ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬೆಂಗಳೂರು ಪ್ರಾದೇಶಿಕ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಆಶ್ರಯದಲ್ಲಿ 2026 ರ ಜುಲೈ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ವಿದ್ಯಾರಣ್ಯಪುರ-ಯಲಹಂಕ ರಸ್ತೆಯಲ್ಲಿರುವ ಯು.ಹೆಚ್.ಎಸ್ ಆವರಣ, ಜಿಕೆವಿಕೆಯಲ್ಲಿ “ಸಸ್ಯ ಸಂತೆ” ಯನ್ನು ಆಯೋಜಿಸಲಾಗಿದೆ.
ಗ್ರಾಹಕರಿಗೆ ನೇರವಾಗಿ ಗುಣಮಟ್ಟದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಕಲ್ಪಿಸಲಾಗುತ್ತಿದ್ದು, ವಿವಿಧ ತಳಿಯ ಹಣ್ಣಿನ ಗಿಡಗಳು, ಹೂವು ಹಾಗೂ ಅಲಂಕಾರಿಕ ಸಸಿಗಳು. ಪ್ಲಾಂಟೇಶನ್, ಅತ್ಯಮೂಲ್ಯ ಔಷಧೀಯ ಮತ್ತು ಸುಗಂಧಿ ಸಸಿಗಳು. ಕೃಷಿಗೆ ಪೂರಕವಾದ ಎರೆಹುಳು ಗೊಬ್ಬರ, ಹೂಕುಂಡದ ಮಣ್ಣು ಮಿಶ್ರಣ ಹಾಗೂ ಜೈವಿಕ ಪೀಡೆನಾಶಕಗಳು. ಉತ್ತಮ ಗುಣಮಟ್ಟದ ತರಕಾರಿ-ಹೂವಿನ ಬೀಜಗಳು ಮತ್ತು ಗಾರ್ಡನ್ ಪರಿಕರಗಳು. ಆರೋಗ್ಯದಾಯಕ ಸಿರಿ ಧಾನ್ಯಗಳು ಮತ್ತು ಮೌಲ್ಯವರ್ಧಿತ ಪದಾರ್ಥಗಳು ಲಭ್ಯವಿರಲಿವೆ.
ಈ ಸಂತೆಯಲ್ಲಿ ಶಾಲಾ ಮಕ್ಕಳಿಗೆ ಕೃಷಿ ಶಿಕ್ಷಣದ ಕುರಿತು ಮಾಹಿತಿ ಹಾಗೂ ವಿಶೇಷವಾಗಿ ‘ಬೆಳೆ ಸಂಗ್ರಹಾಲಯ' ಪ್ರಮುಖ ಆಕರ್ಷಣೆಯಾಗಲಿದೆ.
ಸಂತೆಯಲ್ಲಿ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಕಾಯ್ದಿರಿಸಲು ಆಸಕ್ತರು ಮೊಬೈಲ್ ಸಂಖ್ಯೆಗಳಿಗೆ 7795072699, 9945159924 ಮತ್ತು 7892057925 ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



