Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣ-ಕೃಷಿ ವಲಯದ ಕಾಯಕಲ್ಪಕ್ಕೆ ಒತ್ತು ನೀಡಿದ ಐತಿಹಾಸಿಕ ಬಜೆಟ್

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್‌ನಲ್ಲಿ ಶಿಕ್ಷಣ
, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಅಭೂತಪೂರ್ವ ಆದ್ಯತೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʻಕೃಷಿ ಉದ್ದಿಮೆ ಕೇಂದ್ರʼವನ್ನಾಗಿ ಉನ್ನತೀಕರಿಸುವ ಮೂಲಕ ಕೃಷಿ ವಲಯಕ್ಕೆ ಹೊಸ ಚೈತನ್ಯ ನೀಡಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿರುವ ಸರ್ಕಾರವು, 3,900 ಕೋಟಿ ರೂ.ಗಳ ವೆಚ್ಚದಲ್ಲಿ ಎಡಿಬಿ, ಕೆಕೆಆರ್ ಡಿಬಿ ಮತ್ತು ಕೆಎಂಇಆರ್ ಸಿ ನೆರವಿನೊಂದಿಗೆ 800 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಶಾಲೆಗಳಲ್ಲಿನ ಬೋಧನಾ ಹುದ್ದೆಗಳನ್ನು ಆದ್ಯತೆಯ ಮೇಲೆ ಭರ್ತಿ ಮಾಡುವುದಲ್ಲದೆ, ಉಚಿತ ಪಠ್ಯಪುಸ್ತಕಗಳ ವಿತರಣೆಯನ್ನು ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೆ ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಯುವಜನತೆಯ ಭವಿಷ್ಯ ಮತ್ತು ಉದ್ಯೋಗದ ದೃಷ್ಟಿಯಿಂದ ಈ ಬಜೆಟ್ ಆಶಾದಾಯಕವಾಗಿದ್ದು, ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15,000 ಬೋಧಕ ಹುದ್ದೆಗಳು, ವಿಶ್ವವಿದ್ಯಾಲಯಗಳಲ್ಲಿ 1,000 ಬೋಧಕ ಹುದ್ದೆಗಳು, ಆರೋಗ್ಯ ಇಲಾಖೆಯಲ್ಲಿ 2,500 ಹುದ್ದೆಗಳು ಹಾಗೂ ಗೃಹ ಇಲಾಖೆಯಲ್ಲಿ 8,000 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ಜೊತೆಗೆ, 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಪದವಿ ಕಾಲೇಜುಗಳನ್ನು ಉನ್ನತೀಕರಿಸಲು ಮತ್ತು ವಿದ್ಯಾರ್ಥಿನಿಯರು ಹೆಚ್ಚಿರುವ ಕಾಲೇಜುಗಳಿಗೆ 31 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ.

ಮಹಿಳಾ ಅತಿಥಿ ಉಪನ್ಯಾಸಕರಿಗೆ ಮಾನವೀಯ ನೆಲೆಯಲ್ಲಿ 90 ದಿನಗಳ ಮಾತೃತ್ವ ರಜೆ ಘೋಷಿಸಿರುವುದು ಬಜೆಟ್‌ನ ಆಶಯವನ್ನು ಎತ್ತಿ ಹಿಡಿದಿದೆ. ಸಾಮಾಜಿಕ ಶಿಸ್ತು ಮತ್ತು ಯುವಜನತೆಯ ಸುಧಾರಣೆಗಾಗಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ ಹಾಗೂ ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಹಸಿರು ನಿಶಾನೆ ತೋರಿಸಲಾಗಿದೆ.

ಸಾಂಸ್ಕೃತಿಕವಾಗಿ ಗೋರ್‌ಬಂಜಾರ ಸಮುದಾಯದ ವಿಶ್ವಕೋಶದ ಪ್ರಕಟಣೆಯ ಮೂಲಕ ಸಮುದಾಯದ ಅಸ್ಮಿತೆಗೆ ಗೌರವ ನೀಡಲಾಗಿದೆ. ಒಟ್ಟಾರೆಯಾಗಿ ಈ ಬಜೆಟ್ ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಯನ್ನು ಒಳಗೊಂಡಿರುವ ಸರ್ವೋದಯ ಬಜೆಟ್ ಆಗಿ ಹೊರಹೊಮ್ಮಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದವೀಧರರ ವಿಭಾಗದ ಅಧ್ಯಕ್ಷ ಪ್ರಕಾಶ್ ರಾಮಾನಾಯ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತಪರ ಕಾಳಜಿಯ ನಾಯಕನನ್ನು ಕಳೆದುಕೊಂಡಿದ್ದೇವೆ-ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದುರ್ಗದ 'ಅಜಾತಶತ್ರು' ಇನ್ನಿಲ್ಲ: ಸಚಿವ ಡಿ. ಸುಧಾಕರ್ ವಿಧಿವಶಸಚಿವ ಡಿ.ಸುಧಾಕರ್ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ​ ಮೌನವಾದ ಮಾತು, ಮರೆಯದ ನೆನಪು: ಡಿ. ಸುಧಾಕರ್ ಅವರಿಗೆ ಭಾವಪೂರ್ಣ ನಮನಡಿ. ಸುಧಾಕರ್ ನಿಧನ: ಮಾರ್ಗದರ್ಶಕ, ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡೆ ಎಂದು ಶಾಸಕ ವೀರೇಂದ್ರ ಪಪ್ಪಿ ಭಾವುಕ ನಮನಡಿ. ಸುಧಾಕರ್ ನಿಧನ: ಮಾರ್ಗದರ್ಶಕ, ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡೆ ಎಂದು ಶಾಸಕ ವೀರೇಂದ್ರ ಪಪ್ಪಿ ಭಾವುಕ ನಮನಸಚಿವ ಡಿ. ಸುಧಾಕರ್ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ: "ಅವರೊಬ್ಬ ನಿಜವಾದ ಜನಪರ ನಾಯಕ"ಟೀಕೆಗಳಿಗೆ ಕುಗ್ಗದ ಧೀಮಂತ: ನಿಂದನೆಗಳ ನಡುವೆಯೂ ಮೌನ ಕ್ರಾಂತಿ ಮಾಡಿದ ಸುಧಾಕರ್ಬಾರದ ಲೋಕದತ್ತ ಪಯಣಕ್ಕೆ ಸಿದ್ಧವಾದ ಆಪತ್ಬಾಂಧವ: ಚಿತ್ರದುರ್ಗದ ನೆಲದಲ್ಲಿ ಮೌನ ರೋದನಕಾರ್ಯಕರ್ತರ ಕಣ್ಮಣಿ, ಅಭಿಮಾನಿಗಳ ಆರಾಧ್ಯ ದೈವ: ಡಿ. ಸುಧಾಕರ್ ಅವರ ಸ್ನೇಹಯಾನ