Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜು, ಮಲ್ಲೇಶ್ವರಂನಲ್ಲಿ ವಿವಿಧ ಸ್ನಾತಕೋತ್ತರ / ಸ್ನಾತಕ ವಿಷಯಗಳಿಗೆ 2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸ್ನಾತಕ / ಸ್ನಾತಕೋತ್ತರ ವಿಷಯಗಳ ಬೋಧನಾ ಕಾರ್ಯದ ನಿರ್ವಹಣೆಗಾಗಿ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ವಿಶ್ವವಿದ್ಯಾನಿಲಯದ ವೆಬ್ಸೈಟ್ www.bcu.ac.in  ನಲ್ಲಿ bcugfportal.in ಲಿಂಕ್ನ್ನು ಆಯ್ಕೆ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 21 ಸಂಜೆ 5.00 ಗಂಟೆಯೊಳಗೆ ನಿರ್ವಹಣಾ ಶುಲ್ಕ ರೂ. 200/- (SC/ST/CAT-1 Rs.100/-) ಗಳೊಂದಿಗೆ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯ ಭೌತಿಕ ಪ್ರತಿಯನ್ನು ಸೆಪ್ಟೆಂಬರ್ 26 ರೊಳಗೆ ಕುಲಸಚಿವರ ಕಛೇರಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜ್ ಆವರಣ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು - 560 001ರಲ್ಲಿ ಸಲ್ಲಿಸಬಹುದಾಗಿದೆ.

ವಿಜ್ಞಾನ ವಿಷಯಗಳು :  ರಸಾಯನಶಾಸ್ತ್ರ, ಜೀವರಸಾಯನಶಾಸ್ತ್ರ, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಗಣಿತಶಾಸ್ತ್ರ, ಭೌತಶಾಸ್ತ್ರ, ಉಡುಪು ಮತ್ತು ತಂತ್ರಜ್ಞಾನ (ಯುಜಿ & ಪಿಜಿ), ಪರಿಸರ ವಿಜ್ಞಾನ, ಗಣಕ ಜ್ಞಾನ ಎಂ.ಎಸ್ಸಿ ಗಣಕ ವಿಜ್ಞಾನ, ಬಿಸಿಎ, ಬಿಸಿಎ-Artificial Intelligence and Machine Learning ಮತ್ತು ಬಿಸಿಎ- ಡಾಟಾ ಸೈನ್ಸ್.


ಕಲಾ ವಿಷಯಗಳು:  ಕನ್ನಡ, ಇಂಗ್ಲೀಷ್, ಅರ್ಥಶಾಸ್ತ್ರ, ಇತಿಹಾಸ,  ರಾಜ್ಯಶಾಸ್ತ್ರ, ಸಮಾಜಶಾಸ್ತ್ರಸಮಾಜಕಾರ್ಯ, ಸಂವಹನ ಮತ್ತು ಪತ್ರಿಕೋದ್ಯಮ, ಜಾಗತಿಕ ಭಾಷೆಗಳು, (ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಜಪಾನೀಸ್, ಕೊರಿಯನ್, ಚೈನೀಸ್), ಹಿಂದಿ.

ವಾಣಿಜ್ಯ ವಿಷಯಗಳು:  ಎಂ.ಕಾಂ., ಎಂ.ಕಾಂ.(ಫೈನಾನ್ಸ್ ಮತ್ತು ಅಕೌಂಟಿಂಗ್), ಎಂ.ಕಾಂ (ಇಂಟರ್ನ್ಯಾಷನಲ್ ಬಿಸಿನೆಸ್), ಎಂ.ಟಿ.ಟಿ.ಎಂ.(ಮಾಸ್ಟರ್ ಆಫ್ ಟೂರಿಸಂ ಅಂಡ್ ಟ್ರಾವಲ್ ಮ್ಯಾನೇಜ್ಮೆಂಟ್), ಬಿ.ಕಾಂ, ಬಿ.ಕಾಂ (Accounting & Finance), ಬಿ.ಕಾಂ (Financial Technology)  ಮತ್ತು ಪಿ.ಜಿ. ಡಿಪೆÇ್ಲಮಾ.

ಮ್ಯಾನೇಜ್ಮೆಂಟ್: ಬಿಬಿಎ, ಬಿಬಿಎ –Financial Analysis ಮತ್ತು ಎಂ.ಬಿ.. ((Day and Evening), ತಾತ್ಕಾಲಿಕ ಹುದ್ದೆಗಳಾದ ಪ್ರಾಂಶುಪಾಲರು (ಸಮಾಲೋಚಕರು), ಸಹಾಯಕ ನಿರ್ದೇಶಕರು-ದೈಹಿಕ ಶಿಕ್ಷಣ, ಸಹಾಯಕ ಗ್ರಂಥಪಾಲಕರು, ಸಂಯೋಜಕರು - ಸ್ನಾತಕ ಪದವಿ ಕೋರ್ಸುಗಳಿಗೆ, ಉಪನಿರ್ದೇಶಕರು - ಪ್ರಸಾರಾಂಗ (ಸಮಾಲೋಚಕರು) ಮತ್ತು ದೈಹಿಕ ಶಿಕ್ಷಣ ಶಿಕ್ಷಕರ (ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜು ಮತ್ತು ಸೆಂಟ್ರಲ್ ಕಾಲೇಜು ಆವರಣ) ಹುದ್ದೆಗಳಿಗೆ ಯುಜಿಸಿ ನಿಯಮಾವಳಿಗಳ ಪ್ರಕಾರ ಅರ್ಹತೆ ಪಡೆದ ಅನುಭವ ಅಧ್ಯಾಪಕರನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತಾತ್ಕಾಲಿಕ ಹುದ್ದೆಗಳಾದ ಲ್ಯಾಬ್ ಅಸಿಸ್ಟೆಂಟ್ (ಕಂಪ್ಯೂಟರ್ ಸೈನ್ಸ್ ಲ್ಯಾಬ್) ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಸಹ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸ್ವಯಂ ವಿವರಗಳೊಂದಿಗೆ ತತ್ಸಬಂಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅನುಭವವುಳ್ಳ ಪ್ರಮಾಣ ಪತ್ರವನ್ನು ಸೆಪ್ಟೆಂಬರ್ 26 ರೊಳಗೆ ನೇರವಾಗಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಳಿಗಾಗಿ ವಿಶ್ವವಿದ್ಯಾನಿಲಯದ ವೆಬ್ಸೈಟ್ www.bcu.ac.in ನೋಡಬಹುದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ