LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಲಾವಿದರು ಕುಟುಂಬದ ಆಸ್ತಿಯಾಗಿರದೇ ಸಮಾಜದ ಆಸ್ತಿ ಯಾಗಿದ್ದಾರೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು: 
ಕಲೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಕಲಾವಿದರು ತಮ್ಮ ಕುಟುಂಬಕ್ಕೆ ಆಸ್ತಿಯಾಗಿರದೇ ಸಮಾಜದ ಆಸ್ತಿ ಯಾಗಿದ್ದಾರೆ ಅಂಥವರನ್ನ ಗುರುತಿಸಿ ಗೌರವಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್
.ಜಿ ರಂಗಸ್ವಾಮಿ ಸಕ್ಕರ ಹೇಳಿದರು.      

ಪಟ್ಟಣದ ಕೆ,ಎಂ, ಕೊಟ್ಟಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಗಲು ವೇಷಗಾರರ ಸಾಂಸ್ಕೃತಿಕ ಕಲಾ ಸಂಘ, ಪರಿಶಿಷ್ಟ ಜಾತಿ ಸೇವಾ ಸಮಿತಿ, ಕೆ,ಎಂ, ಕೊಟ್ಟಿಗೆ ,ಇವರುಗಳ ಆಶ್ರಯದಲ್ಲಿ ಆಯೋಜಿಸಿದ್ದ  ಹಗಲು ವೇಷ ಕಲಾ ಸಂಭ್ರಮ ಸಾಂಸ್ಕೃತಿಕ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತೀಕರಣ ನಗರೀಕರಣ  ಆಧುನಿಕರಣದಿಂದ ದೇಶಿಯ ಕಲೆಗಳಿಗೆ ಪೆಟ್ಟು ಬಿದ್ದಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು  ಜಾನಪದ ನೃತ್ಯ ಬೀಸುವ ಕಲ್ಲಿನ ಪದ ಉಯ್ಯಾಲೆ ಪದ ಕೋಲಾಟ  ಭಾವಗೀತೆ ,ಭಕ್ತಿಗೀತೆ, ದಾಸರ ಪದ ಬಯಲಾಟ, ಹಗಲುವೇಷ, ಗೊಂಬೆ ಕುಣಿತ, ತತ್ವಪದ ಗಾಯನ ,ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ,ಕೋಲಾಟ, ಭಜನೆ, ಗೊರವನ ಕುಣಿತ ವೀರಗಾಸೆ ಮುಂತಾದ ಕಲೆಗಳನ್ನು ಪ್ರದರ್ಶನ ಮಾಡುವ ಕಲಾವಿದರನ್ನು ಗುರುತಿಸಿ ಗೌರವಿಸಿ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸಬೇಕು ಆಗ ಯುವ ಜನತೆಯಲ್ಲಿ ಕಲೆಯ ಬಗ್ಗೆ ಆಸಕ್ತಿ ಅಭಿರುಚಿ ಮೂಡುತ್ತದೆ.

ಹಣ ಆಸ್ತಿ ಅಂತಸ್ತು  ಸಿರಿತನ ಇದ್ದವರು ಸಾಧನೆ ಮಾಡುವುದು ಸುಲಭ ,ಆದರೆ ಹಸಿವು ಬಡತನ ಇದ್ದವರು ಸಾಧನೆ ಮಾಡುವುದು ಕಷ್ಟ ಈ ನಿಟ್ಟಿನಲ್ಲಿ ಕಷ್ಟದಲ್ಲಿ ಸಾಧನೆ ಮಾಡಿದ ಕಲಾವಿದರು ಮತ್ತೊಬ್ಬರಿಗೆ ಮಾದರಿಯಾಗಬೇಕು, ಎಂದು ಹೇಳಿದರು. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಖ್ಯ ಶಿಕ್ಷಕಿ ಕೆ, ಎಂ. ರಾಜೇಶ್ವರಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಮೊಳಕಾಲ್ಮೂರು ತಾಲೂಕು, ಕರ್ನಾಟಕ ಜಾನಪದ ಪರಿಷತ್ತು ತಾಲೂಕ ಘಟಕದ ಅಧ್ಯಕ್ಷ ಬಿ ,ಎಸ್, ಮಂಜಣ್ಣ ,ಹಗಲು ವೇಷಗಾರರ ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷರಾದ  ಕೆ.ಎಂ ಗುರುಮೂರ್ತಿ, ಕಾರ್ಯದರ್ಶಿ ಕೃಷ್ಣಪ್ಪ, ಎಸ್. ಶಿವಮೂರ್ತಿ, ಎಂ.ಹೇಮಗಿರಿ, ಎಲೆನ್ ಮೇರಿ, ಕಲಾವಿದರಾದ ಭಿಕ್ಷಾ ಪತಿ ಕೂಡ್ಲಿಗಿ, ದುರ್ಗಾಪ್ರಸಾದ್, ಶಾಂತವೀರಪ್ಪ, ರಾಮಾಂಜನೇಯ, ತಮಟೆ ಚಂದ್ರು, ರಂಗಸ್ವಾಮಿ, ಹನುಮಂತರಾಯ, ಕೆ.ಎಂ ಕೊಟ್ಟಿಗೆ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.

 ಹಗಲು ವೇಷ ಗಾರರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಭೀಮಾಂಜನೇಯ ಯುದ್ದ ಎಂಬ ಕಿರು ನಾಟಕವನ್ನು ಕಲಾವಿದರು ಪ್ರಸ್ತುತಪಡಿಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಲ್ಲುಗುದಿಗೆ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಭಕ್ತಿ ಭಾವದಿಂದ ನಡೆದ ನಾಗ ಪಂಚಮಿ ಆಚರಣೆಬ್ಯಾಂಕ್ ಸರ್ಕಲ್ ಫುಟ್ ಪಾತ್ ಒತ್ತುವರಿ:ಸ್ಥಳೀಯರ ಆಕ್ರೋಶಪೌರಕಾರ್ಮಿಕನ ಪುತ್ರನಿಗೆ ಒಲಿದ ಸಚಿವ ಸ್ಥಾನನರಕಸದೃಶ ಬದುಕು - ಚರಂಡಿ ನೀರೆಲ್ಲಾ ರಸ್ತೆಗೆ!, ಸ್ವಚ್ಛತೆ ಇಲ್ಲದ ಊರು, ರೋಗಗಳ ತವರು!ಆ.22 ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧೆ, ಆ.23ರಂದು ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆಪೋಷಕರ ಸಹಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ : ರೈತ ಮುಖಂಡ ಮಹೇಶ್ವರಪ್ಪಪರಿಸರ ಮತ್ತು ಆಧ್ಯಾತ್ಮದ ಸಮನ್ವಯದ 'ನಾಗರ ಪಂಚಮಿ':ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ 'ಕ್ವಾಂಟಮ್ ಫೌಂಡ್ರಿ' ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಕನ್ನಡಿಗರ ಜೇಬಿಗೆ ಕನ್ನ: ಜೆಡಿಎಸ್ ತೀವ್ರ ಆಕ್ರೋಶ