Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನವು ನಿಗದಿಗಿಂತ ಮೂರು ದಿನ ಮುಂಚಿತವಾಗಿಯೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ 'ಸರ್ಜರಿ' ನಡೆಸುವ ಕುರಿತು ಕಾಂಗ್ರೆಸ್‌ಅಂಗಳದಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ.

ಅಧಿವೇಶನವನ್ನು ಆಗಸ್ಟ್ 13 ರಿಂದ 27 ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತಾದರೂ, ಪ್ರತಿಪಕ್ಷಗಳ ತೀವ್ರ ಗದ್ದಲ ಮತ್ತು ಪ್ರತಿಭಟನೆಯಿಂದಾಗಿ ಸೋಮವಾರವೇ ಕಲಾಪಕ್ಕೆ ತೆರೆ ಎಳೆಯಲಾಗಿದೆ. ಇದರ ಬೆನ್ನಲ್ಲೇ ಸಂಪುಟ ಪುನಾರಚನೆಯ ಸುಳಿವು ಸಿಕ್ಕಿದ್ದು, ಮೂರರಿಂದ ಐದು ಮಂದಿ ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸಲು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.

Advertisement

ಸಂಪುಟ 'ಸರ್ಜರಿ'ಯ ಪ್ರಮುಖ ಅಂಶಗಳು: ದೆಹಲಿಗೆ ಸಿಎಂ ಪಯಣ: ಸಚಿವ ಸಂಪುಟ ಬದಲಾವಣೆ ಕುರಿತು ಅಂತಿಮ ಚರ್ಚೆ ನಡೆಸಲು ಹೈಕಮಾಂಡ್‌ನಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬುಲಾವ್ ಬರುವ ಸಾಧ್ಯತೆಯಿದ್ದು, ಅವರು ಗುರುವಾರ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.

ಅಸಮಾಧಾನ ಶಮನಕ್ಕೆ ಕಸರತ್ತು: ಸಂಪುಟದಲ್ಲಿ ಹಿರಿತನ ನಿರ್ಲಕ್ಷಿಸಿರುವುದು, ಜಾತಿ ಸಮೀಕರಣ ಮತ್ತು ಜನತಾ ಪರಿವಾರದ ಹಿನ್ನೆಲೆಯ 17 ನಾಯಕರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಕಾಂಗ್ರೆಸ್‌ನ ಮೂಲ ನಾಯಕರಲ್ಲಿ ತೀವ್ರ ಅಸಮಾಧಾನ ಹೊಗೆಯಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ನಾಯಕರನ್ನು ಶಾಂತಗೊಳಿಸಲು ಹಾಗೂ ಕನಿಷ್ಠ ಒಬ್ಬ ಮಹಿಳಾ ನಾಯಕಿಗೆ ಹೊಸದಾಗಿ ಅವಕಾಶ ನೀಡಲು ಹೈಕಮಾಂಡ್ ಯೋಜಿಸಿದೆ.

ಹಿರಿಯರಿಗೆ ಕೋಕ್ ಮುನ್ಸೂಚನೆ: ಸಚಿವ ಸ್ಥಾನಕ್ಕಾಗಿ ಹಲವು ಹಿರಿಯ ಶಾಸಕರು ಪಟ್ಟು ಹಿಡಿದಿದ್ದು, ಕಳಪೆ ಸಾಧನೆ ತೋರಿದ ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ತೆಗೆದುಹಾಕುವ ಸಾಧ್ಯತೆಯಿರುವುದು ಹಾಲಿ ಸಚಿವರಲ್ಲಿ ಆತಂಕ ಮೂಡಿಸಿದೆ.

ಮುಖ್ಯಮಂತ್ರಿಗಳು ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ನಡೆಸುವ ಮಾತುಕತೆಯ ನಂತರವಷ್ಟೇ ಸಂಪುಟ ಪುನಾರಚನೆ ಮತ್ತು ಸಚಿವರ ಪಟ್ಟಿಯ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಬಿಡುಗಡೆಲಿಂಗನಹಳ್ಳಿ ಗ್ರಾಮದಲ್ಲಿ ವೀರಗಲ್ಲು, ಮಾಸ್ತಿ ಗಲ್ಲು ಪತ್ತೆಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ:ಕೃಷ್ಣಪ್ಪ ಖ್ಯಾತ ನಟ ರಂಗಾಯಣ ರಘು ಭೇಟಿ: 'ಪ್ರೇಮದ ಊರಲ್ಲಿ' ಸಿನಿಮಾ ವೀಕ್ಷಿಸುವಂತೆ ಆತ್ಮೀಯ ಮನವಿಸೊಂಡೆಕೆರೆ ಗ್ರಾಮದ ಬಸಣ್ಣ ನಿಧನಹಿರಿಯ ಪತ್ರಕರ್ತ ಬಂಡಿಗಡಿ ನಂಜುಂಡಪ್ಪ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪಶ್ರೀರಂಗಪಟ್ಟಣದಿಂದ ಮೈಸೂರಿಗೆ ಬಂದ ದಸರಾ ವೈಭವ:…ಮಳೆಯಿಲ್ಲದೆ ಒಣಗಿದ ಜೋಳದ ಹೊಲ ವೀಕ್ಷಿಸಿದ ನಿಖಿಲ್ ಕುಮಾರಸ್ವಾಮಿ; ​HMT ಕಾರ್ಖಾನೆಯ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ರಣತಂತ್ರ: ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮಾಲೋಚನಾ ಸಭೆ