Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚಿತ್ರದುರ್ಗದಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಕನಿಷ್ಠ 15,000 ಗೌರವಧನಕ್ಕೆ ಆಗ್ರಹ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ
, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಅಕ್ಟೋಬರ್ 5 ರಿಂದ 11ರವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ‘ಪ್ರತಿಭಟನಾ ಸಪ್ತಾಹ’ದ ಅಂಗವಾಗಿ ಸೋಮವಾರ ಚಿತ್ರದುರ್ಗದಲ್ಲಿ ಜಿಲ್ಲಾಮಟ್ಟದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡರು, ಕಳೆದ 9 ವರ್ಷಗಳಿಂದ ಕೇವಲ 1500 ರೂ. ಮಾತ್ರ ಗೌರವಧನ ಹೆಚ್ಚಳವಾಗಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆಲೆ ಏರಿಕೆಗೆ ತಕ್ಕಂತೆ ವೇತನ ಹೆಚ್ಚಾಗದಿರುವುದು ಆಶಾ ಕಾರ್ಯಕರ್ತೆಯರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಬೇಡಿಕೆಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ ಹಾಗೂ ಗೌರವಧನ ಸೇರಿ ಒಟ್ಟು ಮಾಸಿಕ ರೂ. 15,000 ನಿಗದಿಪಡಿಸಬೇಕು.

ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್ ಒದಗಿಸಬೇಕು ಮತ್ತು 'ಸಮಸ್ತ' ಆ್ಯಪ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕು.

ಪ್ರತಿ ತಿಂಗಳು ತಪ್ಪದೆ ಪ್ರೋತ್ಸಾಹಧನ ಮತ್ತು ಗೌರವಧನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರ ಪಿ.ಎಚ್‌.ವಾರ್‌ಕ್ಲೈಮ್‌ಮತ್ತು ರಿಲೀಸ್‌ವಿವರಗಳ ಸಾಫ್ಟ್‌ಕಾಪಿ ನೀಡಬೇಕು.

ಪ್ರತಿಭಟನೆಯ ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆಕಾಶ್ ಅವರಿಗೆ ಹಕ್ಕುಒತ್ತಾಯಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಿಇಒ ಅವರು, ಅಕ್ಟೋಬರ್ 14ರಂದು ಜಿಲ್ಲಾ ಆರೋಗ್ಯಧಿಕಾರಿಗಳು ಹಾಗೂ ಆರ್‌ಸಿಎಚ್‌ಸಮಕ್ಷಮದಲ್ಲಿ ಆಶಾ ಕಾರ್ಯಕರ್ತೆಯರ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಸಭೆ ನಿಗದಿಪಡಿಸುವುದಾಗಿ ಭರವಸೆ ನೀಡಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಲ್ಯಾಣದ ಸಂಕಟದಲ್ಲಿ ಮರಣವೇ ಮಹಾನವಮಿಸಿಜೆಪಿಗೆ ಕಾಂಗ್ರೆಸ್ ನೆರವು: 'ಖಜಾನೆ ಎಟಿಎಂ ಆಯಿತೇ?' - ಆರ್. ಅಶೋಕ್ ತೀವ್ರ ವಾಗ್ದಾಳಿಎ-ಖಾತಾ ಆಸ್ತಿ ಮಾಲೀಕರಿಗೆ ಮನೆಬಾಗಿಲಲ್ಲೇ ಆನ್‌ಲೈನ್ ಮೂಲಕ ಇ-ಖಾತಾ ಪಡೆಯಲು ಅವಕಾಶ!ಗೂಗಲ್ ಮ್ಯಾಪ್ ಹೇಳಿದಂತೆ ಕೇಳಿ ದಾರಿತಪ್ಪಿ ಕಾರು ಸಮೇತ ಕಂದಕಕ್ಕೆ ಬಿದ್ದ ಇನ್ಫೋಸಿಸ್ ಟೆಕ್ಕಿಗಳು!ಲೈಂಗಿಕ ಕಿರುಕುಳ ಆರೋಪ: ತಲೆಮರೆಸಿಕೊಂಡಿದ್ದ ಚರ್ಚ್‌ಪಾದ್ರಿ ಪೋಕ್ಸೋ ಅಡಿಯಲ್ಲಿ ಬಂಧನಹಾರನಕಣಿವೆ ರಂಗನಾಥಸ್ವಾಮಿ ಅಂಬಿನೋತ್ಸವ: ಬುಡಕಟ್ಟು ಸಂಸ್ಕೃತಿ ಮತ್ತು ಪವಾಡದ ಅಪೂರ್ವ ಧಾರ್ಮಿಕ ಸಂಗಮಪ್ರಜ್ಞೆಯ ಜಾಗೃತಿ, ಬದುಕಿನ ಸಂಸ್ಕೃತಿ:ತಂತ್ರಜ್ಞಾನದ ಅತಿರೇಕ -ಸಾಮಾಜಿಕ ಸಾಮರಸ್ಯಕ್ಕೆ ಗಂಡಾಂತರ— ಜಾಗೃತಿ ಅಗತ್ಯಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಆಯುಧ ಪೂಜೆ