Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗೆರೆ ಕೃಷ್ಣ ಶಾಸ್ತ್ರಿಗಳ 111ನೇ ಜಯಂತಿ: ಮೇ 22 ಮತ್ತು 23ರಂದು ದ್ವಿ ದಿನ ಆಚರಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಳಗೆರೆ:
ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆಯ ಸಂಸ್ಥಾಪಕರು, ಪೂಜ್ಯ ಬೆಳಗೆರೆ ಕೃಷ್ಣ ಶಾಸ್ತ್ರೀಜಿಯವರ 111ನೇ ಜಯಂತ್ಯುತ್ಸವವನ್ನು ಈ ವರ್ಷ ಮೇ 22 ಮತ್ತು 23 ರಂದು ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ವಿದ್ಯಾಸಂಸ್ಥೆಯ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

​ಕಾರ್ಯಕ್ರಮಗಳ ವಿವರ ಇಲ್ಲಿದೆ:
​ಮೇ 22: ಬೆಳಗೆರೆಯಲ್ಲಿ ನುಡಿನಮನ ಹಾಗೂ ಸಂಕಲ್ಪ ದೀಕ್ಷೆ
​ಮೊದಲ ದಿನವಾದ ಮೇ 22ರ ಶುಕ್ರವಾರದಂದು ಬೆಳಗ್ಗೆ 10:30ಕ್ಕೆ ಬೆಳಗೆರೆಯಲ್ಲಿರುವ ಅವರ ಸ್ಮಾರಕದ ಗಡಿಸಲಿನಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆಯ ಸರ್ವ ಸಿಬ್ಬಂದಿಗಳು ಪೂಜ್ಯ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನುಡಿನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ಶಾಸ್ತ್ರಿಗಳು ಹಾಕಿಕೊಟ್ಟ ದಾರಿಯಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಅರ್ಥಪೂರ್ಣವಾಗಿ ಮುನ್ನಡೆಸುವ ಕುರಿತು ಎಲ್ಲರೂ 'ಸಂಕಲ್ಪ ದೀಕ್ಷೆ' ತೊಡಲಿದ್ದಾರೆ.

​ಮೇ 23: ದಾವಣಗೆರೆಯಲ್ಲಿ ಅಭಿಮಾನಿ ಬಳಗದಿಂದ ಆಚರಣೆ
​ಶಾಸ್ತ್ರೀಜಿಯವರ ಕರ್ಮಶೀಲತೆಗೆ 1990ರ ದಶಕದ ನಂತರ ಆರ್ಥಿಕ ಹಾಗೂ ಸಾತ್ವಿಕ ಚೈತನ್ಯ ಒದಗಿಸಿದ್ದು ದಾವಣಗೆರೆಯ ಅಭಿಮಾನಿಗಳ ಬಳಗ. ಹೀಗಾಗಿ ದಾವಣಗೆರೆಯು ಶಾಸ್ತ್ರೀಜಿಯವರಿಗೆ ಅತ್ಯಂತ ಆತ್ಮೀಯ ತಾಣವಾಗಿತ್ತು. ಈ ಹಿಂದೆ ಅವರ ಪ್ರಮುಖ ಕಾರ್ಯಕ್ರಮಗಳಾದ ನಾನಿದ್ದೂ ನನ್ನದೇನಿಲ್ಲಪುಸ್ತಕ ಬಿಡುಗಡೆ, ನೂರನೇ ವರ್ಷದ ವರ್ಧಂತಿ ಆಚರಣೆ ಹಾಗೂ ಅವರ ಸಮಗ್ರ ಸಾಹಿತ್ಯವನ್ನೊಳಗೊಂಡ ನೂರರ ನೆನಪುಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಇಲ್ಲಿಯೇ ಯಶಸ್ವಿಯಾಗಿ ನಡೆದಿದ್ದವು. ಈ ನೆನಪಿನ ಅಂಗವಾಗಿ ಎರಡನೇ ದಿನದ ಕಾರ್ಯಕ್ರಮವು ದಾವಣಗೆರೆಯಲ್ಲಿ ಜರುಗಲಿದೆ.

​ಹಾರ್ದಿಕ ಸ್ವಾಗತ
ಪೂಜ್ಯ ಬೆಳಗೆರೆ ಕೃಷ್ಣ ಶಾಸ್ತ್ರೀಜಿಯವರ ಜನ್ಮದಿನೋತ್ಸವದ ಈ ಎರಡೂ ದಿನಗಳ ಕಾರ್ಯಕ್ರಮಗಳಿಗೆ ಅವರ ಎಲ್ಲಾ ಅಭಿಮಾನಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆಯ ಕಾರ್ಯಕಾರಿ ಸಮಿತಿಯು ಪ್ರಕಟಣೆಯ ಮೂಲಕ ಹಾರ್ದಿಕವಾಗಿ ಸ್ವಾಗತಿಸಿದೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST