Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೂರು ಆರೋಪಿಗಳ ಬಂಧನ, 21 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬೃಹತ್ ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸುವಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಯಶಸ್ವಿಯಾಗಿದ್ದಾರೆ. ನಗರಕ್ಕೆ ಅಕ್ರಮವಾಗಿ ಡ್ರಗ್ಸ್ ಸಾಗಿಸುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿರುವ ಅಧಿಕಾರಿಗಳು, ಅವರಿಂದ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಟ್ರಾವೆಲ್ ಬ್ಯಾಗ್‌ನಲ್ಲಿತ್ತು ಕೋಟ್ಯಂತರ ರೂ. ಡ್ರಗ್ಸ್!:
ಖಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ಲಭ್ಯವಾದ ತಕ್ಷಣ ಕಾರ್ಯಾಚರಣೆಗೆ ಇಳಿದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಮೂವರು ವಿದೇಶಿ ಪೆಡ್ಲರ್‌ಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 10 ಕೆಜಿ 270 ಗ್ರಾಂ ತೂಕದ ಎಂಡಿಎಂಎ ಸ್ಫಟಿಕ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಯಾರಿಗೂ ಸಂಶಯ ಬಾರದಂತೆ ಟ್ರಾಲಿ ಬ್ಯಾಗ್‌ಗಳ ಒಳಗೆ ಈ ಡ್ರಗ್ಸ್ ಬಚ್ಚಿಟ್ಟು ಬೆಂಗಳೂರಿಗೆ ತಂದಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ವಾಸವಿದ್ದದ್ದು ಎಲ್ಲಿ?: ಬಂಧಿತ ವಿದೇಶಿ ಪ್ರಜೆಗಳು ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿ ಮತ್ತು ಬೈಲಕೋಣೆನಹಳ್ಳಿಯಲ್ಲಿ ಬಾಡಿಗೆ ಮನೆಗಳನ್ನು ಪಡೆದು ವಾಸಿಸುತ್ತಿದ್ದರು.

ಟಾರ್ಗೆಟ್ ವಿದ್ಯಾರ್ಥಿಗಳು: ಆರೋಪಿಗಳು ನಗರದ ಪ್ರಮುಖ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಗುರಿಯಾಗಿಸಿಕೊಂಡು ಈ ದುಬಾರಿ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ಪೂರೈಸುತ್ತಿದ್ದರು.

ಅಕ್ರಮ ವಾಸ್ತವ್ಯ: ಆರಂಭದಲ್ಲಿ ಪ್ರವಾಸಿ (ಟೂರಿಸ್ಟ್) ವೀಸಾದಡಿ ಭಾರತಕ್ಕೆ ಬಂದಿದ್ದ ಇವರ ವೀಸಾ ಅವಧಿ ಮುಗಿದಿದ್ದರೂ, ಯಾವುದೇ ಕಾನೂನು ಅನುಮತಿಯಿಲ್ಲದೆ ಅಕ್ರಮವಾಗಿ ಬೆಂಗಳೂರಿನಲ್ಲೇ ಉಳಿದುಕೊಂಡು ಈ ದಂಧೆ ನಡೆಸುತ್ತಿದ್ದರು.

ಮುಂದುವರಿದ ಸಿಸಿಬಿ ಬೇಟೆ:
ಸದ್ಯ ಡ್ರಗ್ಸ್ ಜಾಲದ ಪ್ರಮುಖ ಲಿಂಕ್ ಸಿಕ್ಕಿಬಿದ್ದಿದ್ದು, ಇವರಿಂದ ಮಾದಕ ವಸ್ತುಗಳನ್ನು ಖರೀದಿಸುತ್ತಿದ್ದ ಸ್ಥಳೀಯ ಗ್ರಾಹಕರು, ಅವರಿಗೆ ನೆರವು ನೀಡುತ್ತಿದ್ದ ಸ್ಥಳೀಯ ಸಂಪರ್ಕಗಳು ಹಾಗೂ ಈ ಜಾಲದ ಹಿಂದೆ ಅಡಗಿರುವ ಇತರ ಕಿಂಗ್‌ಪಿನ್‌ಗಳ ಪತ್ತೆಗಾಗಿ ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಂಧ್ರ ಗಡಿಭಾಗದ ಹೊಸಕೆರೆ ಪಾಳ್ಯದಲ್ಲಿ ಹನಿ ನೀರಿಗೂ ಹಾಹಾಕಾರ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಾನುವಾರು, ಗ್ರಾಮಸ್ಥರು ಕಂಗಾಲು!ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣವಿದ್ಯಾರ್ಥಿ ಬಸ್‍ಪಾಸ್ ಶುಲ್ಕ ಮರು ಪಾವತಿ: ಅರ್ಜಿ ಆಹ್ವಾನಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಉಚಿತ ಹೃದಯ ತಪಾಸಣೆವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ಜುಲೈ 31 ಕೊನೆಯ ದಿನಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್ ಸರ್ಕಾರಆಕಾಶವಾಣಿ ಕೇಂದ್ರದ ಹಿರಿಯ ತಾಂತ್ರಿಕ ತಜ್ಞ ಎನ್.ಪಿ. ಶಿವಮೂರ್ತಿ ಅವರಿಗೆ ಬಿಳ್ಕೊಡುಗೆಬ್ಯಾಟರಿ ಸ್ಪಾರ್ಕ್ ನಿಂದ ಹೊತ್ತಿ ಉರಿದ ಟಾಟಾ ಸುಮೋಕೆಂಪೇಗೌಡ ಪುತ್ತಳಿ ನಿರ್ಮಾಣ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ- ಪ್ರೇಮ್ ಕುಮಾರ್