Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಖಾತೆ ಹಂಚಿಕೆ, ಸಂಪುಟ ಪುನಾರಚನೆ ಕಸರತ್ತು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಶಿವಕುಮಾರ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಸಚಿವಾಕಾಂಕ್ಷಿಗಳ ಅಸಮಾಧಾನ ಶಮನಗೊಳಿಸಲು ಹಾಗೂ ಖಾತೆ ಹಂಚಿಕೆ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ.

ದೆಹಲಿಗೆ ನಿರ್ಗಮಿಸುವ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದ ಸಿಎಂ, ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸಂಪುಟದ ಸಣ್ಣ ಆಪರೇಷನ್ ಹಾಗೂ ಖಾತೆ ಹಂಚಿಕೆ ಕುರಿತು ಚರ್ಚಿಸಲಿದ್ದಾರೆ. ಆಗಸ್ಟ್ 13ರಂದು ರಾಜ್ಯ ಶಾಸಸಭೆಯ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ.

Advertisement

ಕಳಂಕಿತರಿಗೆ ಕೋಕ್, ಅತೃಪ್ತರಿಗೆ ಅವಕಾಶ?:
ವರದಿಗಳ ಪ್ರಕಾರ, ಕಳಂಕಿತ ಆರೋಪ ಹೊತ್ತಿರುವ ಹಾಗೂ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧರಿರುವ ಕೆಲ ಯುವ ಸಚಿವರನ್ನು ಕೈಬಿಟ್ಟು, ಆ ಸ್ಥಾನಗಳಲ್ಲಿ ಅಸಮಾಧಾನಗೊಂಡಿರುವ ಹಿರಿಯ ಶಾಸಕರಿಗೆ ಅವಕಾಶ ನೀಡಲು ಸಿಎಂ ಒಲವು ತೋರಿದ್ದಾರೆ. ಎರಡು ಅಥವಾ ಮೂರು ಸಚಿವರ ಬದಲಾವಣೆಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಮಂಗಳವಾರದ ವೇಳೆಗೆ ಹೊಸ ಸಚಿವರ ಸೇರ್ಪಡೆ ಹಾಗೂ ಖಾತೆ ಹಂಚಿಕೆ ಅಧಿಕೃತವಾಗುವ ಸಾಧ್ಯತೆಯಿದೆ. ಸಿಎಂ ಭೇಟಿ ಬೆನ್ನಲ್ಲೇ ಸಚಿವರಾದ ರಿಜ್ವಾನ್ ಅರ್ಷದ್, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಸಚಿವಾಕಾಂಕ್ಷಿಗಳು ಈಗಾಗಲೇ ದೆಹಲಿಗೆ ಪಯಣಿಸಿದ್ದಾರೆ.

ಶಮನವಾಗದ ಅಸಮಾಧಾನ, ಹೈಕಮಾಂಡ್ ಅಖಾಡಕ್ಕೆ:
ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು
, ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸಮಾಧಾನ ಶಮನಗೊಳಿಸಲು ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ರಂಗಕ್ಕಿಳಿದಿದ್ದಾರೆ.

ರಾಜೀನಾಮೆ ಬೆದರಿಕೆ ಹಾಕಿದ್ದ ಶಾಸಕ ಯಶವಂತರಾಯಗೌಡ ಪಾಟೀಲ್, ಎಂ. ಕೃಷ್ಣಪ್ಪ, ಪ್ರಿಯಾ ಕೃಷ್ಣ, ದಿನೇಶ್ ಗುಂಡೂರಾವ್ ಹಾಗೂ ಹಿರಿಯ ಶಾಸಕ ಹೆಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿ ನಾಯಕರು ಮಾತುಕತೆ ನಡೆಸಿದ್ದರೂ, ಪಕ್ಷದಲ್ಲ ಉಂಟಾಗಿರುವ ಶಮನದ ಹೊಗೆ ಸಂಪೂರ್ಣವಾಗಿ ತಣ್ಣಗಾಗಿಲ್ಲ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅಜ್ಜ-ಅಜ್ಜಿಯರ ದಿನಾಚರಣೆ: ಹಿರಿಯ ಜೀವಗಳೊಂದಿಗೆ ಮಗುವಾದ ಸಂಭ್ರಮ!ಆತ್ರೇಯ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳ ಅತಂತ್ರ ಭವಿಷ್ಯ: ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಬಿ.ಎಸ್.ಚಂದ್ರಶೇಖರ್ ಆಗ್ರಹಸತೀಶ್ ಜಾರಕಿಹೊಳಿ ಮೇಲಿನ ಇ.ಡಿ ದಾಳಿ ರಾಜಕೀಯ ಪ್ರೇರಿತ: ಕಾಂಗ್ರೆಸ್ ಮುಖಂಡರ ತೀವ್ರ ಆಕ್ರೋಶತನ್ನ ಪತ್ನಿಯನ್ನು ಆಕೆಯ ಇಚ್ಛೆಯಂತೆ ಪ್ರಿಯಕರನೊಡನೆ ಮದುವೆ ಮಾಡಿಸಿದ ವಿಶಾಲ ಹೃದಯದ ಪತಿ!ಪತ್ರಕರ್ತ ಜಿ. ಮಹಂತೇಶ್‌ಗೆ ಜೀವ ಬೆದರಿಕೆ ಪ್ರಕರಣ: ವಿಪಕ್ಷಗಳ ತೀವ್ರ ಆಕ್ರೋಶದ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಿದ ನಂದಿನಿ ಲೇಔಟ್ ಪೊಲೀಸರುಜೈಲಿನಲ್ಲೂ ಮುಂದುವರಿದ ಪ್ರಜ್ವಲ್ ರೇವಣ್ಣ ವಿಕೃತಿ: ಸೆಲ್‌ನಲ್ಲೇ ಪೆನ್ ಡ್ರೈವ್ ಬಳಸಿ ಅಶ್ಲೀಲ ವೀಡಿಯೋ ವೀಕ್ಷಣೆ!ಮಸೀದಿ ಮುಂದೆ ಗಣೇಶ ಮೆರವಣಿಗೆ ನಿಷೇಧ: ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶಭಾರತ-ಚೀನಾ ಸಂಬಂಧಕ್ಕೆ ಹೊಸ ಚೈತನ್ಯ: ಭಾರತ ಭೇಟಿಗಾಗಿ ದೆಹಲಿಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ಇಂಟರ್ನೆಟ್ ಇಲ್ಲದೆಯೂ ಯುಪಿಐ ಪಾವತಿ: ‘ಟ್ಯಾಪ್‌ಆ್ಯಂಡ್‌ಪೇ’ ಹಾಗೂ ‘ಮೈಯುಪಿಐ’ ಹೊಸ ಫೀಚರ್‌ಪರಿಚಯಿಸಿದ ಆರ್‌ಬಿಐನಮಗೆ ಹಾಕಿರುವ ಬೇಡಿ ಬಿಚ್ಚಿದರೆ ಕರ್ನಾಟಕವನ್ನೇ ಸ್ವಚ್ಛ ಮಾಡುತ್ತೇವೆ: ನ್ಯಾ. ಬಿ. ವೀರಪ್ಪ