ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಇಲ್ಲಿನ ಭಗತ್‌ಸಿಂಗ್‌ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡ 1 ಸಾವಿರ ವಿದ್ಯಾರ್ಥಿಗಳಿಗೆ ಲಯನ್ಸ್‌ಕ್ಲಬ್ ಆಫ್‌ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನೇತೃತ್ವದಲ್ಲಿ ಅನ್ನದಾಸೋಹ ನಡೆಸಲಾಯಿತು.
ಜಿಲ್ಲಾ ಹಸಿವು ನಿವಾರಣಾ ಘಟಕದ ಅಧ್ಯಕ್ಷ ಸಂಪತ್‌ಕುಮಾರ್, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ, ಲಯನ್ಸ್‌ಸಂಸ್ಥೆ ಸೇವಾ ವಲಯದಲ್ಲಿ ತನ್ನದೇ ಆದ ಪ್ರತಿಷ್ಠಿತ ಸ್ಥಾನವನ್ನು ಹೊಂದಿದ್ದು, ಆರೋಗ್ಯ, ಹಸಿವು ನಿವಾರಣೆ, ದೃಷ್ಟಿ ದೋಷ ನಿವಾರಣೆ, ಮಧುಮೇಹ ನಿವಾರಣೆ ಸೇರಿದಂತೆ ಮಹತ್ವದ ಧ್ಯೇಯಗಳೊಂದಿಗೆ ಕೆಲಸ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಜಾಲಪ್ಪ ಲಯನ್ಸ್‌ಸಂಸ್ಥೆ ಮಾದರಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಕ್ಲಬ್‌ನ ನಿರ್ದೇಶಕ ಐ.ಎಂ.ರಮೇಶ್‌ಕುಮಾರ್‌ಅನ್ನದಾಸೋಹವನ್ನು ಪ್ರಾಯೋಜಿಸಿದ್ದರು. ಲಯನ್ಸ್‌ಜಿಲ್ಲಾ ಆಡಳಿತಾಧಿಕಾರಿ ಎಂ.ಆರ್.ಶ್ರೀನಿವಾಸ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಸಂಯೋಜಕರಾದ ವಾಣಿ ರಾಜು, ಕನ್ನಡ ಮತ್ತು ಸಂಸ್ಕೃತಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ವಲಯ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ, ಆರ್.ಎಲ್.ಜಾಲಪ್ಪ ಲಯನ್ಸ್‌ಸಂಸ್ಥೆಯ ಅಧ್ಯಕ್ಷ ಕೆ.ಸಿ.ನಾಗರಾಜ್, ಕಾರ್ಯದರ್ಶಿ ಎ.ಎಸ್.ಸುಮ, ಸಹಕಾರ್ಯದರ್ಶಿ ಕಾವ್ಯ, ಖಜಾಂಚಿ ಹರ್ಷ, ಪ್ರಸನ್ನಕುಮಾರ್, ಎಲ್.ಎನ್.ನಾಗರಾಜ್, ಮಂಜುನಾಥ್, ಸರಿತಾ, ಎಸ್.ಶೃತಿ, ಭವ್ಯ, ವೆಂಕಟೇಶ್, ದೊಡ್ಡಬಳ್ಳಾಪುರ ರಾಯಲ್ಸ್‌ಲಯನ್ಸ್‌ಸಂಸ್ಥೆ ಅಧ್ಯಕ್ಷ ರವಿಕುಮಾರ್‌ಮತ್ತಿತರರು ಭಾಗವಹಿಸಿದ್ದರು.




