LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026-27ನೇ ಸಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ (ಸಾಮಾನ್ಯ ಪದವಿ ಕೋರ್ಸ್‌ಗಳ) ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಹೊಸ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಇತರ ಜನಾಂಗಗಳಿಗೆ ಸೇರಿದ ಸಾಮಾನ್ಯ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರವರ್ಗ-1, ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ: ಗರಿಷ್ಠ ರೂ. 2.50 ಲಕ್ಷ, ಪ್ರವರ್ಗ-2ಎ, 2ಬಿ, 3ಎ, 3ಬಿ ಹಾಗೂ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ: ಗರಿಷ್ಠ ರೂ. 1.00 ಲಕ್ಷ ಆದಾಯ ಮಿತಿ ಹೊಂದಿರಬೇಕು.

https://shp.karnataka.gov.in/bcwd ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನವಾಗಿದೆ. ಹೊಸ ಅರ್ಜಿಗಳನ್ನು ಜುಲೈ 23 ರಂದು ಪರಿಶೀಲನೆ ಮಾಡಲಾಗುವುದು. ಜುಲೈ 27 ರಂದು ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳು ಜುಲೈ 30 ರೊಳಗೆ ಪ್ರವೇಶ ಪಡೆಯಬೇಕು.

ಹೆಚ್ಚಿನ ವಿವರಗಳಿಗಾಗಿ ತಾಲೂಕುವಾರು ವಿದ್ಯಾರ್ಥಿನಿಲಯಗಳ ವಿವರ, ಅರ್ಹತೆ, ಮತ್ತು ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ https://bcwd.karnataka.gov.in/ ಅನ್ನು ವೀಕ್ಷಿಸಬಹುದು.

ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆಗಳ ಆದಲ್ಲಿ, ವಿದ್ಯಾರ್ಥಿಗಳು [email protected] ಇ-ಮೇಲ್ ಮುಖಾಂತರ ಅಥವಾ ಸಂಬಂಧಪಟ್ಟ ಜಿಲ್ಲಾ/ತಾಲೂಕು ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ಸಹಾಯವಾಣಿ ಸಂಖ್ಯೆ: 8050770004 ಅನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿ ವಿಲಾಸ ಸಾಗರದ ಸನಿಹದಲ್ಲೇ ಒಣಗುತ್ತಿರುವ ಅಡಿಕೆ ತೋಟಗಳು: ರೈತರ ಕಣ್ಣೀರಿಗೆ ಸಿಗುವುದೇ ಸರ್ಕಾರದ ಸ್ಪಂದನೆ?​ ಅರಿವಿನ ಪಯಣದೊಂದಿಗೆ 12 ವರ್ಷಗಳ ಸುದೀರ್ಘ ಸಮಾನತೆಯ ಕರುಣ-ಮೈತ್ರಿ ಹಾದಿಯಲ್ಲಿ ಪಯಣ:ಆರ್‌ಎಸ್ಎಸ್ ಕಾನೂನಾತ್ಮಕ ಅಸ್ತಿತ್ವ ಮತ್ತು ಹೊಣೆಗಾರಿಕೆ ಕುರಿತು ಪ್ರಿಯಾಂಕ್ ಖರ್ಗೆ ಪ್ರಶ್ನೆಸ್ವಾತಂತ್ರ್ಯ ದಿನದ ‘ಸ್ಪೆಷಲ್ ಎಡಿಷನ್’ HMT ವಾಚ್‌ಗಾಗಿ 2 ಕಿ.ಮೀ. ಸಾಲು ನಿಂತ ಬೆಂಗಳೂರಿಗರು!ಮಹಿಳೆ ಜೊತೆ ಅಸಭ್ಯ ವರ್ತನೆ, ಸ್ವಾಮೀಜಿಗೆ ಸ್ಥಳೀಯರಿಂದ ಧರ್ಮದೇಟು"ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ": ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ'ತಿಪಟೂರು ಪ್ರತ್ಯೇಕ ಜಿಲ್ಲೆ' ಬಾವುಟ ಹಾರಿಸಿದ ಶಾಸಕ ಕೆ. ಷಡಕ್ಷರಿನೈಸ್ ಅಕ್ರಮ: ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ ಸೂಕ್ತ ಕ್ರಮ – ಎಚ್‌ಡಿಕೆ ಪತ್ರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆಅಸಮಾಧಾನಿತ ಶಾಸಕರಿಗೆ ನಿಗಮ-ಮಂಡಳಿ 'ಅಧ್ಯಕ್ಷ' ಪಟ್ಟತುಮಕೂರಿಗೆ ನಮ್ಮ ಮೆಟ್ರೋ ಹಾಗೂ ಎರಡು ಹೊಸ ರೈಲು ಮಾರ್ಗಗಳ ಸೌಲಭ್ಯ: ಡಾ. ಜಿ. ಪರಮೇಶ್ವರ್