Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಜ್ಯ ಕಾಂಗ್ರೆಸ್‌ಗೆ ನೂತನ 35 ಜಿಲ್ಲಾಧ್ಯಕ್ಷರ ನೇಮಕ: ಎಐಸಿಸಿ ಅಧಿಕೃತ ಪಟ್ಟಿ ಬಿಡುಗಡೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸಮಿತಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿಕೃತ ಪಟ್ಟಿಯನ್ನು ಹೊರಡಿಸಿದೆ. ಪಕ್ಷದ ತಳಮಟ್ಟದ ಬಲವರ್ಧನೆಗಾಗಿ ಹಮ್ಮಿಕೊಳ್ಳಲಾಗಿದ್ದ 'ಸಂಘಟನ್ ಸೃಜನ್' ಅಭಿಯಾನದಡಿ ನಡೆಸಲಾದ ವಿಸ್ತೃತ ಸಮೀಕ್ಷೆ ಹಾಗೂ ಪರಿಶೀಲನಾ ವರದಿಯನ್ನು ಆಧರಿಸಿ ಈ ನೇಮಕಾತಿಗಳನ್ನು ಮಾಡಲಾಗಿದೆ.

ಈ ಅಭಿಯಾನದ ಭಾಗವಾಗಿ ಎಐಸಿಸಿ ವೀಕ್ಷಕರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಪ್ರತಿಯೊಂದು ಜಿಲ್ಲೆಯ ಸ್ಥಳೀಯ ನಾಯಕರು, ಜನಪ್ರತಿನಿಧಿಗಳು ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಿದ್ಧಪಡಿಸಿದ್ದರು.

Advertisement

ವೀಕ್ಷಕರ ವರದಿ ಮತ್ತು ಪಕ್ಷದ ಹಿರಿಯ ನಾಯಕರೊಂದಿಗಿನ ಚರ್ಚೆಯ ಬಳಿಕ ಒಟ್ಟು ೩೫ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಅಧ್ಯಕ್ಷರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ಬೆಂಗಳೂರು ನಗರಕ್ಕೆ ೫, ಬೆಂಗಳೂರು ಗ್ರಾಮಾಂತರಕ್ಕೆ ೧, ಮೈಸೂರು (ನಗರ ಹಾಗೂ ಗ್ರಾಮಾಂತರ) ಹಾಗೂ ಬೆಳಗಾವಿ (ನಗರ ಹಾಗೂ ಗ್ರಾಮಾಂತರ) ಜಿಲ್ಲೆಗಳಿಗೆ ತಲಾ ಇಬ್ಬರಂತೆ ಅಧ್ಯಕ್ಷರನ್ನು ನೇಮಿಸಲಾಗಿದೆ.

"ಇದು ಸಾಮಾನ್ಯ ಬೂತ್ ಮಟ್ಟದ ಕಾರ್ಯಕರ್ತನಿಗೆ ಸಿಕ್ಕ ಗೌರವ": ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುವ ಪ್ರತಿಯೊಬ್ಬ ಬೂತ್ ಮಟ್ಟದ ಸಾಮಾನ್ಯ ಕಾರ್ಯಕರ್ತನಿಗೆ ಸಿಕ್ಕ ಸಂಭ್ರಮ ಮತ್ತು ಮನ್ನಣೆ ಇದು ಎಂದು ಹೇಳಲಾಗಿದೆ.  ಯಾವುದೇ ಪ್ರಚಾರ ಅಥವಾ ಹಮ್ಮು-ಬಿಮ್ಮು ಇಲ್ಲದೆ, ಕೇವಲ ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ ನೀಡಿ ಹೈಕಮಾಂಡ್ ಪ್ರಜಾಪ್ರಭುತ್ವದ ಮಾದರಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಿದೆ.

ವೀಕ್ಷಕರು ಬಂದಾಗ ನಿಯಮಾನುಸಾರ ಕೇವಲ ಅರ್ಜಿಯೊಂದನ್ನು ಸಲ್ಲಿಸಿದ್ದ ಕಾರ್ಯಕರ್ತರು ಮತ್ತು ನಾಯಕರ ವಿಶ್ವಾಸದಿಂದ ಈ ಹೊಣೆಗಾರಿಕೆ ಸಿಕ್ಕಿದೆ. ಇದನ್ನು ಕುರ್ಚಿಯ ಅಧಿಕಾರ ಎಂದು ಭಾವಿಸದೆ, ಕೊನೆಯ ಬೂತ್ ಮಟ್ಟದವರೆಗೂ ತಲುಪಿ ಕಾರ್ಯಕರ್ತರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷವನ್ನು ಬೇರುಮಟ್ಟದಿಂದ ಬಲಿಷ್ಠಗೊಳಿಸಲು ಶ್ರಮಿಸಬೇಕೆಂದು ಸೂಚಿಸಲಾಗಿದೆ.

ರಾಜ್ಯ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಅಧಿಕೃತ ಪಟ್ಟಿ: 
ಬಾಗಲಕೋಟೆ - ದಯಾನಂದ ಎಸ್. ಪಾಟೀಲ್,  ಬೆಂಗಳೂರು ಉತ್ತರ- ಅಬ್ದುಲ್ ವಜೀದ್, ಬೆಂಗಳೂರು ದಕ್ಷಿಣ - ಒ. ಮಂಜುನಾಥ್, ಬೆಂಗಳೂರು ಪೂರ್ವ - ಡಿ.ಕೆ. ಮೋಹನ್ ಬಾಬು, ಬೆಂಗಳೂರು ಪಶ್ಚಿಮ – ಹನುಮಂತರಾಯಪ್ಪ, ಬೆಂಗಳೂರು ಸೆಂಟ್ರಲ್ - ಜೆ. ಶರವಣನ್, ಬೆಂಗಳೂರು ಗ್ರಾಮಾಂತರ - ಸಿ. ಪ್ರಸನ್ನ ಕುಮಾರ್, ಚಿಕ್ಕೋಡಿ - ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ನಗರ - ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್ (ರಾಜಾಸಲೀಂ), ಬೆಳಗಾವಿ ಗ್ರಾಮಾಂತರ - ಬಸವರಾಜ ಶೆಗಾವಿ, ಬಳ್ಳಾರಿ ನಗರ - ಅಲ್ಲಂ ಪ್ರಶಾಂತ್, ಬಳ್ಳಾರಿ ಗ್ರಾಮಾಂತರ - ಕೆ. ಮಲ್ಲಿಕಾರ್ಜುನ, ಬೀದರ್ - ಅಬ್ದುಲ್ ಮನ್ನಾನ್ ಸೇಛ್. ಚಾಮರಾಜನಗರ - ಜೆ. ಯೋಗೇಶ್, ಚಿಕ್ಕಮಗಳೂರು - ಹೆಚ್.ಪಿ. ಮಂಜೇಗೌಡ, ದಕ್ಷಿಣ ಕನ್ನಡ - ಪದ್ಮರಾಜ್ ಆರ್. ಪೂಜಾರಿ, ದಾವಣಗೆರೆ - ಇಬ್ರಾಹಿಂ ಖಲೀಲುಲ್ಲಾ, ಧಾರವಾಡ ಗ್ರಾಮಾಂತರ - ಚಂದ್ರಶೇಖರ ಜುಟ್ಟಲ್, 

 ಗದಗ - ವಾಸಣ್ಣ ಕುರ್ಡಗಿ,  ಕಲಬುರಗಿ - ಡಾ. ಕಿರಣ್ ಎ. ದೇಶಮುಖ್,  ಹಾಸನ - ಶಶಿಧರ್ ಜಿ.ಬಿ.,  ಹಾವೇರಿ - ಸಂಜೀವ್ ಕುಮಾರ್ ನೀರಲಗಿ,  ಹುಬ್ಬಳ್ಳಿ-ಧಾರವಾಡ ನಗರ - ಸದಾನಂದ ವಿ. ಡಂಗನವರ, ಕೊಡಗು - ಧರ್ಮಜ ಉತ್ತಪ್ಪ, ಕೋಲಾರ - ಎನ್. ನಾರಾಯಣಸ್ವಾಮಿ, ಕೊಪ್ಪಳ - ಎಂ. ಮಲ್ಲಿಕಾರ್ಜುನ ನಾಗಪ್ಪ, ಮಂಡ್ಯ - ಕುಮಾರ್ ಕೊಪ್ಪ, ಮೈಸೂರು ನಗರ - ಆರ್. ಮೂರ್ತಿ, ಮೈಸೂರು ಗ್ರಾಮಾಂತರ - ಬೀರಿ ಹುಂಡಿ ಬಸವಣ್ಣ, ರಾಯಚೂರು - ಕೆ. ಶಾಂತಪ್ಪ ರಾಮನಗರ - ಸಿ.ಎನ್. ವೆಂಕಟೇಶ್, ಶಿವಮೊಗ್ಗ - ಹೆಚ್.ಸಿ. ಯೋಗೇಶ್, ಉಡುಪಿ - ಕಿಶನ್ ಕುಮಾರ್ ಹೆಗ್ಡೆ, ಉತ್ತರ ಕನ್ನಡ - ಗಜಾನನ ತಿಮ್ಮ ನಾಯ್ಕ, ಯಾದಗಿರಿ - ಬಸರೆಡ್ಡಿ ಎಂ. ಪಾಟೀಲ್.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಬಿಡುಗಡೆಲಿಂಗನಹಳ್ಳಿ ಗ್ರಾಮದಲ್ಲಿ ವೀರಗಲ್ಲು, ಮಾಸ್ತಿ ಗಲ್ಲು ಪತ್ತೆಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ:ಕೃಷ್ಣಪ್ಪ ಖ್ಯಾತ ನಟ ರಂಗಾಯಣ ರಘು ಭೇಟಿ: 'ಪ್ರೇಮದ ಊರಲ್ಲಿ' ಸಿನಿಮಾ ವೀಕ್ಷಿಸುವಂತೆ ಆತ್ಮೀಯ ಮನವಿಸೊಂಡೆಕೆರೆ ಗ್ರಾಮದ ಬಸಣ್ಣ ನಿಧನಹಿರಿಯ ಪತ್ರಕರ್ತ ಬಂಡಿಗಡಿ ನಂಜುಂಡಪ್ಪ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪಶ್ರೀರಂಗಪಟ್ಟಣದಿಂದ ಮೈಸೂರಿಗೆ ಬಂದ ದಸರಾ ವೈಭವ:…ಮಳೆಯಿಲ್ಲದೆ ಒಣಗಿದ ಜೋಳದ ಹೊಲ ವೀಕ್ಷಿಸಿದ ನಿಖಿಲ್ ಕುಮಾರಸ್ವಾಮಿ; ​HMT ಕಾರ್ಖಾನೆಯ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ರಣತಂತ್ರ: ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮಾಲೋಚನಾ ಸಭೆ