Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಿರಿಯೂರು ಮತ್ತು ಚಳ್ಳಕೆರೆ ನಗರಸಭೆಗಳಿಗೂ ಪ್ರತ್ಯೇಕ 'ನಗರ ಯೋಜನಾ ಪ್ರಾಧಿಕಾರ' ರಚನೆಯಾಗಲಿ 

ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಗಳಾದ ಚಳ್ಳಕೆರೆ ಮತ್ತು ಹಿರಿಯೂರು ನಗರಸಭೆಗಳ ವ್ಯಾಪ್ತಿಗೆ ಪ್ರತ್ಯೇಕ ‘ನಗರ ಯೋಜನಾ ಪ್ರಾಧಿಕಾರ’ ರಚಿಸುವ ಸಂಬಂಧ ನಗರಾಭಿವೃದ್ಧಿ ಇಲಾಖೆ ಹಾಗೂ ನಗರಾಡಳಿತ ಹಂತದಲ್ಲಿ ತಾಂತ್ರಿಕ ಮತ್ತು ಆರ್ಥಿಕ ಪ್ರಸ್ತಾಪಗಳನ್ನು ತುರ್ತಾಗಿ ಸಲ್ಲಿಸಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಗಿದ್ದು ಕೇವಲ 11 ವಾರ್ಡ್ ಗಳನ್ನು ಮಾತ್ರ ಹೊಂದಿದೆ. ಈಗಾಗಲೇ ಬೆಳ್ತಂಗಡಿಯಲ್ಲಿ ಪ್ರತ್ಯೇಕ ‘ನಗರ ಯೋಜನಾ ಪ್ರಾಧಿಕಾರ’ ರಚನೆ ಮಾಡಲಿ ಎನ್ನುವ ಬೇಡಿಕೆಯೊಂದಿಗೆ ಈಗಾಗಲೇ ಅಲ್ಲಿನ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದೇ   ಮಾದರಿಯಲ್ಲಿಯೇ ಚಿತ್ರದುರ್ಗ ಜಿಲ್ಲೆಯ ಪ್ರಮುಖ ವಾಣಿಜ್ಯ ಹಾಗೂ ಶರವೇಗದಲ್ಲಿ ಬೆಳೆಯುತ್ತಿರುವ ಹಿರಿಯೂರು ಮತ್ತು ಚಳ್ಳಕೆರೆ ನಗರಸಭೆಗಳಿಗೂ ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರಗಳನ್ನು ರಚಿಸಬೇಕೆಂಬ ಬಲವಾದ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಬೆಳ್ತಂಗಡಿ ಮಾದರಿಯ ಅಗತ್ಯವೇನು?
ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವುದು, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ವೇಗದ ನಗರೀಕರಣ ಹಾಗೂ ಸಾರ್ವಜನಿಕರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣದ ಪರಿಹಾರ ಮತ್ತು ನಾಗರಿಕ ಸೇವೆಗಳನ್ನು ನೀಡಲು ಪ್ರತ್ಯೇಕ ಯೋಜನಾ ಪ್ರಾಧಿಕಾರ ಸಹಕಾರಿಯಾಗಿದೆ. ಪ್ರಸ್ತುತ ಬೆಳ್ತಂಗಡಿ ನಗರ ಯೋಜನಾ ಪ್ರಾಧಿಕಾರ ರಚನೆಗೆ ಅನುಸರಿಸುತ್ತಿರುವ ಪ್ರಕ್ರಿಯೆಯಂತೆ (೫ ವರ್ಷಗಳ ಶುಲ್ಕ ಸಂಗ್ರಹ, ಸುತ್ತಮುತ್ತಲಿನ ಗ್ರಾಮಗಳ ಸೇರ್ಪಡೆ, ಜನಸಂಖ್ಯೆ ಮತ್ತು ವಾರ್ಡ್‌ಗಳ ಸಮಗ್ರ ನಕ್ಷೆ ಪರಿಶೀಲನೆ) ಪ್ರಸ್ತಾಪಗಳನ್ನು ಸಿದ್ಧಪಡಿಸಲಾಗುತ್ತಿದೆ.
ಹಿರಿಯೂರು ಮತ್ತು ಚಳ್ಳಕೆರೆಗೆ ಏಕೆ ಬೇಕು ಪ್ರತ್ಯೇಕ ಪ್ರಾಧಿಕಾರ?

Advertisement

ವೇಗದ ನಗರೀಕರಣ ಹಾಗೂ ಪ್ರಮುಖ ರಸ್ತೆ ಸಂಪರ್ಕ:
ಹಿರಿಯೂರು: ರಾಷ್ಟ್ರೀಯ ಹೆದ್ದಾರಿ 48(ಬೆಂಗಳೂರು-ಪುಣೆ), ರಾಷ್ಟ್ರೀಯ ಹೆದ್ದಾರಿ 150ಎ(ಚಾಮರಾಜನಗರ-ಬೀದರ್-ಜೇವರ್ಗಿ) ಮತ್ತು ಪ್ರಮುಖ ರಾಜ್ಯ ಹೆದ್ದಾರಿಗಳು ಹಿರಿಯೂರು ನಗರದಲ್ಲೇ ಹಾದು ಹೋಗಿವೆ. ವಾಣಿಜ್ಯ ಮತ್ತು ಶೈಕ್ಷಣಿಕವಾಗಿ ಶರವೇಗದಲ್ಲಿ ಬೆಳೆಯುತ್ತಿದೆ.  ಇದಲ್ಲದೆ ದೇಶದ ಮಹತ್ವದ ಗ್ರೀನ್ ಹೈವೇ( ಹಸಿರು ರಾಷ್ಟ್ರೀಯ ಹೆದ್ದಾರಿ ಕೂಡ ಹಿರಿಯೂರು ಸಮೀಪವೇ ಹಾದು ಹೋಗಲಿದ್ದು ಈಗಾಗಲೇ ಸರ್ವೇ ಕಾರ್ಯ ಸೇರಿದಂತೆ ಮತ್ತಿತರರ ಮಹತ್ವದ ಕಾರ್ಯಗಳು ಪೂರ್ಣಗೊಂಡಿವೆ.
ಇದರ ಜೊತೆಯಲ್ಲಿ ಹಿರಿಯೂರು ನಗರಕ್ಕೆ ಕೂಗಳತೆ ದೂರದಲ್ಲಿ ಅಂದರೆ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿರುವ ಮೇಟಿಕುರ್ಕೆ ಸಮೀಪ 1500 ಎಕರೆ ಪ್ರದೇಶದಲ್ಲಿ ಬೃಹತ್ ಕೈಗಾರಿಕಾ ಕಾರಿಡಾರ್ ಈಗಾಗಲೇ ನಿರ್ಮಾಣ ಆಗುತ್ತಿದೆ.

ಹಿರಿಯೂರು ನಗರಸಭೆಯ ಅಗತ್ಯತೆ:
ರಾಷ್ಟ್ರೀಯ ಹೆದ್ದಾರಿ 48, 150ಎ ಮತ್ತು ಪ್ರಮುಖ ರಾಜ್ಯ ಹೆದ್ದಾರಿಗಳ ಜಂಕ್ಷನ್ ಆಗಿರುವ ಹಿರಿಯೂರು ಕೂಡ ತೀವ್ರ ವೇಗದಲ್ಲಿ ನಗರೀಕರಣಗೊಳ್ಳುತ್ತಿದೆ.
ಜೊತೆಗೆ ಹಿರಿಯೂರು ನಗರಕ್ಕೆ ಕೂನಿಕೆರೆ, ಮೇಟಿಕುರ್ಕೆ, ಬಬ್ಬೂರು ಮತ್ತು ಆದಿವಾಲ ಗ್ರಾಮ ಪಂಚಾಯಿತಿಗಳು ಹೊಂದಿಕೊಂಡಂತೆ ಇದ್ದು ಸುತ್ತಮುತ್ತಲಿನ 20-30 ಗ್ರಾಮಗಳು ನಗರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಈ ಪ್ರದೇಶಗಳು ನಗರೀಕರಣಕ್ಕೆ ತೆರೆದುಕೊಂಡಿವೆ. ಮತ್ತು 273 ಎಕರೆಯಷ್ಟು ವಿಸ್ತಾರದಲ್ಲಿ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಇದ್ದು ಈ ಕಾರ್ಖಾನೆಗೆ ಮರು ಜೀವ ನೀಡಿದ್ದೇ ಆದರೆ ಸ್ವರ್ಗಕ್ಕೆ ಮೂರೇಗೇಣು ಎನ್ನುವಷ್ಟು ಸಂಭ್ರಮ ಸಡಗರ ಮೇಳೈಸಲಿದೆ. 
ಈ ಅಂಶಗಳ ಆಧರಿಸಿ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ರಘುಮೂರ್ತಿ ಅವರು ತುರ್ತಾಗಿ ಈ ಕಾರ್ಯ ಮಾಡುವುದರಿಂದ ಅನೇಕಾನೇ ಅನುಕೂಲಗಳು ಸಾರ್ವಜನಿಕರಿಗೆ ಆಗಲಿವೆ. ಆದ್ದರಿಂದ ಹಿರಿಯೂರು ನಗರಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಮಾಡಬೇಕಿದೆ.

news_1788602159_5_140.webp

 

ಚಳ್ಳಕೆರೆ: 'ಸೈನ್ಸ್ ಸಿಟಿ' ಎಂದೇ ಹೆಸರುವಾಸಿಯಾಗಿರುವ ಚಳ್ಳಕೆರೆಯ ಸುತ್ತಮುತ್ತ ISRO, DRDO, IISc ನಂತಹ ಮಹತ್ವದ ಕೇಂದ್ರ ಸರ್ಕಾರದ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 
ಪ್ರಮುಖ ರಾಷ್ಟ್ರೀಯ ಹೆದ್ದಾರಿ-150ಎ ಚಳ್ಳಕೆರೆ ನಗರದೊಳಗೆ ಹಾದು ಹೋಗಿದೆ. ನಗರಕ್ಕೆ ಹೊಂದಿಕೊಂಡಂತೆ ನಗರಂಗೆರೆ, ದೊಡ್ಡೇರಿ, ಸೋಮಗುದ್ದು ಮತ್ತು ಬುಡ್ನಟ್ಟಿ ಗ್ರಾಮ ಪಂಚಾಯಿತಿಗಳಿವೆ. ಹೆದ್ದಾರಿಯ ಜಂಕ್ಷನ್ ಆಗಿರುವ ಚಳ್ಳಕೆರೆ ವ್ಯಾಪ್ತಿಯಲ್ಲೂ ಅಭಿವೃದ್ಧಿ ಕಾರಿಡಾರ್ ವೇಗವಾಗಿ ವಿಸ್ತರಿಸುತ್ತಿದೆ.

ಚಳ್ಳಕೆರೆಯ ವೈಜ್ಞಾನಿಕ ಮತ್ತು ಕೈಗಾರಿಕಾ ಮಹತ್ವ:
ಚಳ್ಳಕೆರೆ ಭಾಗವು ಇಂದು ‘ಸೈನ್ಸ್ ಸಿಟಿ’ಯಾಗಿ ಬೆಳೆಯುತ್ತಿದ್ದು, ಐಐಎಸ್‌ಸಿ (IISc), ಇಸ್ರೋ (ISRO), ಡಿಆರ್‌ಡಿಒ (DRDO) ಮತ್ತು ಬಿಎಆರ್‌ಸಿ (BARC) ನಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಗಳನ್ನು ಹೊಂದಿದೆ.
ವಸತಿ ಬಡಾವಣೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಕೈಗಾರಿಕಾ ಕಾರಿಡಾರ್‌ಗಳು ವೇಗವಾಗಿ ವಿಸ್ತರಿಸುತ್ತಿರುವುದರಿಂದ ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ ರಚನೆಯಾದರೆ ಮಾಸ್ಟರ್ ಪ್ಲಾನ್ (ಬೃಹತ್ ಯೋಜನೆ) ರಚಿಸಿ ವೈಜ್ಞಾನಿಕವಾಗಿ ನಗರ ರೂಪಿಸಲು ನೆರವಾಗಲಿದೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು ಚಳ್ಳಕೆರೆ ನಗರದ ಸಮಗ್ರ ಹಾಗೂ ವೈಜ್ಞಾನಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ’ ರಚಿಸುವ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನಿರಂತರವಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ ಎನ್ನುವ ಅಂಶಗಳು ಹರಿದಾಡುತ್ತಿವೆ.
ಸಚಿವ ಟಿ. ರಘುಮೂರ್ತಿ ಅವರ ಪ್ರಸ್ತಾವನೆಯ ಪ್ರಮುಖ ಅಂಶಗಳು:
ಚಳ್ಳಕೆರೆ ನಗರಸಭೆ ವ್ಯಾಪ್ತಿಯ ಜೊತೆಗೆ ಸುತ್ತಮುತ್ತಲಿನ ಬೆಳೆಯುತ್ತಿರುವ ಗ್ರಾಮಗಳನ್ನು ಯೋಜನಾ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಕಳೆದ 5 ವರ್ಷಗಳ ಕಂದಾಯ ಸಂಗ್ರಹ ಹಾಗೂ ಆರ್ಥಿಕ-ತಾಂತ್ರಿಕ ಸಾಮರ್ಥ್ಯದ ವರದಿಯೊಂದಿಗೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ, ಬೆಳ್ತಂಗಡಿ ಮಾದರಿಯಲ್ಲಿಯೇ ಪ್ರತ್ಯೇಕ ಕಚೇರಿ ಹಾಗೂ ಪ್ರಾಧಿಕಾರ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹಿರಿಯೂರು ಮತ್ತು ಚಳ್ಳಕೆರೆ ಕ್ಷೇತ್ರಗಳಿಗೆ ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ ರಚಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿದರೆ, ಇಡೀ ಚಿತ್ರದುರ್ಗ ಜಿಲ್ಲೆಯ ಮೂರು ಪ್ರಮುಖ ತಾಲೂಕು ಕೇಂದ್ರಗಳಿಗೆ ಹೊಸ ರೂಪುರೇಖೆ ಸಿಗಲಿದೆ.

ಮುಂದಿನ ನಿರೀಕ್ಷಿತ ಕ್ರಮಗಳು:
ಜಿಲ್ಲಾಡಳಿತ ಮತ್ತು ಆಯಾಯ ನಗರಸಭೆಗಳು ಸಮಗ್ರವಾದ ಪ್ರಸ್ತಾವನೆ ಸಿದ್ದ ಪಡಿಸಿ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಿ, ಚಳ್ಳಕೆರೆ ಮತ್ತು ಹಿರಿಯೂರು ನಗರಸಭೆಗಳಿಂದ ಕಳೆದ 5 ವರ್ಷಗಳ ತೆರಿಗೆ ಸಂಗ್ರಹ, ಜನಸಂಖ್ಯೆ, ವಾರ್ಡ್‌ಗಳ ವಿವರ ಹಾಗೂ ಸುತ್ತಮುತ್ತಲ ಗ್ರಾಮಗಳ ಗಡಿ ಗುರುತಿಸುವಿಕೆಯ ಪ್ರಸ್ತಾವನೆಯನ್ನು ಪಡೆದುಕೊಂಡು ಅಂತಿಮ ಅನುಮೋದನೆ ನೀಡಬೇಕಾಗಿದೆ.

ವಿಳಂಬ ರಹಿತ ಸೇವೆ ಮತ್ತು ಯೋಜಿತ ಅಭಿವೃದ್ಧಿ:
ಸಾರ್ವಜನಿಕರಿಗೆ ಭೂ ಪರಿವರ್ತನೆ, ಲೇಔಟ್ ನಕ್ಷೆ ಅನುಮೋದನೆ ಹಾಗೂ ರಸ್ತೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರಕ್ಕೆ ಅಲೆಯುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಕಾಲಮಿತಿಯಲ್ಲಿ ಸೇವೆ ಒದಗಿಸುವುದು ಇದರ ಮುಖ್ಯ ಉದ್ದೇಶ ಎನ್ನಲಾಗಿದೆ.
ಪ್ರಸ್ತುತ ಸಣ್ಣಪುಟ್ಟ ಲೇಔಟ್ ಅನುಮೋದನೆ, ಭೂ ಪರಿವರ್ತನೆ, ಮಾಸ್ಟರ್ ಪ್ಲಾನ್ (ಬೃಹತ್ ಯೋಜನೆ) ರಚನೆ ಮತ್ತು ರಸ್ತೆ ವಿಸ್ತರಣೆಗಳಿಗಾಗಿ ಜಿಲ್ಲಾ ಕೇಂದ್ರ ಅಥವಾ ದೂರದ ನಗರ ಯೋಜನಾ ಕಚೇರಿಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ಇದರಿಂದ ನಾಗರಿಕರಿಗೆ ಕಾಲಮಿತಿಯಲ್ಲಿ ಸೇವೆ ಸಿಗದೆ ಕಾರ್ಯಗಳು ವಿಳಂಬವಾಗುತ್ತಿವೆ. ಪ್ರತ್ಯೇಕ ಪ್ರಾಧಿಕಾರ ರಚನೆಯಾದರೆ ಸ್ಥಳೀಯವಾಗಿಯೇ ನಿರ್ಧಾರಗಳನ್ನು ತೆಗೆದುಕೊಂಡು, ಶೀಘ್ರ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ.

ಆದಾಯ ಹೆಗ್ಗಳಿಕೆ ಮತ್ತು ಮೂಲಸೌಕರ್ಯ ಕ್ರಾಂತಿ:
ಹಿರಿಯೂರು ಮತ್ತು ಚಳ್ಳಕೆರೆ ಈ ಎರಡೂ ನಗರಸಭೆಗಳು ಉತ್ತಮ ಕಂದಾಯ ಮತ್ತು ತೆರಿಗೆ ಸಂಗ್ರಹದ ಸಾಮರ್ಥ್ಯ ಹೊಂದಿವೆ. ಸುತ್ತಮುತ್ತಲಿನ ಪ್ರಗತಿಯಲ್ಲಿರುವ ಗ್ರಾಮಗಳನ್ನು ಯೋಜನೆಗೆ ಒಳಪಡಿಸುವುದರಿಂದ ಕಂದಾಯ ಹೆಚ್ಚಳವಾಗುವುದರ ಜೊತೆಗೆ, ವೈಜ್ಞಾನಿಕ ರೀತಿಯಲ್ಲಿ ಒಳಚರಂಡಿ, ರಸ್ತೆ, ಉದ್ಯಾನವನ ಹಾಗೂ ಮೂಲಸೌಕರ್ಯಗಳನ್ನು ರೂಪಿಸಲು ಸಾಧ್ಯವಾಗುತ್ತದೆ.
ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ:
ಬೆಳ್ತಂಗಡಿ ಪುರಸಭೆ ಅಥವಾನಗರಸಭೆಯೂ ಆಗಿಲ್ಲ. ಕೇವಲ ಪಟ್ಟಣ ಪಂಚಾಯತಿಯಾಗಿದ್ದು ಪ್ರತ್ಯೇಕ ಪ್ರಾಧಿಕಾರ ರಚನೆಗೆ ಚಾಲನೆ ನೀಡಲಾಗಿದೆ.

ಅದಂತೆಯೇ, ಹಿರಿಯೂರು ಹಾಗೂ ಚಳ್ಳಕೆರೆ ನಗರಸಭೆಗಳ ಪೌರಾಯುಕ್ತರು ತಕ್ಷಣವೇ ಅಗತ್ಯ ಮಾಹಿತಿ ಹಾಗೂ ಪ್ರಸ್ತಾಪಗಳನ್ನು (ಕಳೆದ 5 ವರ್ಷಗಳ ಶುಲ್ಕದ ವಿವರ, ಸುತ್ತಮುತ್ತಲ ಗ್ರಾಮಗಳ ವಿವರ, ಜನಸಂಖ್ಯೆ ಹಾಗೂ ವಾರ್ಡ್ ನಕ್ಷೆ) ತಯಾರಿಸಿಕೊಂಡು ತುರ್ತಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ.

ರಾಜ್ಯ ಸರ್ಕಾರ, ನಗರಾಭಿವೃದ್ಧಿ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯದಲ್ಲಿ ತಕ್ಷಣವೇ ಗಮನಹರಿಸಿ, ಹಿರಿಯೂರು ಮತ್ತು ಚಳ್ಳಕೆರೆ ನಗರಸಭೆಗಳಿಗೆ 'ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ' ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಚಾರಿಕತೆಯ ದಾರಿದೀಪ: ಡಾ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಮಹೋತ್ಸವಪತ್ರಕರ್ತರ ಮೇಲೆ ಹಲ್ಲೆ, ಮಹಿಳಾ ಪತ್ರಕರ್ತೆಗೆ ಕಿರುಕುಳ: ಕೆಯುಡಬ್ಲ್ಯೂಜೆ ಖಂಡನೆಲವರ್‌ಬಾಯ್‌ಅವತಾರದಲ್ಲಿ ಬರುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ:  ಹೊಸ ಸಿನಿಮಾ 'ಕೆಮಿಸ್ಟ್ರಿ'!ಗಾಜಾ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಸಹ-ಪೈಲಟ್ ಒಮಾನ್ ಒಪ್ಪಿಗೆ!ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಸಂವಿಧಾನ ಪ್ರಸ್ತಾವನೆ ಪಠಣ ಕಡ್ಡಾಯ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ!ಇಂಡಿಯಾ ಬಣದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಬೃಹತ್ ಪಾದಯಾತ್ರೆಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ 1 ಕೋಟಿ ನಗದು ಪುರಸ್ಕಾರ, ಸರ್ಕಾರಿ ಹುದ್ದೆಗಳಲ್ಲಿ ಶೇ. 2 ಮೀಸಲಾತಿ: ಸರ್ಕಾರ!ಪವಿತ್ರಾ ಗೌಡಗೆ ಬ್ಯಾರಕ್ ಬದಲಾವಣೆ ಮಾಡದ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ!'ಇಂಡಿಯಾ' ಒಕ್ಕೂಟ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಪ್ರಮುಖ ನಾಯಕರು ವಶಕ್ಕೆ!ಪಂಚಮಸಾಲಿ ಮಠದಲ್ಲಿ ಅಕ್ಟೋಬರ್‌31ರವರೆಗೆ ನಿಷೇಧಾಜ್ಞೆ; ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ