರಿಹಾರ ಅತ್ಯಂತ ಅಲ್ಪ ಆಗಿದ್ದು, ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಶಾಸಕರ ವಿರುದ್ಧ ಕಿಡಿ: ಆಡಳಿತ ಹಾಗೂ ವಿರೋಧ ಪಕ್ಷಗಳ ಕೆಲವೇ ಕೆಲವು ಶಾಸಕರನ್ನು ಹೊರತುಪಡಿಸಿ, ಬಹುತೇಕ ಎಲ್ಲ ಶಾಸಕರು ವಿಧಾನಸಭೆಯಲ್ಲಿ ರೈತರ ಪರ ಧ್ವನಿ ಎತ್ತದೆ ಮೌನವಾಗಿರುವುದು ದುರಂತ. ಕೇವಲ ಅಧಿಕಾರಕ್ಕಾಗಿ ಪಾದಯಾತ್ರೆಗಳನ್ನು ನಡೆಸುವ ರಾಜಕಾರಣಿಗಳು, ರೈತರ ಬೆಳೆ ಸಾಲ ಮನ್ನಾ, ನೀರಾವರಿ ಯೋಜನೆಗಳ ಅನುದಾನ ಮತ್ತು ಬೆಳೆ ವಿಮೆಗಾಗಿ ಪಾದಯಾತ್ರೆ ನಡೆಸಿದ್ದರೆ ಅವರ ಕಾಳಜಿ ತಿಳಿಯುತ್ತಿತ್ತು.

ರಾಜ್ಯಪಾಲರಿಗೆ ಮನವಿ: ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಬೇಕೆಂದು ಆಗ್ರಹಿಸಿ, ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗಿದೆ.

ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್, ಕಬ್ಬಿಗೆರೆ ನಾಗರಾಜ್, ಲಿಂಗವರಟ್ಟಿ ಕಾಂತರಾಜ್, ರಾಜಶೇಖರಪ್ಪ ಮುದ್ದಾಪುರ, ಮಂಜಣ್ಣ ಬಾಗೇನಾಳು, ತಿಪ್ಪೇಸ್ವಾಮಿ ಮುದ್ದಾಪುರ, ನಾಗಣ್ಣ, ವೀರಣ್ಣ, ತಾಲೂಕ್ ಅಧ್ಯಕ್ಷ ಕಾಂತರಾಜ್, ವೆಂಕಟೇಶ್ ಹೊಳಲ್ಕೆರೆ, ಮಲ್ಲಿಕಾರ್ಜುನ ನಪ್ಪ, ಸಿದ್ದರಾಮಣ್ಣ, ಸೂರಪ್ಪ ಚಿಕ್ಕಬೆನ್ನೂರು, ಶಾಂತಮ್ಮ ಅಳಿಯೂರು, ಸಿದ್ದಣ್ಣ, ಬಸವಾನಂದ ಜಮೀನ್ದಾರ್, ಮಾರುತಿ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಹರೂ ಮೈದಾನದ ಶಕ್ತಿ ಗಣಪತಿ ಎಕ್ಸಿಬಿಷನ್‌ನಲ್ಲಿ ದುಬಾರಿ ದರ ವಸೂಲಿ – ದಲಿತ ಸ್ವಾಭಿಮಾನಿ ಸಮಿತಿಯಿಂದ ಧರಣಿ ಸತ್ಯಾಗ್ರಹಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನನಿವೃತ್ತ ಪ್ರಾಂಶುಪಾಲ, ಸಂಪನ್ಮೂಲ ವ್ಯಕ್ತಿ ವಿ. ಮಲ್ಲೇಶಪ್ಪ ಅವರಿಗೆ ಸನ್ಮಾನದುರ್ಗದಲ್ಲಿ ತೀವ್ರ ಬರಗಾಲ: ರೈತರ ಅಳಲು ಕೇಳದ ರಾಜ್ಯ ಸರ್ಕಾರ ವಜಾಗೆ ಒತ್ತಾಯ!BFSI ಮತ್ತು ಫಿನ್‌ಟೆಕ್ ವಲಯದ ಪ್ರಗತಿಗೆ ಆದ್ಯತೆ: ಸರ್ಕಾರದ ಜತೆ ಕೈಜೋಡಿಸಿದ ಉದ್ಯಮ ದಿಗ್ಗಜರುಹಿರಿಯೂರು ಜೆಡಿಎಸ್ ಭದ್ರಕೋಟೆಗೆ ಬಿರುಕು: ಕೇವಲ ಚುನಾವಣೆಗಷ್ಟೇ ಸೀಮಿತವೇ ಪಕ್ಷ ಸಂಘಟನೆ?ನೈಸ್ ಅಕ್ರಮ ಮತ್ತು ಟೋಲ್ ಲೂಟಿ: ಸರ್ಕಾರದ ಮೌನದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶರಕ್ತದಾನ ಮಾಡಲು ಹೊರಟಿದ್ದ ಯುವಕರು ರಸ್ತೆ ಅಪಘಾತಕ್ಕೆ ಬಲಿಆದಾಯಕ್ಕಿಂತ ಶೇ.49.5 ಹೆಚ್ಚು ಆಸ್ತಿ: ಮಾಜಿ ಅರಣ್ಯಾಧಿಕಾರಿಗೆ 3 ವರ್ಷ ಜೈಲು, 1.38 ಕೋಟಿ ದಂಡ!ಕಾಂಗ್ರೆಸ್‌ನಿಂದ ‘ಮತ ರಕ್ಷಕ’ ಅಭಿಯಾನ: 13.3 ಕೋಟಿ ಜನರನ್ನು ತಲುಪಲು ಹೊಸ ತಂತ್ರ