Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರವಿ ಮಾವಿನಕುಂಟೆ ಅವರ ಹುಟ್ಟುಹಬ್ಬದಲ್ಲಿ ಅನ್ನದಾಸೋಹ, ಸಮಾಜಮುಖಿ ಕಾರ್ಯಗಳ ಆಯೋಜನೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಿತ್ಯ ನಿರಂತರ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸದಾ ನೊಂದ ಜನರ ಪರ ಧ್ವನಿಯಾಗಿ ಶ್ರಮಿಸುತ್ತಿರುವ ಖ್ಯಾತ ವಕೀಲರು
, ಕನ್ನಡಪರ ಹೋರಾಟಗಾರರು ಸಮಾಜಸೇವಕರುವಾದ ರವಿ ಮಾವಿನಕುಂಟೆಯವರ ಹುಟ್ಟುಹಬ್ಬವನ್ನು ನಿರ್ಗತಿಕ ಕಡುಬಡವರಿಗೆ ಆಹಾರ ವಿತರಣೆ, ವಯೋವೃದ್ಧರಿಗೆ ಬಟ್ಟೆ ವಿತರಣೆ, ಸರ್ಕಾರಿ ಶಾಲಾ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೋಟ್ ಬುಕ್ ಪೆನ್ನುಗಳ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿರುವುದು ಸಂತಸ ತಂದಿದ್ದೆ ಎಂದು ನಿರಂತರ ಅನ್ನದಾಸೋಹ ಸಮಿತಿಯ ಮುಖ್ಯಸ್ಥ ಅನ್ನದಾಸೋಹಿ ಮಲ್ಲೇಶ್ ತಿಳಿಸಿದರು.

 ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅನ್ನದಾಸೋಹ ಸಮಿತಿಯ ಕಾರ್ಯಕ್ರಮದಲ್ಲಿ 2390 ದಿನದ ವಿಶೇಷ ಕಾರ್ಯಕ್ರಮವಾಗಿಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ತಾಲೂಕಿನ ಖ್ಯಾತ ವಕೀಲರಾದ ರವಿ ಮಾವನಕುಂಟೆ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ವಕೀಲ ವೃತ್ತಿಯೊಂದಿಗೆ ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ರವಿ ಮಾವಿನಕುಂಟೆ ಅವರ 47ನೇ ಹುಟ್ಟುಹಬ್ಬದ ಆಚರಣೆಯನ್ನು ಇಂದು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಅವರಿಗೆ ದೇವರು ಮತ್ತಷ್ಟು ಶಕ್ತಿ ನೀಡಲಿ ಸಮಾಜಕ್ಕೆ ಮತ್ತಷ್ಟು ಉತ್ತಮ ಸೇವಾ ಕಾರ್ಯಗಳನ್ನು ಮಾಡುವ ಶಕ್ತಿ ನೀಡಲಿ ಎಂದು ಈ ಮೂಲಕ ಕೋರುತ್ತೇವೆ ಎಂದರು.

 ಕಲಾವಿದರಾದ ವೆಂಕಟರಾಜು ಮಾತನಾಡಿ ದುಂದು ವೆಚ್ಚ ಮಾಡುವ ಬದಲು ಅರ್ಥಪೂರ್ಣ ಹುಟ್ಟು ಹಬ್ಬದ ಆಚರಣೆ , ಸಮಾಜಕ್ಕೆ ಮಾದರಿ ಅಂತೆಯೇ ಇಂದು ರವಿ ಮಾವಿನಕುಂಟೆ ಅವರ ಅಭಿಮಾನಿಗಳೆಲ್ಲರೂ ಸೇರಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಈ ಮೂಲಕ ನೂರಾರು ಕುಟುಂಬಗಳಿಗೆ ಆಹಾರ ಮಾಡಿದ್ದೇವೆ ಎಂಬುದು ಸಾರ್ಥಕತೆ ಈ ಕಾರ್ಯಕ್ರಮ ಕೇವಲ ಆಹಾರಕ್ಕೆ ಸೀಮಿತವಾಗದೆ ವಯೋವೃದ್ಧರಿಗೆ ಬಟ್ಟೆ ವಿತರಣೆ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆಯಿಂದ ಕುಡಿರುವುದು ಮತ್ತಷ್ಟು ಸಂತಸ ತಂದಿದೆ ಎಂದರು.

ಸಮಾಜ ಸೇವಕರಾದ ಸೆಲ್ವಂ ಮಾತನಾಡಿ ಇವತ್ತು ದಿನ ವಿಶೇಷವಾಗಿದೆ ಸಂಭ್ರಮಾಚರಣೆಯು ಅನ್ನದಾಸೋಹದ ಮೂಲಕ ನಡೆಯುತ್ತಿದೆ ಇದೊಂದು ಸಮಾಜಕ್ಕೆ ಮಾದರಿಯೇ ಸರಿ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು ಸ್ನೇಹಿತರು ಆದಂತಹ ರವಿಮಾಮನಕುಂಟೆ ಅವರ ಹುಟ್ಟುಹಬ್ಬವನ್ನು ಈ ರೀತಿ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಭಾವನೆ ಮೂಡಿಸಿದ ಎಂದರು.

 ಮುಖಂಡರಾದ ಶ್ರೀನಿವಾಸಲು, ಸಂತೋಷ್, ವಾಸು, ಜಯಂತ್ ಸೇರಿದಂತೆ ಹಲವು ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರವಿಮಾವಿನಕುಂಟೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಕೋರಿದರು. ಈ ಕಾರ್ಯ ಸದಾ ಹೀಗೆ ಮುಂದುವರೆಯಲಿ ಸಮಾಜಕ್ಕೆ ಅವರಿಂದ ಮತ್ತಷ್ಟು ಸೇವೆ ಲಭಿಸುವಂಥಾಗಲಿ ಎಂದು ಹಾರೈಸಿದರು

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರದ ದ್ವಂದ್ವ ನೀತಿ ಅಂತ್ಯಗೊಳ್ಳಲಿ; ಮದ್ಯ ಮಾರಾಟ ರದ್ದುಗೊಳಿಸಲು ಕ್ರಮ ಕೈಗೊಳ್ಳಲಿಕಲ್ಯಾಣದ ಸಂಕಟದಲ್ಲಿ ಮರಣವೇ ಮಹಾನವಮಿಸಿಜೆಪಿಗೆ ಕಾಂಗ್ರೆಸ್ ನೆರವು: 'ಖಜಾನೆ ಎಟಿಎಂ ಆಯಿತೇ?' - ಆರ್. ಅಶೋಕ್ ತೀವ್ರ ವಾಗ್ದಾಳಿಎ-ಖಾತಾ ಆಸ್ತಿ ಮಾಲೀಕರಿಗೆ ಮನೆಬಾಗಿಲಲ್ಲೇ ಆನ್‌ಲೈನ್ ಮೂಲಕ ಇ-ಖಾತಾ ಪಡೆಯಲು ಅವಕಾಶ!ಗೂಗಲ್ ಮ್ಯಾಪ್ ಹೇಳಿದಂತೆ ಕೇಳಿ ದಾರಿತಪ್ಪಿ ಕಾರು ಸಮೇತ ಕಂದಕಕ್ಕೆ ಬಿದ್ದ ಇನ್ಫೋಸಿಸ್ ಟೆಕ್ಕಿಗಳು!ಲೈಂಗಿಕ ಕಿರುಕುಳ ಆರೋಪ: ತಲೆಮರೆಸಿಕೊಂಡಿದ್ದ ಚರ್ಚ್‌ಪಾದ್ರಿ ಪೋಕ್ಸೋ ಅಡಿಯಲ್ಲಿ ಬಂಧನಹಾರನಕಣಿವೆ ರಂಗನಾಥಸ್ವಾಮಿ ಅಂಬಿನೋತ್ಸವ: ಬುಡಕಟ್ಟು ಸಂಸ್ಕೃತಿ ಮತ್ತು ಪವಾಡದ ಅಪೂರ್ವ ಧಾರ್ಮಿಕ ಸಂಗಮಪ್ರಜ್ಞೆಯ ಜಾಗೃತಿ, ಬದುಕಿನ ಸಂಸ್ಕೃತಿ:ತಂತ್ರಜ್ಞಾನದ ಅತಿರೇಕ -ಸಾಮಾಜಿಕ ಸಾಮರಸ್ಯಕ್ಕೆ ಗಂಡಾಂತರ— ಜಾಗೃತಿ ಅಗತ್ಯಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ