ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲೂಕಿನ ತೂಬಗೆರೆ ಹೋಬಳಿಯ ಎಸ್.ಎಲ್.ಆರ್.ಎಸ್ ಶಾಲೆ ಎಸ್.ಎಸ್.ಎಲ್.ಸಿ ಪರೀಕ್ಷೆ -1ರಲ್ಲಿ ಶೇ.೧೦೦ ರಷ್ಟು ಫಲಿತಾಂಶ ಪಡೆದಿದೆ.
ಶಾಲೆಯಲ್ಲಿ ಒಟ್ಟು ೭೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಡಿಸ್ಟಿಂಕ್ಷನ್ ನಲ್ಲಿ ೨೭ ವಿದ್ಯಾರ್ಥಿಗಳು, ಫಸ್ಟ್ ಕ್ಲಾಸ್ ೪೧ ವಿದ್ಯಾರ್ಥಿಗಳು, ಸೆಕೆಂಡ್ ಕ್ಲಾಸ್ ೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಉತ್ತಮ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು :
ಲಹರಿ ೬೨೫ ಕ್ಕೆ ೬೧೮,ಪುನೀತ್ ಕುಮಾರ್ ಕೆ.ಎ ೬೨೫ ಕ್ಕೆ ೬೧೨,ಅಪೂರ್ವ ೬೨೫ ಕ್ಕೆ ೬೧೧,ಚಂದನ್ ಎ ೬೨೫ ಕ್ಕೆ ೫೯೮,ಸಾಯಿ ಗಣೇಶ್ ಎಸ್ ೬೨೫ ಕ್ಕೆ ೫೯೮,ನಮಿತಾ ೬೨೫ ಕ್ಕೆ ೫೯೨ ಅಂಕಗಳನ್ನು ಪಡೆದಿದ್ದಾರೆ.







ಅತ್ಯುತ್ತಮ ಅಂಕೆಗಳನ್ನು ಪಡೆದು ಶಾಲೆಗೆ ಗೌರವ ತಂದಿರುವ ವಿದ್ಯಾರ್ಥಿಗಳನ್ನು ಎಸ್.ಎಲ್.ಆರ್.ಎಸ್ ಶಾಲೆಯ ಕಾರ್ಯದರ್ಶಿ ಎಸ್.ಆರ್.ರಮೇಶ್, ಖಜಾಂಚಿ ರಾಹುಲ್ ಹಾಗು ಮುಖ್ಯಶಿಕ್ಷಕ ಎನ್.ಎನ್.ನಾಗರಾಜು, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.


